cj confabulates ಸಿಜೆ ಕಾರ್‍ಯಪ್ರವೃತ್ತ, ಅಯೋಧ್ಯೆ ತೀರ್ಪು ಸನ್ನಿಹಿತ

cj confabulates

cj confabulates ವಾರದೊಳಗೆ ಐತಿಹಾಸಿಕ ಅಯೋಧ್ಯೆ ತೀರ್ಪು

ಹೊಸದಿಲ್ಲಿ: ದಶಕಗಳ ಹಳೆಯದಾದ ಅಯೋಧ್ಯೆ ( cj confabulates ) ರಾಮಜನ್ಮಭೂಮಿ ಒಡೆತನದ ವಿವಾದಕ್ಕೆ ಇನ್ನೊಂದು ವಾರದಲ್ಲಿ ತೆರೆ ಬೀಳುವ ಸಾಧ್ಯತೆಗಳಿವೆ. 15ರೊಳಗೆ ಅಯೋಧ್ಯೆ ವಿವಾದಕ್ಕೆ ಸುಪ್ರಿಂ ಕೋರ್ಟು ಪರಿಹಾರ ನೀಡಲಿದೆ.

ಇದನ್ನೂ ಓದಿ: ಅಯೋಧ್ಯೆ ತೀರ್ಪು: ಶಾಂತಿ ಕಾಪಾಡಲು ರಾಜ್ಯಕ್ಕೆ ಕೇಂದ್ರದ ಎಚ್ಚರಿಕೆ

ಈಗಾಗಲೇ ಸತತ 40 ದಿನ ವಿಚಾರಣೆ ನಡೆಸಿ ಇತಿಹಾಸ ನಿರ್ಮಿಸಿರುವ ಸುಪ್ರೀಂ ಕೋರ್ಟು ಈಗ ತನ್ನ ತೀಪು ನೀಡಲು ದಿನಗಣನೆ ಆರಂಭಿಸಿದೆ. ಬಹುತೇಕ ಇದೇ ನವೆಂಬರ್ 15ಕ್ಕೆ ತೀರ್ಪು ಹೊರಬೀಳುವ ಸಾಧ್ಯತೆಗಳು ದಟ್ಟವಾಗಿವೆ.

ಸುಪ್ರೀಂ ಕೊರ್ಟಿನ ಮುಖ್ಯ ನ್ಯಾಯಮೂರ್ತಿ ರಾಂಜನ್ ಗೊಗೋಯಿ ಅವರು ಶುಕ್ರವಾರ ಉತ್ತರ ಪ್ರದೇಶದ ಮುಖ್ಯ ಕಾರ್‍ಯದರ್ಶಿ ಹಾಗೂ ಪೊಲೀಸ್ ಮಹಾ ನಿರ್ದೇಶಕರ ಜೊತೆ ಸಮಾಲೋಚನೆ ನಡೆಸಿದ್ದು, ತೀರ್ಪು ಪ್ರಕಟಣೆಗೆ ದಿನಗಣನೆ ಆರಂಭವಾಗಿರುವದಕ್ಕೆ ಪುಷ್ಠಿ ನೀಡಿದೆ.

ಮುಖ್ಯ ನ್ಯಾಯಮೂರ್ತಿ ಗೊಗೋಯಿ ಅವರ ಆಹ್ವಾನದ ಮೇರೆಗೆ ಉತ್ತರ ಪ್ರದೇಶದ ಮುಖ್ಯ ಕಾರ್‍ಯದರ್ಶಿ ರಾಜೇಂದ್ರ ಕುಮಾರ್‍ ತಿವಾರಿ ಹಾಗೂ ಪೊಲಿಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಸಿಮಗ್ ಅವರು ಸಿಜೆ ಕೊಠಡಿಯಲ್ಲಿ ಭೇಟಿ ಮಾಡಿ ರಾಜ್ಯದಲ್ಲಿನ ಪರಿಸ್ಥಿತಿಯ ಬಗ್ಗೆ ವಿವರಣೆ ನೀಡಿದರು.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...