clp leadership ಸಿಎಲ್ಪಿ ನಾಯಕತ್ವ: ಸಿದ್ದರಾಮಯ್ಯ ಪರ ಶಾಸಕರ ಸಹಿ ಸಂಗ್ರಹ

clp leadership
former cm siddaramaiah

clp leadership ಹೈಕಮಾಂಡ್ ದೂತ ಮಿಸ್ತ್ರಿ ಮುಂದೆ ಸಿದ್ದು ಆಯ್ಕೆಗೆ ಹಿರಿಯರ ಸ್ಪಷ್ಟ ವಿರೋಧ

ಬೆಂಗಳೂರು: ಯಾವುದೇ ಕಾರಣಕ್ಕೂ ಶಾಸಕಾಂಗ ಪಕ್ಷದ ನಾಯಕತ್ವವನ್ನು ( clp leadership) ಸಿದ್ದರಾಮಯ್ಯ ಬಿಟ್ಟು ಬೇರೆಯವರಿಗೆ ನೀಡಬಾರದು ಎಂದು ಅವರ ಬೆಂಬಲಿಗರು ಪಟ್ಟು ಹಿಡಿದಿದ್ದಾರೆ. ಈ ಸಂಬಂಧ ಬೆಂಬಲಿಗ ಶಾಸಕರು ಸಿದ್ದರಾಂಯ್ಯ ಪರ ಸಹಿ ಅಭಿಯಾನ ಆರಂಭಿಸಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ ವಿರುದ್ಧ ನಿಂತ ಎಚ್ಕೆಪಿ, ಪರಮೇಶ್ವರ ಪರ ಬ್ಯಾಟಿಂಗ್

ಪ್ರತಿಪಕ್ಷ ನಾಯಕನ ಆಯ್ಕೆ ವಿಚಾರವಾಗಿ ಅಭಿಪ್ರಾಯ ಸಂಗ್ರಹಕ್ಕೆ ಬಂದಿರುವ ಹೈಕಮಾಂಡಿನ ದೂತ ಮಧುಸೂದನ್ ಮಿಸ್ತ್ರಿ ಆಯ್ದ ಶಾಸಕರ ಅಭಿಪ್ರಾಯವನ್ನು ಮಾತ್ರ ಆಲಿಸುತ್ತಿರುವುದು ಸಿದ್ದು ಬೆಂಬಲಿಗ ಶಾಸಕರಲ್ಲಿ ಅಸಮಾಧಾನ ಉಮಟುಮಾಡಿದೆ.

ಈ ಕಾರಣಕ್ಕೆ ಅವರು ಸಿದ್ದರಾಂಯ್ಯ ಪರ ಸಹಿ ಸಂಗ್ರಕ್ಕೆ ಮುಂದಾಗಿದ್ದಾರೆ. ಮಾಜಿ ಸಚಿವರಾದ ಕೃಷ್ಣ ಭೈರೇಗೌಡ, ಜಮೀರ್ ಅಹ್ಮದ್ ಹಾಗೂ ರಿಜ್ವಾನ್ ಅರ್ಷದ್, ಭೈರತಿ ಸುರೇಶ್ ಮತ್ತಿತರರಿಂದ ಸಹಿ ಸಂಗ್ರಹ ಅಭಿಯಾನ ನಡೆಸಲಾಗಿದೆ.

ಈ ನಡುವೆ ಮಾಜಿ ಸಚಿವ ಪರಮೇಶ್ವರ ನಾಯ್ಕ್ ಸೇರಿದಂತೆ ಸಿದ್ದು ಪರ ಶಾಸಕರು ದೂತರ ಭೇಟಿಗೆ ಮುಂದಾದರಾದರೂ ಅವರಿಗೆ ಆಹ್ವಾಣ ಇಲ್ಲ ಎಂಬ ಕಾರಣಕ್ಕೆ ಮಿಸ್ತ್ರಿ ಭೇಟಿ ನಿರಾಕರಿಸಿದ್ದಾರೆ.

ಈ ಮಧ್ಯೆ ವಿಧಾನಸಭೆ ವಿರೋಧಪಕ್ಷದ ನಾಯಕರಾಗಿ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲು ಪಕ್ಷದ ಹಿರಿಯ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ. ಬಿ.ಕೆ. ಹರಿಪ್ರಸಾದ್, ಕೆ.ಹೆಚ್. ಮುನಿಯಪ್ಪ, ಹೆಚ್.ಕೆ. ಪಾಟೀಲ್ ಅವರು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಧುಸೂದನ್ ಮಿಸ್ತ್ರಿ ಅವರ ಬಳಿ ಅಭಿಪ್ರಾಯ ತಿಳಿಸಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...