dabangg3 kichcha ಸಲ್ಮಾನ್‌ ದಬಾಂಗ್‌ನಲ್ಲಿ ನಮ್ಮ ಕಿಚ್ಚ ಸುದೀಪ್ ಮಿಂಚು

dabangg3 kichcha
sudeep and salman in dabangg-3

dabangg3 kichcha ದಬಾಂಗ್ ಮೊದಲ ಟೀಸರಿನಲ್ಲಿಯೇ ಗಮನ ಸೆಳೆವ ಕಿಚ್ಚ ಸುದೀಪ

ಬೆಂಗಳೂರು: ಹಿಂದಿ ನಟ ಸಲ್ಮಾನ್ ಖಾನ್ ಅಭಿನಯದ ಬಹು ನಿರೀಕ್ಷಿತ ( dabangg3 kichcha) ದಬಾಂಗ್-3 ಚಿತ್ರದ ಮೊದಲ ಟೀಸರ್‍ ಬಿಡುಗಡೆಯಾಗಿದ್ದು, ಅದರಲ್ಲಿ ನಮ್ಮ ಕಿಚ್ಚ ಸುದೀಪ್ ಮಿಂಚಿದ್ದಾರೆ.

ಇದನ್ನೂ ಓದಿ: ಕಿಚ್ಚ ಸುದೀಪರನ್ನು ದಬಾಂಗ್ ಶೈಲೀಲಿ ಪರಿಚಯಿಸಿದ ಸಲ್ಮಾನ್ ಖಾನ್

ಸಲ್ಮಾನ್ ಖಾನ್ ಅವರ ದಬಾಂಗ್ ಸರಣಿಯ ಈ ಮೂರನೇ ಅವತರಣಿಕೆಯಲ್ಲಿ ಕಿಚ್ಚ ಸುದೀಪ್ ಖಳನಟನಾಗಿ ಕಾಣಿಸಿಕೊಳ್ಳುತ್ತಿದ್ದು, ತಮ್ಮ ಖಡಕ್ ನಟನೆಯಿಂದ ಟೀಸರ್‌ನಲ್ಲಿ ಗಮನ ಸೆಳೆದಿದ್ದಾರೆ.

ಡಿಸೆಂಬರ್‍ 20ರಂದು ದೇಶಾದ್ಯಂತ ಬಿಡುಗಡೆ ಕಾಣುತ್ತಿರುವ ದಬಾಂಗ್3 ಚಿತ್ರದಲ್ಲಿ ಸಲ್ಮಾನ್ ಖಾನ್ ಎಂದಿನಂತೆ ಚುಲ್‌ಬುಲ್ ಪಾಂಡೆಯಾಗಿ ನಾನಾ ವರಸೆ ತೋರಿದ್ದಾರೆ. ಆತ ಚುಲ್‌ಬುಲ್ ಪಾಂಡೆ ಆಗುವ ಮುಂಚಿನ ವೃತ್ತಾಂತದಲ್ಲಿ ಸುದೀಪ್ ಖಳನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಸುಮರಾರ ಮೂರು ನಿಮಿಷಗಳ ಈ ಟೀಸರ್‌ನಲ್ಲಿ ಸಲ್ಮಾನ್‌ರಷ್ಟೇ ಪ್ರಾಧಾನ್ಯತೆ ಕಿಚ್ಚ ಸುದೀಪ್ ಅವರಿಗೂ ನೀಡಲಾಗಿದ್ದು, ಇನ್ನು ಪೂರ್ಣ ಪ್ರಮಾಣದ ಚಿತ್ರದಲ್ಲಿ ಕಿಚ್ಚನ ವರಸೆ ಹೇಗಿರಬಹುದು ಎಂಬ ಅಭಿಮಾನಿಗಳ ನಿರೀಕ್ಷೆಯನ್ನು ತೀವ್ರವಾಗಿಸಿದೆ.

ಕಿಚ್ಚ ಸುದೀಪರನ್ನು ತಮ್ಮ ಚಿತ್ರದ ಬಲಶಾಲಿ ವಿಲನ್ ಎಂದು ಬಣ್ಣಿಸಿರುವ ಸಲ್ಮಾನ್ ಅವರೊಂದಿಗೆ ಹೊರಾಡುವುದೇ ಮಜಾ ಎಂದು ಹೇಳುತ್ತಲೇ ಚಿತ್ರದಲ್ಲಿ ಸುದೀಪ್‌ ಅವರ ಲುಕ್‌ ಅನ್ನು ನಟ ಸಲ್ಮಾನ್ ಖಾನ್ ಇತ್ತೀಚೆಗಷ್ಟೇ ಬಿಡುಗಡೆ ಮಾಡಿದ್ದರು.

ಪ್ರತಿಯಾಗಿ ಇಲ್ಲಿ ಹೋರಾಟದ ಮಾತು ಬರುವುದಿಲ್ಲ. ವಿಲನ್ ಗೆ ಹೀರೋ ಮೇಲೆ ಪ್ರೀತಿ ಉಂಟಾಗುತ್ತದೆ! ಸಲ್ಮಾನ್ ಅವರೊಂದಿಗೆ ಕೆಲಸ ಮಾಡಿದ್ದೇ ಖುಷಿಯ ವಿಚಾರ ಎಂದು ಕಿಚ್ಚ ಸುದೀಪ ಅತೀವ ಸಂತಸ ಹಮಚಿಕೊಂಡಿದ್ದರು.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...