coconut ganesha ಬೆಂಗಳೂರಿನಲ್ಲಿ 30 ಅಡಿ ಎತ್ತರದ ಕಾಯಿ ಗಣೇಶ

coconut ganesha
ganesh idol

coconut ganesha 9 ಸಾವಿರ ಕಾಯಿ ಹಾಗೂ 3 ಸಾವಿರ ಎಳನೀರು ಬಳಸಿ ಗಣೇಶ ಮೂರ್ತಿ ನಿರ್ಮಾಣ; ಜೆಪಿ ನಗರದಲ್ಲಿ ಈ ಬಾರಿ 30 ಅಡಿ ಎತ್ತರದ ಪರಿಸರ ಸ್ನೇಹೀ ʼತೆಂಗಿನಕಾಯಿ ಗಣೇಶʼ ದರ್ಶನ

ಬೆಂಗಳೂರು: ಪ್ರತಿಬಾರಿಯೂ ಭಕ್ತರಿಗೆ ಹೊಸದನ್ನು ನೀಡಬೇಕು ಎನ್ನುವ ( coconut ganesha ) ಉದ್ದೇಶ ಹೊಂದಿರುವ ಜೆಪಿ ನಗರದ ಪುಟ್ಟೇನ ಹಳ್ಳಿಯ ಶ್ರೀ ಸತ್ಯ ಗಣಪತಿ ಶಿರಡಿ ಸಾಯಿ ಟ್ರಸ್ಟ್, ಈ ಬಾರಿ 30 ಅಡಿ ಎತ್ತರದ ಪರಿಸರ ಸ್ನೇಹಿ “ತೆಂಗಿನ ಕಾಯಿ ಗಣೇಶ” ಮೂರ್ತಿ ನಿರ್ಮಾಣಕ್ಕೆ ಮುಂದಾಗಿದೆ.

ಇದನ್ನೂ ಓದಿ: ರಾಜಕೀಯವಾಗಿ ಮುಗ್ಸೋದಿರ್ಲಿ ಸಿದ್ದು ಮುಟ್ಟೋಕ್ಕೂ ಆಗಲ್ಲ: ಕಾಗಿನೆಲೆ ಶ್ರೀ

ಕಳೆದ ಬಾರಿ 30 ಅಡಿ ಎತ್ತರದ ಕಬ್ಬಿನ ಗಣಪತಿಯನ್ನು ನಿರ್ಮಿಸಿ ಇತಿಹಾಸದಲ್ಲಿ ಹೊಸದೊಂದು ಮೈಲಿಗಲ್ಲು ಸ್ಥಾಪಿಸಿದ್ದ ಈ ದೇವಸ್ಥಾನ ಈ ಬಾರಿ 9 ಸಾವಿರ ತೆಂಗಿನ ಕಾಯಿ ಹಾಗೂ 3 ಸಾವಿರ ಏಳನೀರು ಬಳಸಿ 30 ಎತ್ತರದ ಗಣಪತಿಯನ್ನು ನಿರ್ಮಿಸುವ ಕಾರ್ಯವನ್ನು ಪ್ರಾರಂಭಿಸಿದೆ.

ಗಣೇಶ ಮೂರ್ತಿ ನಿರ್ಮಾಣಕ್ಕೆ 50 ಮಂದಿ ಕಳೆದ 2೧ ದಿನಗಳಿಂದ ಕೆಲಸ ಮಾಡುತ್ತಿದ್ದು ಚೌತಿ ಸೋಮುವಾರದಂದು ತೆಂಗಿನ ಕಾಯಿ ಗಣಪನ ದರ್ಶನ ಪಡೆಯಬಹುದಾಗಿದೆ. ತೆಂಗಿನ ಕಾಯಿ ಬಹಳ ದಿನಗಳ ಕಾಲ ಕೆಡದೆ ಇರುತ್ತದೆ. ಹೀಗಾಗಿ ತೆಂಗಿನ ಕಾಯಿಯನ್ನು ಬಳಸಿ ಗಣಪನ ಮೂರ್ತಿಯನ್ನು ನಿರ್ಮಿಸಲಾಗುತ್ತಿದೆ.

ಕಳೆದ ವರ್ಷ ಕಬ್ಬನ್ನು ಬಳಸಿ ಗಣಪನ ಮೂರ್ತಿಯನ್ನು ನಿರ್ಮಿಸಲಾಗಿತ್ತು ಹಾಗೂ ಅದಕ್ಕೂ ಹಿಂದಿನ ವರ್ಷ 400 ಕೆಜಿ ಹತ್ತಿ ಬಳಸಿ ಬೃಹತ್ ಗಣಪನ ಮೂರ್ತಿಯನ್ನು ನಿರ್ಮಿಸಿದ್ದೆವು ಎಂದು ಬೊಮ್ಮನಹಳ್ಳಿ ಕಾರ್ಪೊರೇಟರ್ ಹಾಗೂ ಟ್ರಸ್ಟಿನ ವ್ಯವಸ್ಥಾಪಕರಾದ ರಾಮ್ ಮೋಹನ ರಾಜು ಅವರು ತಿಳಿಸಿದರು.

coconut ganesha
jp nagar ganesha

21 ಬಗೆಯ ತರಕಾರಿಗಳನ್ನು ಬಳಸಿ ಪರಿಸರ ಸ್ನೇಹೀ ಅಲಂಕಾರ: ಗಣಪತಿ ದೇವಸ್ಥಾನವನ್ನು ಈ ಬಾರಿ ಪರಿಸರ ಸ್ನೇಹಿಯಾಗಿಸಲು ತಿರ್ಮಾನಿಸಲಾಗಿದೆ. ಈ ಬಾರಿ ತರಕಾರಿಗಳನ್ನು ಬಳಸಿ ವಿಶೇಷವಾಗಿ ಆಲಂಕಾರ ಮಾಡಲಾಗುವುದು.

10 ಸಾವಿರ ಕೆಜಿ ಕೆಸರಿಬಾತ್ ಪ್ರಸಾದ

ಮತ್ತೊಂದು ವಿಶೇಷವೇಂದರೆ ಗಣೇಶನಿಗೆ 10 ಸಾವಿರ ಕೆ ಜಿ ಕೇಸರಿಬಾತ್ ನ್ನು ಪ್ರಸಾದವನ್ನಾಗಿ ನೀಡಲು ತೀರ್ಮಾನಿಸಲಾಗಿದೆ.

ಈ ಕೇಸರಿ ಬಾತ್ ತಯಾರಿಕೆಗೆ 2 ಸಾವಿರ ಕೆಜಿ ರವೆ, 2 ಸಾವಿರ ಕೆಜಿ ಸಕ್ಕರೆ, 1 ಸಾವಿರ ಲೀಟರ್ ತುಪ್ಪ ಸೇರಿದಂತೆ ಇನ್ನಿತರ ಪದಾರ್ಥಗಳನ್ನು ಬಳಸಲಾಗುತ್ತಿದೆ.

ಈ ಪ್ರಸಾದವನ್ನು ಹಬ್ಬದ ದಿನ ಭಕ್ತರಿಗೆ ನೀಡಲು ನಿರ್ಧರಿಸಲಾಗಿದೆ ಎಂದು ಟ್ರಸ್ಟಿ ರಾಮ್ ಮೋಹನ ರಾಜು ತಿಳಿಸಿದರು.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...