devdut padikkal ಕರ್ನಾಟಕ ಕ್ರಿಕೆಟ್‌ನ ಹೊಸ ಮುತ್ತು, ದೇವದತ್ ಪಡಿಕ್ಕಲ್

devdut padikkal
young prodigy devdutt

devdut padikkal ಮುಷ್ತಾಕ್ ಅಲಿ ಟೂರ್ನಿಯಲ್ಲಿ ಮಿಂಚು ಹರಿಸಿದ ದೇವದತ್

ಬೆಂಗಳೂರು: ಕರ್ನಾಟಕದ ಕ್ರಿಕೆಟ್ ಕಣಜ ಸಮೃದ್ಧವಾಗಿದೆ ಎಂಬುದಕ್ಕೆ ( devdut padikkal ) ತಾಜಾ ಉದಾಹರಣೆ ದೇವದತ್ ಪಡಿಕ್ಕಲ್. ಕೇವಲ ಒಂದು ವರ್ಷದ ಹಿಂದೆ ರಾಜ್ಯ ತಂಡ ಪ್ರವೇಶಿಸಲು ಹೆಣಗುತ್ತಿದ್ದ ಈ ಎಡಗೈ ಆರಂಭಿಕ ಆಟಗಾರ ಈಗ ತಂಡದ ಕಾಯಂ ಆರಂಭಿಕನ ಸ್ಥಾನಕ್ಕೆ ಕರ್ಚೀಪು ಹಾಕಿದ್ದಾನೆ.

ಇದನ್ನೂ ಓದಿ: ಕ್ರಿಕೆಟ್: ನಾಯಕ ಮನೀಶ್ ಮಿಂಚು: ಕರ್ನಾಟಕ ಚಾಂಪಿಯನ್

ರಣಜಿ ಪಂದ್ಯಗಳಲ್ಲಿ ಸತತ ಪಂದ್ಯಗಳನ್ನು ಆಡಲು ದೇವದತ್‌ಗೆ ಅವಕಾಶ ಸಿಗಲಿಲ್ಲ. ಆದರೆ ರಣಜಿ ನಂತರ 50 ಓವರುಗಳ ವಿಜಯ್ ಹಜಾರೆ ಟ್ರೋಫಿ ಹಾಗೂ ಭಾನುವಾರ ಮುಕ್ತಾಯವಾದ ಸಯದ್ ಮುಷ್ತಾಕ್ ಅಲಿ ಟಿ-20 ಪಂದ್ಯಾವಲಳಿಯಲ್ಲಿ ದೇವದತ್ ಪ್ರತಿಭೆಯ ಅನಾವರಣವಾಗಿದೆ.

ಈತನ ಆಟವನ್ನು ಸಮೀಪದಿಂದ ಬಲ್ಲವರು ಸ್ಟಾರ್‍ ಆಟಗಾರನಾಗುವ ಎಲ್ಲ ಲಕ್ಷಣಗಳೂ ಈಗಲೇ ಆತನಿಗಿವೆ ಎಂದು ಭವಿಷ್ಯ ನುಡಿದಿದ್ದಾರೆ. ಭಾರತ ಕಿರಿಯರ ತಂಡದ ಪರವಾಗಿಯೂ ಉತ್ತಮ ಪ್ರದರ್ಶನ ನೀಡಿರುವ ದೇವದತ್‌ ಪ್ರಸಕ್ತ ಸಾಲಿನಲ್ಲಿ ಕೇವಲ ಈ ಎರಡನೇ ಟೂರ್ನಿಗಳಿಮದ ಸಾವಿರ ರನ್ ಕಲೆ ಹಾಕಿದ್ದಾರೆ.

ರಾಯಲ್ ಚಾಲೆಂಜರ್ಸ್‌ ತಂಡದಲ್ಲಿ ನಾಯಕ ವಿರಾಟ್ ಕೊಹ್ಲಿ ಗಮನ ಸೆಳೆದಿರುವ ದೇವದತ್ ವಿಜರ್‍ ಹಜಾರೆ ಟ್ರೋಫಿಯಲ್ಲಿ 600ಕ್ಕೂ ಹೆಚ್ಚು ರನ್ ಕಲೆ ಹಾಕಿದರೆ ಮುಷ್ತಾಕ್ ಅಲಿ ಪಂದ್ಯಾವಳಿಯಲ್ಲಿ 500ಕ್ಕೂ ಹೆಚ್ಚ ರನ್ ಗಳಿಸಿ ತಮ್ಮ ಆಗಮನವನ್ನು ಜಗಜ್ಜಾಹೀರು ಮಾಡಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸುವ ಹೆಬ್ಬಯಕೆ ಹೊಂದಿರುವ ದೇವದತ್ ಇದೇ ರೀತಿ ಮುನ್ನಡೆದರೇ ಆತನ ಕನಸು ನನಸಾಗುವ ದಿನ ದೂರವಿಲ್ಲ ಎಂದೇ ಹೇಳಬಹುದು.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...