cancer breakthrough ಕ್ಯಾನ್ಸರ್ ತಡೆ: ಬೆಂಗಳೂರಿಗನ ಮಹತ್ವದ ಸಂಶೋಧನೆಗೆ ತಲೆದೂಗಿದ ಅಮೆರಿಕ

cancer breakthrough
rajah vijay kumar

cancer breakthrough ಕ್ಯಾನ್ಸರ್ ಕಣಗಳು ಹರಡದಂತೆ ತಡೆಯುವ ಸಾಧನದ ಸಂಶೋಧನೆ

ಬೆಂಗಳೂರು: ನಾಗರಿಕ ಸಮಾಜದ ಬಲುದೊಡ್ಡ ವೈರಿಯಾಗಿರುವ ( cancer breakthrough ) ಕ್ಯಾನ್ಸರ್‍ ಮಹಾಮಾರಿ ಹರಡುವಿಕೆಯನ್ನು ತಡೆಯುವ ಸಾಧನವನ್ನು ಬೆಂಗಳೂರಿಗ ತಯಾರಿಸಿದ್ದು, ಮಹಾಮಾರಿಯ ಹತೋಟಿಯಲ್ಲಿ ಇದು ಮಹತ್ವದ ಸಂಶೋಧನೆ ಎಂದೇ ಹೇಳಲಾಗಿದೆ.

ಇದನ್ನೂ ಓದಿ: ಗೋಪಾಲಯ್ಯ ರಾಜೀನಾಮೆಗೆ ಅಸಲಿ ಕಾರಣ ಬಿಚ್ಚಿಟ್ಟ ಎಚ್ಡಿಕೆ

ಬೆಂಗಳೂರಿನ ರಾಜಾ ವಿಜಯ್ ಕುಮಾರ್‍ ಎಂಬ ವೈದ್ಯಕೀಯ ಇಂಜಿನಿಯರ್ ತಯಾರಿಸಿರುವ ಸೈಟೋಟ್ರೋನ್ ಎಂಬ ಉಪಕರಣವನ್ನು ಬಳಸಿ ಕ್ಯಾನ್ಸರ್‍ ಕಣಗಳು ರೋಗಿಯ ದೇಹದಲ್ಲಿ ಹರಡದಂತೆ ತಡೆಯಲು ಸಾಧ್ಯ ಎನ್ನಲಾಗಿದೆ. ಇದು ಸುಮಾರು 30 ವರ್ಷಗಳ ಸಂಶೋಧನೆಯ ಫಲ ಎಂದು ಹೇಳಲಾಗಿದೆ.

ಕ್ಯಾನ್ಸರ್‍ ವಿರುದ್ಧ ಮಾನವನ ಹೋರಾಟದಲ್ಲಿ ಮಹತ್ವದ ಸಂಶೋಧನೆ ಎನ್ನಲಾಗಿರುವ ಈ ಸೈಟೋಟ್ರೋನ್‌ ಯಂತ್ರ ಮತ್ತು ಅದರ ಹಿಂದಿನ ವೈಜ್ಞಾನಿಕ ಸಂಶೋಧನೆಯನ್ನು ಗುರುತಿಸಿರುವ ಅಮೆರಿಕದ ಆಹಾರ ಮತ್ತು ಔಷಧ ದೃಢೀಕರಣ ಇಲಾಖೆಯು ಇದಕ್ಕೆ ಹೊಸ ಆವಿಷ್ಕಾರದ ಸ್ಥಾನಮಾನ ನೀಡಿದೆ.

ಸಾಮಾನ್ಯವಾಗಿ ಮನುಷ್ಯನ ದೇಹದಲ್ಲಿರುವ ಜೀವಕಣಗಳು ಸರಾರಿ 50 ಬಾರಿ ವಿಘಟನೆ ಹೊಂದುತ್ತವೆ. ಆ ಬಳಿಕ ಅದರ ವಿಘಟನೆ ನಿಲ್ಲುತ್ತದೆ. ಆದರೆ ಕ್ಯಾನ್ಸರ್‍ ಕಣಗಳಲ್ಲಿ ಈ ಗುಣಗಳು ನಾಶವಾಗುತ್ತವೆ. ಹಾಗಾದ ಕಣಗಳಲ್ಲಿ ವಿಘಟನೆ ತಡೆಯುವ ಮೂಲಕ ಹರಡುವಿಕೆ ತಡೆಯುವುದೇ ತಮ್ಮ ಸಂಶೋಧನೆಯ ಗುರಿ ಎನ್ನುತ್ತಾರೆ ವಿಜಯ್.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...