defectors dejected ಮಂತ್ರಿಗಿರಿ ಮರೀಚಿಕೆ: ಗೆದ್ದ ಅನರ್ಹರ ಚಡಪಡಿಕೆ

defectors dejected
bc patil, ramesh jarkiholi, byrathi basavaraj and sudhakar

defectors dejected ಬೆಂಕಿಯಿಂದ ಬಾಣಲೆಗೆ ಎಂಬ ಸ್ಥಿತಿಯಲ್ಲಿ ಗೆದ್ದ ಅನರ್ಹರು

ಬೆಂಗಳೂರು: ಮಾತೃ ಪಕ್ಷವನ್ನು ತೊರೆದು ಸರಕಾರವನ್ನು ಬೀಳಿಸಿ ( defectors dejected ) ಸಚಿವರಾಗುವ ಕನಸಿನೊಂದಿಗೆ ಬಿಜೆಪಿ ಸೇರಿ ಉಪಸಮರ ಗೆದ್ದರೂ ಸಹ ಪಕ್ಷಾಂತರಿ ಶಾಸಕರಿಗೆ ಮಂತ್ರಿಗಿರಿ ಇನ್ನೂ ಮರಿಚಿಕೆಯೇ ಉಳಿದಿದ್ದು, ಅವರಲ್ಲಿ ಚಡಪಡಿಕೆ ಹೆಚ್ಚಿಸಿದೆ.

ಇದನ್ನೂ ಓದಿ: ಯಡಿಯೂರಪ್ಪ ಸಂಪುಟದಿಂದ 5 ಸಚಿವರಿಗೆ ಕೊಕ್, ಎಲ್ಲ ಪಕ್ಷಾಂತರಿಗಳಿಗೂ ಮಣೆ

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ದಿಲ್ಲಿ ಬಾಗಿಲ್ ಬಂದ್ ಆದ ಸುದ್ದಿ ತಿಳಿದ ಮೇಲಂತೂ ಈ ಪಕ್ಷಾಂತರಿಗಳ ಸ್ಥಿತಿ ಬೆಂಕಿಯಿಂದ ಬಾಣಲೆಗೆ ಬಿದ್ದಂತಾಗಿದೆ. ಸೊಂಪಟು ವಿಸ್ತರಣೆ ಯಾವಾಗ ಆಗುತ್ತದೆ ಎಂಬುದೇ ತಿಳಿಯದೇ ಅವರು ಒದ್ದಾಡುವಂತಾಗಿದೆ.

ಮಂತ್ರಿ ಮಂಡಲ ವಿಸ್ತರಣೆ ಸಂಬಂಧ ದಿಲ್ಲಿಗೆ ಬರುವ ಅಗತ್ಯವಿಲ್ಲ ಎಂದು ಬಿಜೆಪಿಯ ದಿಲ್ಲಿ ಪ್ರಭುಗಳು ಯಡಿಯೂರಪ್ಪನವರಿಗೆ ಹೇಳಿದ್ದು, ಈ ಕಾರಣ ಅವರ ದಿಲ್ಲಿ ಭೇಟಿಗೆ ಬ್ರೇಕ್ ಬಿದ್ದಿದೆ. ಒಂದು ವೇಳೆ ಅವಕಾಶ ಸಿಕ್ಕಿದ್ದರೇ ವರಿಷ್ಠರೊಂದಿಗೆ ಚರ್ಚಿಸಿ ಸಂಕ್ರಾಂತಿ ನಂತರ ವಿಸ್ತರಣೆ ಮಾಡಲು ಬಿಎಸವೈ ಯೋಜಿಸಿದ್ದರು.

ಆದರೆ ಈಗ ಪಕ್ಷದ ಅಧ್ಯಕ್ಷ ಅಮಿತ್ ಶಾ 18ರಂದು ರಾಜ್ಯಕ್ಕೆ ಆಗಮಿಸುವ ತನಕ ಈ ಪ್ರಕ್ರಿಯೆಗೆ ವಿರಾಮ ಬಿದ್ದಿದೆ. ಸಂಕ್ರಾಂತಿ ಬಳಿಕವಾದರೂ ಮಂತ್ರಿ ಕುರ್ಚಿ ದಕ್ಕುತ್ತದೆ ಎಂಬ ಪಕ್ಷಾಂತರಿಗಳ ಮಹದಾಸೆಗೂ ಸದ್ಯದ ಮಟ್ಟಿಗೆ ತಣ್ಣೀರು ಬಿದ್ದಿದೆ.

ಇದೆಲ್ಲದರ ನಡುವೆ ಯಡಿಯೂರಪ್ಪ ಮಂತ್ರಿಮಂಡಲದ ಎಲ್ಲ ಸಚಿವರ ಕಾರ್‍ಯ ವರದಿ ನೀಡುವಂತೆ ಹೈಕಮಾಂಡ್ ಸೂಚಿಸಿದೆ ಎಂಬ ವರದಿಗಳಿದ್ದು ಅದು ಹಾಲಿ ಮಂತ್ರಿಗಳನ್ನೂ ಚಿಂತೆಗೆ ಈಡುಮಾಡಿದೆ. ಈ ಸೂಚನೆಯನ್ನು ಗಮನಿಸಿದರೆ ಬಿಎಸ್ವೈ ಸಂಪುಟದ ರೂಪುರೇಷೆ ದಿಲ್ಲಿಯಿಂದಲೇ ನಿಶ್ಕರ್ಷೆಯಾಗುವ ಲಕ್ಷಣಗಳು ಗೋಚರಿಸಿವೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...