cane growers ಕಬ್ಬು ಖರೀದಿಗೆ ಕಾರ್ಖಾನೆಗಳ ಹಿಂದೇಟು: ಬೆಳೆಗಾರರಿಗೆ ಸಂಕಷ್ಟ

cane growers

cane growers ಗುಣಮಟ್ಟದ ನೆಪ ನೀಡಿ ಖರೀದಿಗೆ ಕಬ್ಬು ಕಾರ್ಖಾನೆಗಳ ಹಿಂದೇಟು

ಬೆಳಗಾವಿ: ನೆರೆಯ ನಡುವೆಯೂ ಕಬ್ಬು ಬೆಳೆದ ರೈತರಿಗೆ ಕಬ್ಬು ( cane growers ) ಕಾರ್ಖಾನೆಗಳು ದೊಡ್ಡ ಶಾಕ್ ನೀಡಿವೆ. ಕಳಪೆ ಗುಣಮಟ್ಟದ ನೆಪ ನೀಡಿ ಕಬ್ಬು ಖರೀದಿಸಲು ಕಾರ್ಖಾನೆಗಳು ನಿರಾಕರಿಸಿದ್ದು, ಇದರಿಂದಾಗಿ ಬೆಳಗಾರರು ಸಂಕಷ್ಟಕ್ಕೆ ಗುರಿಯಾಗುವ ಪರಿಸ್ಥಿತಿ ಎದುರಾಗಿದೆ.

ಇದನ್ನೂ ಓದಿ: ನೆರೆ ಪರಿಹಾರಕ್ಕೆ 1700 ಕೋಟಿ ರೂ ಪರಿಹಾರ ಬಿಡುಗಡೆ ಮಾಡಿದ ಮೋದಿ…

ಬೆಳಗಾವಿ, ಬಾಗಲಕೋಟ ಮತ್ತು ಗದಗ ಜಿಲ್ಲೆಗಳಲ್ಲಿ ಕಾರ್ಖಾನೆಗಳು ರೈತರಿಂದ ಕಬ್ಬು ಖರೀದಿಗೆ ಹಿಂದೇಟು ಹಾಕಿವೆ. ಅದಕ್ಕೆ ಕಬ್ಬಿನ ಗುಣಮಟ್ಟ ಸೂಕ್ತವಿಲ್ಲ ಎಂಬ ಕಾರಣ ಮುಂದೊಡ್ಡಿವೆ ಎಂದು ವರದಿಯಾಗಿದ್ದು, ಬೆಳೆಗಾರರನ್ನು ಚಿಂತಗೆ ದೂಡಿದೆ.

ನೆರೆ ಬಂದ ಕಾರಣ ಬೆಳೆ ಕಬ್ಬಿನ ಜೊಲ್ಲೆಗಳು ಬಾಗಿದಂತಾಗಿದ್ದು, ಅವನ್ನು ಕೊಳ್ಳಲು ಕಾರ್ಖಾನೆಗಳು ಹಿಂದೇಟು ಹಾಕುತ್ತಿವೆ. ಸುಮಾರು ಎರಡು ವಾರ ನೀರಿನಲ್ಲಿ ಮುಳುಗಿದ್ದ ಕಬ್ಬಿನಲ್ಲಿ ಸಕ್ಕರೆಯ ಅಂಶ ತೀರಾ ಕಡಿಮೆ. ಸಕ್ಕರೆಯೇ ಇಲ್ಲ ಎಂದ ಮೇಲೆ ಕಬ್ಬು ಕೊಳ್ಳುವುದಾದರೂ ಏತಕ್ಕೆ ಎಂದು ಕಾರ್ಖಾನೆಗಳು ಸಬೂಬು ಹೇಳಿವೆ.

ಕಬ್ಬಿನ ಸಿಹಿ ಅಂಶ ಕೊಂಚ ಕಡಿಮೆಯಾಗಿರಬಹುದು ಎಂಬ ಖಾರಣಕ್ಕೆ ಮಾರುಕಟ್ಟೆಗಿಂತ ಕಡಿಮೆ ದರ ನೀಡಿ ಎಂದು ರೈತರು ಕೇಳಿದರೂ ಕಾರ್ಖಾನೆಗಳು ಅವರ ಮನವಿಗೆ ಕಿವಿಗೊಡದಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರವಾಗಿಸಿದೆ.

ಈ ಮಧ್ಯೆ ಸಮಸ್ಯೆಯ ಬಗ್ಗೆ ಕಾರ್ಖಾನೆ ಮಾಲೀಕರು ಜೊತೆ ಮಾತುಕತೆ ನಡೆಸಿಸ ರೈತರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲು ಅಧಿಖಾರಿಗಳಿಗೆ ಸೂಚನೆ ನೀಡಿರುವುದಾಗಿ ಸಕ್ಕರೆ ಸಚಿವ ಸಿಟಿ ರವಿ ಹೇಳಿದ್ದಾರೆಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...