coco ganapa ಬೆಂಗಳೂರಿನ ಕಾಯಿ ಗಣಪನ ನೋಡಲು ಮುಗಿಬಿದ್ದ ಜನಸಾಗರ

coco ganapa

coco ganapa ಜೆಪಿ ನಗರದ 30 ಅಡಿ ಎತ್ತರದ ತೆಂಗಿನಕಾಯಿ ಗಣೇಶ

ಬೆಂಗಳೂರು: ದೇಶದಲ್ಲೆಲ್ಲಾ ಪ್ರಸಿದ್ದಿ ಪಡೆದಿರುವ ಜೆ ಪಿ ನಗರದ ಪರಿಸರ ಸ್ನೇಹಿ ( coco ganapa ) ತೆಂಗಿನ ಕಾಯಿ ಗಣೇಶನ ದರ್ಶನವನ್ನು ಗಣೇಶ ಹಬ್ಬದ ಪ್ರಯುಕ್ತ ಸಾವಿರಾರು ಜನರು ಪಡೆದರು. ಬೆಳಿಗ್ಗೆಯಿಂದಲೇ ದರ್ಶನಕ್ಕೆ ಸಾಲುಗಟ್ಟಿ ನಿಂತಿದ್ದ ಭಕ್ತರುಗಳು ನಾರಿಕೇಳ ಗಣಪನ ಅಭೂತ ಪೂರ್ವ ಸೌಂದರ್ಯವನ್ನು ಕಣ್ಣುತುಂಬಿಕೊಂಡರು.

ಇದನ್ನೂ ಓದಿ: ಬೆಂಗಳೂರಿನಲ್ಲಿ 30 ಅಡಿ ಎತ್ತರದ ಕಾಯಿ ಗಣೇಶ

21 ವಿವಿಧ ಬಗೆಯ ತರಕಾರಿಗಳಿಂದ ಸಾಲಂಕೃತವಾಗಿರುವ ಗಣಪತಿ ದೇವಸ್ಥಾನ ಹಾಗೂ ದೇಗುಲದ ಪ್ರಾಂಗಣವನ್ನು ಭಕ್ತರು ಕೊಂಡಾಡಿದರು.

ಈ ತೆಂಗಿನ ಕಾಯಿ ಗಣೇಶ ಮೂರ್ತಿಯನ್ನು ಮಾಡಲು ಬಳಸಿರುವ 12 ಸಾವಿರ ತೆಂಗಿನ ಕಾಯಿ ಹಾಗೂ 15 ಟನ್‌ ತರಕಾರಿಯನ್ನು 4 ದಿನಗಳ ನಂತರ ಭಕ್ತಾದಿಗಳಿಗೆ ಹಂಚಲಾಗುವುದು ಎಂದು ಶ್ರೀ ಸತ್ಯಗಣಪತಿ ಶಿರಡಿ ಸಾಯಿ ಟ್ರಸ್ಟಿನ ವ್ಯವಸ್ಥಾಪಕರು ಹಾಗೂ ಬೊಮ್ಮನಹಳ್ಳಿ ಕಾರ್ಪೊರೇಟರ್‍ ರಾಮ್‌ ಮೋಹನ ರಾಜು ತಿಳಿಸಿದ್ದಾರೆ.

ಕಳೆದ ಬಾರಿ 30 ಅಡಿ ಎತ್ತರದ ಕಬ್ಬಿನ ಗಣಪತಿಯನ್ನು ನಿರ್ಮಿಸಿ ಇತಿಹಾಸದಲ್ಲಿ ಹೊಸದೊಂದು ಮೈಲಿಗಲ್ಲು ಸ್ಥಾಪಿಸಿದ್ದ ಈ ದೇವಸ್ಥಾನ ಈ ಬಾರಿ 9 ಸಾವಿರ ತೆಂಗಿನ ಕಾಯಿ ಹಾಗೂ 3 ಸಾವಿರ ಏಳನೀರು ಬಳಸಿ 30 ಎತ್ತರದ ಗಣಪತಿಯನ್ನು ನಿರ್ಮಿಸಿದೆ.

ಗಣೇಶ ಮೂರ್ತಿ ನಿರ್ಮಾಣಕ್ಕೆ 50 ಮಂದಿ ಕಳೆದ 2೧ ದಿನಗಳಿಂದ ಕೆಲಸ ಮಾಡಿದ್ದರು. ಕಳೆದ ವರ್ಷ ಕಬ್ಬನ್ನು ಬಳಸಿ ಗಣಪನ ಮೂರ್ತಿಯನ್ನು ನಿರ್ಮಿಸಲಾಗಿತ್ತು ಹಾಗೂ ಅದಕ್ಕೂ ಹಿಂದಿನ ವರ್ಷ 400 ಕೆಜಿ ಹತ್ತಿ ಬಳಸಿ ಬೃಹತ್ ಗಣಪನ ಮೂರ್ತಿಯನ್ನು ನಿರ್ಮಿಸಿದ್ದೆವು ಎಂದು ರಾಜು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...