dasara19 ದಸರಾ: ಮಾವುತ, ಕಾವಾಡಿಗರಿಗೆ ವಿಶೇಷ ಉಪಚಾರ

dasara19
housing minister somanna distibuting food

dasara19 ಸಚಿವ ಸೋಮಣ್ಣ ಪ್ರತಿಷ್ಠಾನದಿಂದ ಮಾವುತರಿಗೆ ಉಡುಗೊರೆ

ಮೈಸೂರು: ವಿಶ್ವವಿಖ್ಯಾತ ನಾಡ ಹಬ್ಬಮೈಸೂರು ದಸರಾ ಹಿನ್ನಲೆಯಲ್ಲಿ ಮಂಗಳವಾರ ( dasara19 ) ಅರಮನೆ ಆವರಣದಲ್ಲಿ ಆಯೋಜಿಸಲಾಗಿದ್ದ ಗಜಪಡೆ ಮಾವುತರು ಮತ್ತು ಕಾವಾಡಿ ಕುಟುಂಬಗಳಿಗೆ ಬೆಳಗಿನ ಉಪಹಾರ ಕೂಟಕ್ಕೆ ವಸತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ಚಾಲನೆ ನೀಡಿದರು.

ಇದನ್ನೂ ಓದಿ: ಮಾಜಿ ಐಎಎಸ್ ಸೆಂದಿಲ್‌ ಬೆನ್ನಿಗೆ ಬಿದ್ದ ಬಿಜೆಪಿ ನಾಯಕರು

ಮಾವುತರಿಗೆ ಸಚಿವರೆ ಒಬ್ಬಟ್ಟು, ತಟ್ಟೆ ಇಡ್ಲಿ, ಸಾಂಬಾರ್, ಉದ್ದಿನವಡೆ, ಖಾರ ಪೊಂಗಲ್, ಉಪ್ಪಿಟ್ಟು ಉಪಹಾರ ಬಡಿಸಿ ಅವರೊಂದಿಗೆ ಕುಳಿತು ಉಪಹಾರ ಸೇವನೆ ಮಾಡಿದರು.

ಇದೇ ಸಂದರ್ಭದಲ್ಲಿ ಪ್ರವಾಸೋದ್ಯಮ ಸಚಿವರಾದ ಸಿಟಿ ರವಿ ಸಂಸದ ಪ್ರತಾಪ್ ಸಿಂಹ, ಶಾಸಕ ನಾಗೇಂದ್ರ,ಎಸ್.ಎ.ರಾಮದಾಸ್ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

ಈ ಮಧ್ಯೆ ಮಾವುತ ಕಾವಾಡಿಗರಿಗೆ ಸಚಿವ ಸೋಮಣ್ಣರಿಂದ ಉಡುಗೊರೆ ನೀಡಿದರು. ವಿ.ಸೋಮಣ್ಣ ಪ್ರತಿಷ್ಠಾನ ವತಿಯಿಂದ ಉಡುಗೂರೆ ನೀಡಲಾಯಿತು. ಕುಟುಂಬಕ್ಕೆ ತಲಾ ಐದು ಸಾವಿರ ರೂ. 20 ಮಾವುತರಿಗೆ 2 ಲಕ್ಷ ರೂ ಮೊತ್ತದ ಉಡುಗೊರೆಯನ್ನು ಸೋಮಣ್ಣ ನೀಡಿದರು.

ಬಳಿಕ ಅರಮನೆ ಆವರಣದಲ್ಲಿಯೇ ಏರ್ಪಡಿಸಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಭೇಟಿ ಕೊಟ್ಟ ಸೋಮಣ್ಣ ಅಲ್ಲಿಯೇ ಬಿಪಿ, ಶುಗರ್‍ ಪರೀಕ್ಷೆ ಮಾಡಿಸಿಕೊಂಡರು.

ನನಗೆ ಬಿಪಿ ನಾರ್ಮಲ್ ಇದೆ, ಶುಗರ್ ಇಲ್ಲವೇ ಇಲ್ಲ. ಚುನಾವಣೆ ಕೌಂಟಿಂಗ್ ವೇಳೆ ಮಾತ್ರ ಸ್ವಲ್ಪ ಸ್ವಲ್ಪ ಬಿಪಿ ಏರುತ್ತೆ. 9 ಉಪ ಚುನಾವಣೆಯಲ್ಲಿ ನಾನು ಓಡಾಡಿದ್ದೇನೆ. ಆದರೂ ಬಿಪಿ, ಶುಗರ್ ಖಾಯಿಲೆ ಇಲ್ಲ ಎಂದು ಸೋಮಣ್ಣ ಹೇಳಿದರು.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...