delhi t20 ದಿಲ್ಲಿ ಕೋಟೆ ಗೆದ್ದ ಬಾಂಗ್ಲಾ: ಭಾರತ 148, ಬಾಂಗ್ಲಾ 154

delhi t20
bangladesh batsmen in action

delhi t20 ಜೈಟ್ಲಿ ಮೈದಾನದಲ್ಲಿ ರೋಹಿತ್ ಪಡೆಗೆ ಸೋಲುಣಿಸಿದ ಬಾಂಗ್ಲಾದೇಶ 

ಹೊಸದಿಲ್ಲಿ: ದಟ್ ಹೊಗೆಮಂಜಿನ ನಡುವೆಯೇ ನಡೆದ ( delhi t20) ಮೊದಲ ಟಿ-20 ಪಂದ್ಯದಲ್ಲಿ ಭಾರತವನ್ನು 7 ವಿಕೆಟ್ಟುಗಳಿಂದ ಬಗ್ಗುಬಡಿಯುವಲ್ಲಿ ಬಾಂಗ್ಲಾದೇಶವು ಯಶಸ್ವಿಯಾಗಿದೆ.

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡುವ ನಿರ್ಧಾರ ಮಾಡಿದ ಭಾರತ ತನ್ನ ನಿಗದಿತ 20 ಓವರುಗಳಲ್ಲಿ 6 ವಿಕೆಟ್ ಕಳೆದುಕೊಂಡು 148 ರನ್ ಮಾತ್ರ ಗಳಿಸಿತು. ಉತ್ತರವಾಗಿ ಬಾಂಗ್ಲಾದೇಶವು ಇನ್ನೂ ಮೂರು ಎಸೆತ ಇರುವಂತೆಯೇ ಕೇವಲ 3 ವಿಕೆಟ್ ಕಳೆದುಕೊಂಡು 154 ರನ್ ಗಳಿಸುವ ಮೂಲಕ ಜಯಶಾಲಿಯಾಗಿದೆ.

ಬಾಂಗ್ಲಾದೇಶದ ಈ ಜಯದಲ್ಲಿ ಪ್ರಧಾನ ಪಾತ್ರ ವಸಹಿಸಿದ ಮಾಜಿ ನಾಯಕ ಮುಷ್ಫಿಕರ್ ರೆಹಮಾನ್ (60)  ತಮ್ಮ ತಂಡಕ್ಕೆ ಟಿ-20 ಮಾದರಿಯಲ್ಲಿ ಭಾರತದ ವಿರುದ್ಧ ಚೊಚ್ಚಲ ಜಯ ದೊರಕಿಸಿಕೊಟ್ಟರು. ಈ ಅದ್ಭುತ ಸಾಧನೆಗೆ ಮುಷ್ಫಿಕರ್ ರೆಹಮಾನ್ ಅವರಿಗೆ ಪಂದ್ಯ ಪುರುಷ ಗೌರವವೂ ಸಂದಾಯವಾಯಿತು.

ಇದನ್ನೂ ಓದಿ: ಬಾಂಗ್ಲಾ ಟಿ-20 ಸರಣಿಯಿಂದ ಕೊಹ್ಲಿಗೆ ವಿರಾಮ

ಇದಕ್ಕೆ ಮುನ್ನ ಮೊದಲು ಬ್ಯಾಟ್ ಮಾಡಿದ ಭಾರತ ತಂಡವು ಮೊದಲ ಓವರಿನಲ್ಲಿಯೇ ನಾಯಕ ರೋಹಿತ್ ಶರ್ಮಾ ವಿಕೆಟ್ ಕಳೆದುಕೊಂಡ ಭಾರತ ಇಬ್ಬಗೆಯ ಪುಟಿತ ಇದ್ದ ಪಿಚ್‌ನಲ್ಲಿ ಭಾರೀ ಮೊತ್ತ ಪೇರಿಸುವಲ್ಲಿ ವಿಫಲವಾಯಿತು. ಆರಂಭಿಕ ಶಿಖರ್‍ ಧವನ್ 41 ರನ್ ಮಾಡಿ ತಂಡವನ್ನು ದೊಡ್ಡ ಮೊತ್ತದೆಡೆಗೆ ಕರೆದೊಯ್ಯುವ ಆಸೆ ಮೂಡಿಸಿದ್ದರಾದರೂ ರನೌಟಾಗಿ ಹೊರನಡೆದರು.

ಬಹಳ ಸಮಯದ ನಂತರ ರಾಷ್ಟ್ರೀತ ತಂಡದಲ್ಲಿ ಆಡುವ ಅವಕಾಶ ಗಿಟ್ಟಿಸಿದ ಕೆಎಲ್ ರಾಹುಲ್ ಅದರ ಸದುಪಯೋಗ ಪಡಿಸಿಕೊಳ್ಳುವಲ್ಲಿ ವಿಫಲರಾಗಿ ಕೇವಲ 15 ರನ್‌ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಆಕ್ರಮಣಕಾರಿಯಾಗಿ ಆಡಿದ ಶ್ರೇಯಸ್ ಅಯ್ಯರ್‍ (22) ಸಹ ದೀರ್ಘ ಕಾಲ ಕ್ರೀಸ್‌ನಲ್ಲಿ ಉಳಿಯಲಿಲ್ಲ. ಉಳಿದಂತೆ ರಿಶಬ್ ಪಂತ್ 27 ರನ್ ಗಳಿಸಿ ಔಟಾದರು.

ಭಾರತದ ಖ್ಯಾತನಾಮ ಆಟಗಾರರನ್ನು ಹಿಡಿತದಲ್ಲಿಟ್ಟ ಬಾಂಗ್ಲಾದೇಶ ಬೌಲರುಗಳ ಪೈಕಿ ಅಮಿನುಲ್ ಇಸ್ಲಾಮ್ ಹಾಗೂ ಶಫಿಯುಲ್ ಇಸ್ಲಾಮ್ ತಲಾ ಎರಡು ವಿಕೆಟ್ ಪಡೆದರು.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...