coach ಭಾರತ ಕ್ರಿಕೆಟ್ ತಂಡದ ಕೋಚ್ ರೇಸಿನಲ್ಲಿ ಮೂವರು ಕನ್ನಡಿಗರು

coach
joshi, prasad and arun in coach race

coach ಟೀಂ ಇಂಡಿಯಾ ಬೌಲಿಂಗ್ ಕೋಚಾಗಲು ವೆಂಕಿ, ಜೋಶಿ, ಅರುಣ್ ಅರ್ಜಿ

ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಕೋಚ್‌ ಹಾಗೂ ( coach ) ಸಹಾಯಕ ಸಿಬ್ಬಂದಿಯ ಆಯ್ಕೆ ಪ್ರಕ್ರಿಯೆ ಮುಂದಿನ ವಾರ ಆಖೈರಾಗಲಿದ್ದು, ಕೋಚಾಗಲು ಕರ್ನಾಟಕದ ಮೂವರು ಮಾಜಿ ಆಟಗಾರರು ಉತ್ಸುಕರಾಗಿದ್ದಾರೆ.

ಇದನ್ನೂ ಓದಿ: ದುಲೀಪ್ ಟ್ರೋಫಿ ಕ್ರಿಕೆಟ್: ಮೂವರು ಕನ್ನಡಿಗರಿಗೆ ಮಣೆ

ರವಿ ಶಾಸ್ತ್ರಿ ಮುಂದಾಳತ್ವದ ಕೋಚಿಂಗ್ ಟೀಂನ ಕಾರ್‍ಯಾವಧಿ ಮುಗಿದಿದ್ದು ಇನ್ನೊಂದು ಅವಧಿಗೆ ಅವರನ್ನು ಮರೆ ನೇಮಕ ಮಾಡುವ ಸಾಧ್ಯತೆಗಳು ದಟ್ಟವಾಗಿವೆ. ಆದರೆ ತಜ್ಞ ಕೋಚ್‌ಗಳಿಗೆ ಹೊಸಬರ ನೇಮಕ ಬಹುತೇಕ ನಿಚ್ಚಳವಾಗಿದೆ.

ಭಾರತ ತಂಡದ ಬೌಲಿಂಗ್ ಕೋಚ್ ಆಗಲು ಬಯಸಿ ಮಾಜಿ ಅಂತಾರಾಷ್ಟ್ರೀಯ ಆಟಗಾರರಾದ ಮಧ್ಯಮ ವೇಗಿ ವೆಂಕಟೇಶ್ ಪ್ರಸಾದ್ ಹಾಗೂ ಎಡಗೈ ಸ್ಪಿನ್ನರ್‍ ಸುನೀಲ್ ಜೋಶಿ ಹಾಗೂ ಬ್ಯಾಟಿಂಗ್ ಕೋಚ್ ಆಗಬಯಸಿ ಅವರು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಅರ್ಜಿ ಸಲ್ಲಿಸಿದ್ದಾರೆ.

ಮೂವರೂ ನುರಿತ ಆಟಗಾರರಾಗಿದ್ದು, ಸೂಕ್ತ ವೇದಿಕೆಯಲ್ಲಿ ತಮ್ಮ ಕೌಶಲ ಪ್ರದರ್ಶನ ಮಾಡಿದ್ದಾರೆ. ಕೇವಲ ಆಟಗಾರರಾಗಷ್ಟೇ ಅಲ್ಲದೇ ಮಾರ್ಗದರ್ಶಕರಾಗಿಯೂ ವೆಂಕಿ ಮತ್ತು ಜೋಶಿ ಸಾಕಷ್ಟು ಅನುಭವ ಹೊಂದಿದ್ದಾರೆ.

ವೆಂಕಟೇಶ್ ಪ್ರಸಾದ್ ಅವರು ಈ ಹಿಂದೆ ಸುಮಾರು ವರ್ಷಗಳ ಅವಧಿಗೆ ಟೀಂ ಇಂಡಿಯಾದ ಬೌಲಿಂಗ್ ಕೋಷ್ ಆಗಿದ್ದರಲ್ಲದೇ ಆ ಅವಧಿಯಲ್ಲಿ ತಂಡ ಸಾಕಷ್ಟು ಯಶಸ್ವಿಯೂ ಆಗಿತ್ತು. ಇದಲ್ಲದೇ ವೆಂಕಿ ಐಪಿಎಲ್‌ನಲ್ಲಿ ಆರ್‍ಸಿಬಿ ಸೇರಿ ಹಲವು ತಂಡಗಳಿಗೆ ಬೌಲಿಂಗ್ ಮಾರ್ಗದರ್ಶನ ಮಾಡಿದ್ದಾರೆ.

ಇನ್ನು ಸುನೀಲ್ ಜೋಶಿ ಸಹ ಬೌಲಿಂಗ್ ಕೋಚ್ ಆಗಿ ಅನುಭವಿ ಎನಿಸಿದ್ದಾರೆ. ಬಾಂಗ್ಲಾದೇಶ ರಾಷ್ಟ್ರೀಯ ತಂಡ ಬೌಲಿಂಗ್ ಕೋಚ್ ಆಗಿ ಜೋಶಿ ಅನುಭವ ಗಿಟ್ಟಿಸಿದ್ದಾರೆ.

ಇನ್ನು ಬ್ಯಾಟಿಂಗ್ ಕೋಚ್ ಆಗಲು ಇಚ್ಛಿಸಿ ಅರ್ಜಿ ಹಾಕಿರುವ ರಾಜ್ಯದ ಮಾಜಿ ಆರಂಭಿಕ ಅರುಣ್ ಕುಮಾರ್‍ ಕರ್ನಾಟಕದ ಅತ್ಯಂತ ಯಶಸ್ವಿ ಕೋಚ್ ಸಹ ಆಗಿದ್ದಾರಲ್ಲದೇ ಸದ್ಯ ಹೊಸ ತಂಡ ಪುದುಚೆರಿಯ ಕೋಚ್ ಆಗಿ ನಿಯುಕ್ತಿಗೊಂಡಿದ್ದಾರೆ.

ಈ ಮೂವರ ಪೈಕಿ ಯಾರಾದರೊಬ್ಬರು ಕೋಚ್ ಆಗ್ತಾರಾ ಇಲ್ಲ ಹಾಲಿ ಕೋಚ್ ರವಿ ಶಾಸ್ತ್ರಿ ಅವರ ನೆಚ್ಚಿನ ಬಟರಾದ ಭರತ್ ಅರುಣ್ ಹಾಗೂ ಸಂಜಯ್ ಬಂಗಾರ್‍ ಅವರೇ ಮತ್ತೊಂದು ಅವಧಿಗೆ ಮುಂದುವರಿಯುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...