darshan odeya ಡಿ. 12ರಂದು 700 ತೆರೆಗಳಲ್ಲಿ ಅಬ್ಬರಿಲಿದ್ದಾನೆ ದರ್ಶನ್ ಒಡೆಯ

darshan odeya
darshan in odeya

darshan odeya ಸೆನ್ಸಾರ್ ಮುಗಿಸಿದ ಒಡೆಯ ರಿಲೀಸ್‍ಗೆ ರೆಡಿ, ಅಭಿಮಾನಿಗಳಲ್ಲಿ ಹೆಚ್ಚಿದ ಕಾತುರ

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್‍ ದರ್ಶನ್ ನಟನೆಯ ( darshan odeya ) ಬಹುನಿರೀಕ್ಷಿತ ಒಡೆಯ ಚಿತ್ರ ಸರನ್ಸಾರ್‍ ಕೆಲಸ ಮುಗಿಸಿದ್ದು ಡಿ.12ರಂದು ರಾಜ್ಯಾದ್ಯಂತ ತೆರೆಕಾಣಲು ಸಜ್ಜಾಗಿದೆ. ಕುರುಕ್ಷೇತ್ರ ಮತ್ತು ಯಜಮಾನ ಚಿತ್ರಗಳ ಅಮೋಘ ಯಶಸ್ಸಿನ ಅಲೆಯ ಮೇಲಿರುವ ದರ್ಶನ್ ಅವರ ಒಡೆಯ ಚಿತ್ರವು 700 ತೆರೆಗಳಲ್ಲಿ ಅಬ್ಬರಿಸಲಿದ್ದಾನೆ.

ಇದನ್ನೂ ಓದಿ: ದರ್ಶನ್ ‘ಒಡೆಯ’ ಚಿತ್ರೀಕರಣ ಫಿನಿಶ್, ಡಿಸೆಂಬರ್‌ನಲ್ಲಿ ತೆರೆಗೆ

ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಯಶಸ್ವಿ ಚಿತ್ರಗಳನ್ನು ನೀಡಿರುವ ಸಂದೇಶ್ ಸಂಸ್ಥೆ ಲಾಂಛನದಲ್ಲಿ ನಿರ್ಮಾಣವಾಗಿರುವ ಈ ಚಿತ್ರ ಹಲವು ವಿಶೇಷಗಳ ಸಂಗಮ. ಪ್ರಿನ್ಸ್ ಹಾಗೂ ಐರಾವತ ಚಿತ್ರಗಳ ನಂತರ ದರ್ಶನ್ ಅವರ ಅಭಿನಯದಲ್ಲಿ ಈ ಸಂಸ್ಥೆ ನಿರ್ಮಿಸಿರುವ ಮೂರನೇ ಚಿತ್ರ ಇದಾಗಿದೆ.

ಅಲ್ಲದೇ ಬುಲ್‌ಬುಲ್ ಹಾಗೂ ಪೊರ್ಕಿ ಚಿತ್ರಗಳ ನಂತರ ಮೂರನೇ ಬಾರಿಗೆ ದರ್ಶನ್ ಚಿತ್ರಕ್ಕೆ ಎಂ.ಡಿ.ಶ್ರೀಧರ್ ಆಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರಕ್ಕೆ ಅರ್ಜುನ್ ಜನ್ಯ ಅವರ ಸಂಗೀತ ನಿರ್ದೇಶನವಿದ್ದು, ಜಯಂತ ಕಾಯ್ಕಿಣಿ, ನಾಗೇಂದ್ರಪ್ರಸಾದ್, ಕವಿರಾಜ್ ಹಾಗೂ ಚೇತನ್ ಕುಮಾರ್ ಹಾಡುಗಳನ್ನು ಬರೆದಿದ್ದಾರೆ.

ಈ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ನಾಯಕಿಯಾಗಿ ರಾಘವಿ ತಿಮ್ಮಯ್ಯ ಇದೇ ಮೊದಲ ಬಾರಿಗೆ ಅಭಿನಯಿಸಿದ್ದಾರೆ. ಯಶಸ್ ಸೂರ್ಯ, ಪಂಕಜ್, ನಿರಂಜನ್, ಸಮರ್ಥ್ ಮುಂತಾದವರು ಚಿತ್ರದ ತಾರಾ ಬಳಗದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...