death warrant ನಿರ್ಭಯಾ ಹತ್ಯಾಚಾರಿಗಳಿಗೆ ಡೆತ್ ವಾರೆಟ್ ಜಾರಿ, 22ರಂದು ಗಲ್ಲು

sc dismisses
nirbhaya case convicts

death warrant ನಿರ್ಭಯಾ ಹಂತಕರಿಗೆ ಡೆತ್ ವಾರೆಂಟ್ ಜಾರಿ ಮಾಡಿದ ದಿಲ್ಲಿ ಕೋರ್ಟು

ಹೊಸದಿಲ್ಲಿ: ದೇಶವನ್ನೇ ಬೆಚ್ಚಿಬೀಳಿಸಿದ್ದ ನಿರ್ಭಯಾ ಹತ್ಯಾಚಾರದ ( death warrant ) ಆರೋಪಿಗಳಿಗೆ ನೇಣು ಕುಣಿಕೆ ಮತ್ತಷ್ಟು ಹತ್ತಿರವಾಗಿದೆ. ಎಲ್ಲ ಆರಫಿಗಳಿಗೆ ದಿಲ್ಲಿ ಕೋರ್ಟು ಡೆತ್ ವಾರೆಂಟ್ ಜಾರಿ ಮಾಡಿದೆ.

ಇದನ್ನೂ ಓದಿ: ಭಾರತ್ ಬಂದ್‌: ಶಾಲಾ-ಕಾಲೇಜಿಗಿಲ್ಲ ರಜೆ; ಹೋಟೆಲ್, ಸರಕಾರಿ ಕಚೇರಿ ಓಪನ್

ಆರೋಪಿಗಳ ಕ್ಷಮಾದಾನವನ್ನು ಸುಪ್ರಿಂ ಕೋರ್ಟು ನಿರಾಕರಿಸಿದ ನಂತರ ನಿರ್ಭಯಾ ಪೋಷಕರು ಆರೋಪಿಗಳನ್ನು ಗಲ್ಲಿಗೇರಿಸಲು ಡೆತ್ ವಾರೆಂಟ್ ನಿಡುವಂತೆ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು. ಆ ಮನವಿ ವಿಚಾರಣೆ ನಡೆಸಿದ ಕೊರ್ಟು ಮಹತ್ವದ ಆದೇಶ ನೀಡಿದೆ.

ಅಪರಾಧಿಗಳಿಗೆ ಎಲ್ಲ ಕಾನೂನು ಮಾರ್ಗಗಳು ಬಮದಾಗಿರುವ ಹಿನ್ನೆಲೆಯಲ್ಲಿ ಡೆತ್ ವಾರೆಂಟ್ ಜಾರಿ ಮಾಡುವಂತೆ ನಿರ್ಭಯಾ ಪೋಷಕರ ಪರ ವಕೀಲರು ನ್ಯಾಯಾಧೀಶರಲ್ಲಿ ಮನವಿ ಮಾಡಿಕೊಂಡರು. ಈ ಮಧ್ಯೆ ತಮ್ಮ ವಿರುದ್ಧ ತೀರ್ಪಿನ ಬಗ್ಗೆ ಪರಿಶೀಲನಾ ಅರ್ಜಿ ಸಲ್ಲಿಸುವ ಪ್ರಕ್ರಿಯೆ ನಡೆದಿದೆ ಎಂದು ಆರೋಪಿಗಳ ಪರ ವಕೀಲರು ಪ್ರತಿ ವಾದ ಂಆಡಿದರು.

ಹತ್ಯಾಚಾರ ಪ್ರಕರಣದ ಅಪರಾಧಿಗಳಾದ ಮುಕೇಶ್, ವಿನಯ್, ಅಕ್ಷಯ್ ಮತ್ತು ಪವನ್ ಸಲ್ಲಿಸಿದ್ದ ಪುನರ್ ಪರಿಶೀಲನಾ ಅರ್ಜಿಗಳನ್ನು ನ್ಯಾಯಾಲಯ ಈಗಾಗಲೇ ವಜಾಗೊಳಿಸಿದೆ. 2012ರ ಡಿಸೆಂಬರ್ 16ರಂದು ನಿರ್ಭಯಾಳ ಮೇಲೆ ಆರು ಮಂದಿ ಬಸ್ಸಿನಲ್ಲಿ ಅತ್ಯಾಚಾರವೆಸಗಿ ನಂತರ ಭೀಕರವಾಗಿ ಹತ್ಯೆಗೈದಿದ್ದರು.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...