dhruva pogaru ಧ್ರುವನ ಪೊಗರು ಕಣ್ತುಂಬಿಕೊಂಡ 73 ಲಕ್ಷ ಮಂದಿ!

dhruva pogaru
dhruva starer pogaru

dhruva pogaru ಮಾತಿನ ಟ್ರೇಲರ್‌: ಒಂದೇ ದಿನದಲ್ಲಿ ದಾಖಲೆಯ ವೀಕ್ಷಣೆ

ಬೆಂಗಳೂರು: ಆ್ಯಕ್ಷನ್​ ಪ್ರಿನ್ಸ್​ ಧ್ರುವ ಸರ್ಜಾ ಅವರು ಭಾರೀ ನಿರೀಕ್ಷೆಯ ಪೊಗರು ( dhruva pogaru ) ಚಿತ್ರದ ಮಾತಿನ ಟ್ರೇಲರ್‌ಗೇ ಅಭಿಮಾನಿಗಳು ಫಿದಾ ಆಗಿದ್ದಾರೆ. ಡಯಲಾಗ್ ಟೀಸರ್‍ ಬಿಡುಗಡೆಯಾದ 24 ಗಂಟೆಗಳಲ್ಲಿ 73 ಲಕ್ಷ ಅಭಿಮಾನಿಗಳು ಧ್ರುವ ಪಗರನ್ನು ಕಣ್ತುಂಬಿಕೊಂಡಿದ್ದಾರೆ.

ಇದನ್ನೂ ಓದಿ: ದರ್ಶನ್ ‘ಒಡೆಯ’ ಚಿತ್ರೀಕರಣ ಫಿನಿಶ್, ಡಿಸೆಂಬರ್‌ನಲ್ಲಿ ತೆರೆಗೆ

ಅಭಿಮಾನಿಗಳ ಒತ್ತಾಯದ ಕಾರಣ ಚಿತ್ರ ತಂಡವು ಪೊಗರು ಸಿನಿಮಾದ ಡೈಲಾಗ್ ಟ್ರೈಲರ್’ ಅನ್ನು ಗುರುವಾರ ಬಿಡುಗಡೆ ಮಾಡಲಾಗಿತ್ತು. ತಮ್ಮದೇ ವಿಭಿನ್ನ ಶೈಲಿಯ ಡಯಲಾಗುಗಳಿಂದ ಈಗಾಗಲೇ ಹವಾ ಸೃಷ್ಟಿಸಿರುವ ಧ್ರುವ ಸರ್ಜಾ ಈ ಚಿತ್ರದ ಮೂಲಕ ಅದನ್ನು ಇನ್ನೊಂದು ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದಾರೆ.

ನಂದ ಕಿಶೋರ್ ನಿರ್ದೇಶನದ ಪೊಗರು ಸಿನಿಮಾದಲ್ಲಿ ಧ್ರುವ ಅವರ ಲುಕ್ ನೋಡಿದರೆ ಚಿತ್ರದಲ್ಲಿ ಭರ್ಜರಿ ಸಾಹಸ ದೃಶ್ಯಗಳಿರುವುದು ಪಕ್ಕಾ ಎಂದು ಹೇಳಲಾಗಿದೆ. ಇನ್ನು ರಶ್ಮಿಕಾ ಮಂದಣ್ಣ ಈ ಚಿತ್ರದಲ್ಲಿ ಧ್ರವನ ನಾಯಕಿಯಾಗಿ ಮಿಂಚಿದ್ದಾರೆ.

ಮಾತೃ ಭಾಷೆ ಬಿಟ್ಟವರು ಮೂರು ಬಿಟ್ಟವರಿಗಿಂತ ಮೂರ್ಖರು ಎಂದು ರಶ್ಮಿಕಾ ಮಂದಣ್ಣ ಪಾತ್ರಕ್ಕೆ ಧ್ರುವ ಬುದ್ಧಿವಾದ ಹೇಳುವ ಡಯಲಾಗಂತೂ ಅಭಿಮಾನಿಗಳನ್ನು ತೀವ್ರವಾಗಿ ಆಕರ್ಷಿಸಿದೆ. ಸಿನಿಮಾದಲ್ಲಿ wwe ಸ್ಟಾರ್ ಕಾಯ್ ಗ್ರೀನ್ ಹಾಗೂ ಬಾಡಿಬಿಲ್ಡಿಂಗ್ ಪ್ರಪಂಚದ ದೈತ್ಯ ಮಾರ್ಗನ್ ಅಸ್ಟೇ ಜತೆ ಧ್ರುವ ಕೈ ಮಿಲಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...