cji gogoi ನ್ಯಾ. ಗೊಗೋಯಿ: ಸಿಜೆ ವಿರುದ್ಧ ಬಂಡಾಯದಿಂದ ಅಯೋಧ್ಯೆ ಐತೀರ್ಪಿನವರೆಗೆ

cji gogoi
chief justice ranjan gogoi

cji gogoi ಅಯೋಧ್ಯೆ ವಿವಾದಕ್ಕೆ ತೆರೆ ಎಳೆದ ಸುಪ್ರೀಂ ಕೋರ್ಟ್‌

ಹೊಸದಿಲ್ಲಿ: ಕಳೆದ ಏಳು ದಶಕದಿಂದ ದೇಶದ ( cji gogoi ) ಸಮಾಜಿಕ, ರಾಜಕೀಯ ಕಗ್ಗಂಟಾಗಿದ್ದ ರಾಮಜನ್ಮ ಭೂಮಿ ವಿವಾದಕ್ಕೆ ಕೊನೆಗೂ ಪರಿಹಾರ ಕಂಡಿದೆ. ಇತ್ತೀಚಿನ ವರ್ಷಗಳಲ್ಲಿ ಐತಿಹಾಸಿಕ ಎನ್ನಬಹುದಾದ ದೊಡ್ಡ ತೀರ್ಪನ್ನು ಸುಪ್ರೀಂ ಕೋರ್ಟ್ ನೀಡಿದ್ದು, ಅಯೋಧ್ಯಾ ವಿವಾದಕ್ಕೆ ತೆರೆ ಎಳೆದಿದೆ.

ಇದನ್ನೂ ಓದಿ: ಅಯೋಧ್ಯಾ ಐತೀರ್ಪು: ರಾಮ ಮಂದಿರ ನಿರ್ಮಾಣ ಹಾದಿ ಸುಗಮ, ಮಸೀದಿಗೆ ಪರ್ಯಾಯ…

ಈ ಪ್ರಕರಣದ ಸಂಬಂಧ ಸತತ 40 ದಿನಗಳ ವಿಚಾರಣೆಯ ನಿರ್ಧಾರದಿಂದ ಹಿಡಿದು ಐವರು ಸದಸ್ಯರ ನ್ಯಾಯಪೀಠದ ಪರವಾಗಿ ಒಮ್ಮತದ ತೀರ್ಪು ಪ್ರಕಟಿಸುವ ತನಕ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ಅವರ ಪಾತ್ರ ಅನನ್ಯ.

ಇನ್ನೊಂದು ವಾರದಲ್ಲಿ ನಿವೃತ್ತರಾಗಲಿರುವ ನ್ಯಾಯಮೂರ್ತಿ ರಂಜನ್ ಗೊಗೋಯಿ ಅವರಿಂದ ಇನ್ನೂ ಮೂರು ಮಹತ್ವದ ತೀರ್ಪು ಪ್ರಕಟವಾಗಲಿದ್ದು, ಅದರಲ್ಲಿ ಶಬರಿಮಲೆ ವಿವಾದದ ಪರಾಮರ್ಶೆಯೂ ಸೇರಿದೆ.

ಇಷ್ಟೆಲ್ಲ ಮಹತ್ವದ ತೀರ್ಪುಗಳಿಗೆ ಪೌರೋಹಿತ್ಯ ವಹಿಸಿರುವ ನ್ಯಾ. ಗೊಗೋಯಿ ವರ್ಷದ ಹಿಂದಷ್ಟೇ ಮತ್ತೊಂದು ಐತಿಹಾಸಿಕ ಘಟನೆಗೆ ಸಾಕ್ಷಿಯಾಗಿದ್ದರು. ದೇಶದ ನ್ಯಾಯಾಂಗದ ಇತಿಹಾಸದಲ್ಲಿಯೇ ಮೊದಲು ಎಂಬಂತೆ ಅಂದಿನ ಮುಖ್ಯ ನ್ಯಾಯಾಧೀಶರ ವಿರುದ್ಧ ಸಹ ನ್ಯಾಯಾಧೀಶರೇ ಬಹಿರಂಗವಾಗಿ ಬಮಡೆದ್ದಿದ್ದರು.

ಹಿಂದಿನ ನ್ಯಾಯಮೂರ್ತಿ ದೀಪಕ್ ಮಿಶ್ರಾ ವಿರುದ್ಧ ಬಂಡಾಯವೆದ್ದು ಪತ್ರಕಾಗೋಷ್ಠಿ ನಡೆಸಿದ ನ್ಯಾಯಾಧೀಶರಲ್ಲಿ ಗೊಗೋಯಿ ಸಹ ಒಬ್ಬರಾಗಿದ್ದರು ಎಂಬುದು ಗಮನಾರ್ಹ. ಬಳಿಕ ಅವರೇ ಮುಖ್ಯ ನ್ಯಾಯಮೂರ್ತಿಯಾಗಿ ನಿಯುಕ್ತಿಗೊಂಡು ಹಲವಾರು ಮಹತ್ವದ ತೀರ್ಪುಗಳಿಗೆ ಕಾರಣರಾಗಿದ್ದಾರೆ.

ಅಸ್ಸಾಮಿನವರಾದ ನ್ಯಾ. ಗೊಗೋಯಿ ಅವರು ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಿದರು. ಈಶಾನ್ಯ ಭಾರತದ ಮೊದಲ ಮುಖ್ಯ ನ್ಯಾಯಮೂರ್ತಿ ಎಂಬ ಹಿರಿಮೆಗೆ ಗೊಗೋಯ್‌ ಪಾತ್ರರಾಗಿದ್ದಾರೆ.

ಗುವಾಹಟಿ ಹೈಕೋರ್ಟಿನಲ್ಲಿ ತಮ್ಮ ವಕೀಲ ವೃತ್ತಿಯನ್ನು 1978ರಲ್ಲಿ ಆರಂಭಿಸಿದ ನ್ಯಾಯಮೂರ್ತಿ ಗೊಗೋಯಿ ಅವರು ಮುಂದಿನ ದಿನಗಳಲ್ಲಿ ಪಂಜಾಬ್‌ ಮತ್ತು ಹರ್ಯಾಣ ಹೈಕೋರ್ಟ್‌ನಲ್ಲಿ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿ 2012ರಲ್ಲಿ ಸುಪ್ರೀಂ ಕೋರ್ಟ್‌ಗೆ ಬಡ್ತಿ ಪಡೆದಿದ್ದರು.