damage control ಬಿಎಸ್ವೈ ಆಡಿಯೋ: ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾದ ಬಿಜೆಪಿ

damage control
cm bsy and nalin kateel

damage control ತುಣುಕು ಬಹಿರಂಗವಾದ ಬಗ್ಗೆ ಆಂತರಿಕ ತನಿಖೆಗೆ ಕಟೀಲ್ ಸೂಚನೆ

ಬೆಂಗಳೂರು: ಮೈತ್ರಿ ಸರಕಾರ ಉರುಳಿಸುವ ಸಂದರ್ಭದಲ್ಲಿ ( damage control ) ತಮ್ಮ ಹಾಗೂ ಪಕ್ಷದ ಅಧ್ಯಕ್ಷರ ಪಾತ್ರದ ಬಗ್ಗೆ ಸಿಎಂ ಬಿಎಸ್. ಯಡಿಯೂರಪ್ಪ ಆಡಿರುವ ಮಾತುಗಳ ಆಡಿಯೋ ತುಣುಕು ಸೃಷ್ಟಿಸಿರುವ ಮುಜುಗರದ ಪರಿಸ್ಥಿತಿಯನ್ನು ಹತೋಟಿಗೆ ತರಲು ಬಿಜೆಪಿ ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಗಿದೆ.

ಇದನ್ನೂ ಓದಿ: ಆಪರೇಶನ್ ಕಮಲ ಧೃಡಪಡಿಸಿ ಸಂಕಷ್ಟಕ್ಕೆ ಸಿಲುಕಿದ ಯಡಿಯೂರಪ್ಪ

ಆಪರೇಶನ್ ಕಮಲವನ್ನು ದೃಢಪಡಿಸುವ ರೀತಿಯಲ್ಲಿ ಯಡಿಯೂರಪ್ಪ ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ಚುನಾವಣಾ ಸಮಿತಿ ಸಭೆಯಲ್ಲಿ ಮಾತನಾಡಿದ್ದ ಆಡಿಯೋ ಬಹಿರಂಗಗೋಮಡಿದ್ದು, ಪ್ರತಿಪಕ್ಷ ಕಾಂಗ್ರಸ್‌ಗೆ ಸರಕಾರವನ್ನು ಟೀಕಿಸಲು ಹೊಸ ಅಸ್ತ್ರ ನೀಡಿದಂತಾಗಿದೆ.

ಈ ಆಡಿಯೋವನ್ನು ಸುಪ್ರೀಂ ಕೋರ್ಟಿನಲ್ಲಿ ಪ್ರಸ್ತುತಪಡಿಸುವ ಹುನ್ನಾರ ಕಾಂಗ್ರೆಸ್‌ನಲ್ಲಿ ನಡೆದಿದೆ. ಅಲ್ಲದೇ ಈ ಬಗ್ಗೆ ಕಾಂಗ್ರೆಸ್ ರಾಜ್ಯಪಾಲರಿಗೆ ಸೂರನ್ನೂ ನೀಡಿದ್ದು, ರಾಷ್ಟ್ರಪತಿ ಅಂಗಳಕ್ಕೆ ವಿಚಾರವನ್ನು ಕೊಂಡೊಯ್ಯುವ ಸಿದ್ಧತೆಯಲ್ಲಿದೆ.

ಉಪ ಚುನಾವಣೆ ಸನಿಹದಲ್ಲಿ ಇಂತಹ ವಿಚಾರಗಳು ಪಕ್ಷಕ್ಕೆ ಎಲ್ಲಿ ಹಿನ್ನಡೆ ಆಗುತ್ತದೋ ಎಂಬ ಆತಂಕ ಬಿಜೆಪಿ ಪಾಳೆಯದಲ್ಲಿ ಆವರಿಸಿಕೊಂಡಿದ್ದು ಈ ಆಡಿಯೋ ತುಣುಕು ಹೇಗೆ ಸಾರ್ವಜನಿಕಗೊಂಡಿತು ಎಮಬುದರ ಕುರಿತು ಆಂತರಿಕ ತನಿಖೆಗೆ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕಟೀಲ್ ಸೂಚಿಸಿದ್ದಾರೆ.

ಆಪರೇಶನ್ ಕಮಲದ ಮೂಲಕ ಬಿಜೆಪಿ ಅಕ್ರಮವಾಗಿ ಮೈತ್ರಿ ಸರಕಾರ ಕೆಡವಿದೆ ಎಂದು ಆರೋಪಿಸಿ ಕಾಂಗ್ರೆಸ್ ರಾಜ್ಯಾದ್ಯಂತ ಪ್ರತಿಭಟನೆಗೆ ಸಜ್ಜುಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ತಾಣು ಎಡವಿದ್ದು ಎಲ್ಲಿ ಎಂಬುದನ್ನು ಕಂಡುಕೊಳ್ಳಲು ಬಿಜೆಪಿ ಮುಂದೆ ಬಂದಿದೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...