delhi polls ಫೆ.8ಕ್ಕೆ ದಿಲ್ಲಿ ದಂಗಲ್, 11ಕ್ಕೆ ಫಲಿತಾಂಶ

delhi polls

delhi polls 70 ಸ್ಥಾನಗಳಿಗೆ ಒಂದೇ ಹಂತದ ಚುನಾವಣೆ

ಹೊಸದಿಲ್ಲಿ: ರಾಜಕೀಯವಾಗಿ ಸಾಕಷ್ಟು ಕುತೂಹಲ ಕೆರಳಿಸಿರುವ ( delhi polls ) ರಾಜಧಾನಿ ದಿಲ್ಲಿ ವಿಧಾನಸಭಾ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಕೇಂದ್ರ ಚುನಾವಣಾ ಆಯೋಗ ದಿಲ್ಲಿ ವಿಧಾನಸಭೆಗೆ ಚುನಾವಣಾ ದಿನಾಂಕ ಪ್ರಕಟಿಸಿದೆ.

ಇದನ್ನೂ ಓದಿ: 50 ಸಾವಿರದತ್ತ ತೊಲ ಬಂಗಾರ, ಶತಕ ಬಾರಿಸಲಿದೆಯಾ ಪೆಟ್ರೋಲ್ ದರ?

ದಿಲ್ಲಿ ವಿಧಾನಸಭೆಯ ಎಲ್ಲ 70 ಸ್ಥಾನಗಳಿಗೆ ಒಂದೇ ಹಂತದಲ್ಲಿ ಫೆಬ್ರುವರಿ 8ರಂದು ಚುನಾವಣೆ ನಡೆಯಲಿದ್ದು, ಎರಡು ದಿನಗಳ ನಂತರ ಅಂದರೆ ಫೆ. 11ಕ್ಕೆ ಮತ ಎಣಿಕೆ ಕಾರ್‍ಯ ನಡೆಯಲಿದೆ ಎಂದು ಕೇಂದ್ರೀಯ ಚುನಾವಣಾ ಆಯೋಗ ಸೋಮವಾರ ಘೋಷಿಸಿದೆ.

ಕಳೆದ ಚುನಾವಣೆಯಲ್ಲಿ ಅರವಿಂದ ಕೇಜ್ರಿವಾಲ್ ಅವರ ಆಮ್‌ ಆದ್ಮಿ ಪಕ್ಷವು 70 ಸ್ಥಾನಗಳ ಪೈಕಿ 67 ಸ್ಥಾನಗಳಲ್ಲಿ ಗೆಲುವು ಸಾಧಿಸಿ ದಾಖಲೆ ಬರೆದಿತ್ತು. ಉಳಿದ ಮೂರು ಸ್ಥಾಣ ಬಿಜೆಪಿ ಪಾಲಾದರೇ, ಕಾಂಗ್ರೆಸ್ ಶೂನ್ಯ ಸಂಪಾದನೆ ಮಾಡಿತ್ತು.

ಈ ಬಾರಿಯೂ ಆಪ್ ಮತ್ತು ಬಿಜೆಪಿ ನಡುವೆ ಹಣಾಹಣಿ ಏರ್ಪಟ್ಟಿದ್ದು, ಉಭಯ ಪಕ್ಷಗಳೂ ಜನಮತ ಗಿಟ್ಟಿಸಲು ಭಾರೀ ಕಸರತ್ತು ನಡೆಸಿವೆ. ಕಳೆದ ಲೋಕಸಭಾ ಚುಣಾವಣೆಯಲ್ಲಿ ಮತಗಳಿಕೆಯ ಪ್ರಮಾಣ ಹೆಚ್ಚಿಸಕೊಂಡಿರುವ ಕಾಂಗ್ರೆಸ್ ಪಕ್ಷವು ಈ ಬಾರಿ ಮುಂಚೂಣಿಯಲ್ಲಿರುವ ಪಕ್ಷಗಳಿಗೆ ಪೈಪೊಟಿ ನೀಡುವ ಹುಮ್ಮಸ್ಸಿನಲ್ಲಿದೆ.

ದಿಲ್ಲಿಯ ಹಾಲಿ ವಿಧಾನಸಭೆಯ ಅವಧಿ ಫೆಬ್ರವರಿ 22ಕ್ಕೆ ಅಂತ್ಯವಾಗಲಿದೆ. ಈ ಚುನಾವಣೆಯಲ್ಲಿ 1,46,92,136 ಮತದಾರರು ಹಕ್ಕು ಚಲಾಯಿಸುವ ನಿರೀಕ್ಷೆ ಇದೆ. ಸುಸೂತ್ರ ಮತದಾನಕ್ಕೆ ಅನುವು ಮಾಡಿಕೊಡಲು ಈ ಬಾರಿ 13,750 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದ್ದು, 90 ಸಾವಿರ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗುತ್ತದೆ ಎಂದು ಸಿಇಸಿ ಸುನಿಲ್ ಅರೋರಾ ಹೇಳಿದರು.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...