deepika ಫೊಟೋ ಶೂಟ್‌ನಲ್ಲಿ ದೀಪಿಕಾ ಲಕಲಕ

deepika
deepika in vogue photo shoot

deepika ನಿಯತಕಾಲಿಕಕ್ಕೆ ಪೋಸ್ ನೀಡಿದ ಬೆಂಗ್ಳೂರಿನ ಚೆಲ್ವಿ

ಮುಂಬೈ: ದಶಕದ ಹಿಂದೆ ಹಿಂದಿ ಚಿತ್ರರಂಗಕ್ಕೆ ಬಿರುಗಾಳಿಯಂತೆ ( deepika ) ಪ್ರವೇಶಿಸಿದ ಬೆಂಗಳೂರಿನ ಬಾಲೆ ದೀಪಿಕಾ ಪಡುಕೋಣೆ ಇಂದು ಅತ್ಯಂತ ಬೇಡಿಕೆಯ, ಅಪಾರ ಜನಪ್ರಿಯತೆಯ ತಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಇದನ್ನೂ ಓದಿ: ದಶಕದ ನಂತರ ಪತಿಯಿಂದ ಬೇರ್ಪಟ್ಟ ನಟಿ

ತನ್ನ ಸಹಜ ಸೌಂದರ್ಯದಿಂದಲೇ ಪ್ರೇಕ್ಷಕರನ್ನು ಸೂಜಿಗಲ್ಲಿನಂತೆ ಸೆಳೆಯುವ ಈ ಸ್ನಿಗ್ದ ಸುಂದರಿ ಅಂದಗಾಣಲು ಮೇಕಪ್‌ ಅನ್ನೇ ನಂಬಿಕೊಂಡಿಲ್ಲ. ಮೇಕಪ್ ಇರಲಿ, ಇಲ್ಲದಿರಲಿ ದೀಪಿಕಾಶ ಮೋಹಕತೆಗೆ ಯಾವುದೇ ಕುಂದು ಬರುವುದಿಲ್ಲ. ಅಂತಹ ಸಹಜ ಸುಂದರಿ ಈಕೆ.

ರನವೀರ್‍ ಸಿಂಗ್‌ ಜೊತೆ ದಾಂಪತ್ಯಕ್ಕೆ ಕಾಲಿಟ್ಟು ಸರಿಸುಮಾರು ವರ್ಷ ಕಳೆದಿರುವ ಸಂದರ್ಭದಲ್ಲಿ ದೀಪಿಕಾ ವೋಗ್ ನಿಯಕಾಲಿಕಕ್ಕೆ ಮಾಡಿರುವ ಫೋಟೋಶೂಟ್ ಈಗ ಹಾಟ್ ಟಾಕ್ ಆಗಿದೆ.

ದೀಪಿಕಾ ಪಡುಕೋಣೆ ಆರೋಗ್ಯಕರ ಹಾಗೂ ಸುಂದರವಾಗಿ ತ್ವಚೆಗೆ ಹೆಸರಾದ ನಟಿ. ಇಂತಹ ಸಹಜ ಸೌಂದರ್ಯವತಿ ದೀಪಿಕಾ ಈಗ ಮೇಕಪ್​ ಇಲ್ಲದೆಯೇ ಯಾವುದೇ ಫಿಲ್ಟರ್​ ಇಲ್ಲದ ಸಹಜ ಲೈಟಿಂಗ್​ನಲ್ಲಿ ತೆಗೆಯಲಾಗಿರುವ ಫೋಟೋಶೂಟ್​ಗೆ ಪೋಸ್​ ಕೊಟ್ಟಿದ್ದಾರೆ.

ಮೇಕಪ್ ಇಲ್ಲದೇ ತನ್ನ ನೈಜ ಸೌಂದರ್ಯವನ್ನು, ಮೋಹಕ ಚೆಲುವನ್ನು ದೀಪಿಕಾ ಕ್ಯಾಮೆರಾ ಮುಂದೆ ಲಕಲಕ ಹೊಳೆಯುತ್ತಿರುವುದನ್ನು ಕಾಣಬಹುದಾಗಿದೆ.

deepika deepika deepika deepika

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...