dasara ends ದಸರಾ: ಜಂಬೂಸವಾರಿ ಕಣ್ತುಂಬಿಕೊಂಡ ಜನಸಾಗರ, ನಾಡದೇವತೆಗೆ ನಾಡಿನ ನಮನ

dasara ends
dasara jumbo sawari

dasara ends ಊನವಿಲ್ಲದೇ ಮುಗಿದ ಊರಹಬ್ಬ

ಮೈಸೂರು: ನಾಡಹಬ್ಬ ದಸರೆಯ ಪ್ರಧಾನ ಆಕರ್ಷಣೆಯಾದ ( dasara ends ) ಜಂಬೂಸವಾರ ಸಾಂಗವಾಗಿ ಸಾಗುವುದರೊಂದಿಗೆ 10 ದಿನಗಳ ದಸರಾ ಸಂಭ್ರಮಕ್ಕೆ ತೆರೆ ಬಿದ್ದಿದೆ.

ಇದನ್ನೂ ಓದಿ: ಜಂಬೂಸವಾರಿಗೆ 8 ಸಾವಿರ ಪೊಲೀಸರ ಭದ್ರತೆ

ಗಜಪಡೆಯ ನಾಯಕ ಅರ್ಜುನ 750 ಕೆ.ಜಿ.ತೂಕದ ಚಿನ್ನದ ಅಂಬಾರಿ ಹೊತ್ತು ರಾಜ ಗಾಂಭೀರ್ಯದಿಂದ ವಿಶ್ವವಿಖ್ಯಾತ ಮಯಸೂರು ಅರಮನೆಯಿಂದ ಐದು ಕಿಮೀ ದೂ ಸಾಗಿ ಪಂಜಿನ ಕವಾಯತು ನಡೆದ ಬನ್ನಿ ಮಂಟಪದ ಬಳಿ ಆಗಮಿಸಿತು.

ಅರ್ಜುನನ ಬಲಭಾಗದಲ್ಲಿ ಕಾವೇರಿ ಹಾಗೂ ಎಡಭಾಗದಲ್ಲಿ ವಿಜಯ್ ಆನೆಗಳು ಮೆರವಣಿಗೆಯಲ್ಲಿ ಗಾಂಭೀರ್ಯದಿಂದ ಹೆಜ್ಜೆ ಹಾಕಿದವು. ರಸ್ತೆಯ ಇಕ್ಕೆಲ್ಲಗಳಲ್ಲಿ ಹಾಗೂ ಸುತ್ತಮುತ್ತಲಿನ ಕಟ್ಟಡಗಳ ಮೇಲೆರಿ ಕುಳಿತಿದ್ದ ಸಹಸ್ರಾರು ಸಂಖ್ಯೆಯ ಪ್ರವಾಸಿಗರು ಈ ಅದ್ದೂರಿ ಮೆರವಣಿಗೆಗೆ ಸಾಕ್ಷಿಯಾದರು.

ಪ್ರತಿ ಸಲದಂತೆಯೇ ಈ ಬಾರಿಯ ಜಂಬೂ ಸವಾರಿ ಮೆರವಣಿಗೆಯಲ್ಲಿ ನಾಡಿನ ಕಲೆ, ಸಂಸ್ಕೃತಿಯನ್ನು ಬಿಂಬಿಸುವ 39 ಸ್ತಬ್ಧಚಿತ್ರಗಳೊಂದಿಗೆ ವಿವಿಧ ಜಾನಪದ ಕಲಾತಂಡಗಳು ಭಾಗವಹಿಸಿದ್ದವು. ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಸುಮಾರು 8 ಸಾವಿರ ಪೊಲೀಸರು ಜಂಬೂ ಸವಾರಿಗೆ ಭದ್ರತೆ ಕಲ್ಪಿಸಿದ್ದರು.

ಜಂಬೂ ಸವಾರಿ ಆರಂಭಕ್ಕೂ ಮುಂಚಿತವಾಗಿ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗ ಸಿಎಂ ಯಡಿಯೂರಪ್ಪ ಅವರು ಮಧ್ಯಾಹ್ನ ಶುಭ ಕುಂಭ ಲಗ್ನದಲ್ಲಿ 2.30ರ ಸುಮಾರಿಗೆ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದರು. ಬಳಿಕ ಅವರು ಜಂಬೂಸವಾರಿಗೆ ಚಾಲನೆಯನ್ನೂ ನೀಡಿದರು.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...