ದೇಶದ ಮಹಿಳೆಯರಿಗಾಗಿ ಪ್ರಣಾಳಿಕೆ ಸಿದ್ಧತೆ: ಡಾ.ಪುಷ್ಪ ಅಮರನಾಥ್

ಮೈಸೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಹಿನ್ನೆಲೆ ರೇಸ್ ನಲ್ಲಿ ನಾಲ್ಕೈದು ಶಾಸಕಿಯರು ಇದ್ದು ಒಬ್ಬರಿಗೆ ಸಚಿವ ಸ್ಥಾನ ಸಿಗುವ ಭರವಸೆ ಇದೆ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ತಿಳಿಸಿದರು.

ಸಚಿವ ಸಂಪುಟ ವಿಸ್ತರಣೆ ವಿಚಾರ ಸಂಬಂಧ ಮಹಿಳೆಯರಿಗೂ ಸಚಿವ ಸ್ಥಾನ ಸಿಗಲಿದೆ. ಸಚಿವ ಸ್ಥಾನದ ರೇಸ್ ನಲ್ಲಿ ನಾಲ್ಕೈದು ಮಹಿಳಾ ಶಾಸಕಿಯರಿದ್ದಾರೆ ಅವರುಗಳಲ್ಲಿ ಯಾರನ್ನಾದರೂ ಪಕ್ಷದ ವರಿಷ್ಠರು ಆಯ್ಕೆ ಮಾಡಲಿದ್ದಾರೆ ಎನ್ನುವ ಭರವಸೆ ಇದೆ. ಮಹಿಳಾ ಶಾಸಕಿಯರಲ್ಲಿ ಯಾರಿಗಾದರೂ ಸಚಿವ ಸ್ಥಾನ ನೀಡಿದ್ರು ಸಂತೋಷ ಎಂದರು.

ಇನ್ನೂ ಈ ಬಾರಿಯ ನಿಗಮ ಮಂಡಳಿ ಸ್ಥಾದಲ್ಲೂ ಅತಿ ಹೆಚ್ಚು ಸ್ಥಾನವನ್ನ ಮಹಿಳೆಯರಿಗೆ ನೀಡಲಿದೆ ,ಈ ಬಗ್ಗೆ ನಮ್ಮ ಪಕ್ಷದ ವರಿಷ್ಠರು ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರನ್ನ ಮನವಿ ಮಾಡಿಕೊಂಡಿದ್ದೇವೆ ಎಂದು ಡಾ. ಪುಷ್ಪ ಅಮರನಾಥ್ ಹೇಳಿದರು.

ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆಯಾದ ಬಳಿಕ ಮೊದಲ ಬಾರಿಗೆ ಡಾ.ಪುಷ್ಪ ಅಮರನಾಥ್ ಅವರು ಮೈಸೂರಿನಲ್ಲಿ ಪತ್ರಿಕಾಘೋಷ್ಠಿ ನಡೆಸಿ ಮಾತನಾಡಿದರು.

ದೇಶದ ಮಹಿಳೆಯರಿಗಾಗಿ ಪ್ರಣಾಳಿಕೆ ಸಿದ್ಧತೆ…

2019ರ ಲೋಕಸಭಾ ಚುನಾವಣೆಯ ಹಿನ್ನೆಲೆ. ದೇಶದ ಮಹಿಳೆಯರಿಗಾಗಿ ಪ್ರಣಾಳಿಕೆ ಸಿದ್ಧತೆ ಮಾಡಲಾಗುವುದು, ಮಹಿಳೆಯರ ಧ್ವನಿಯನ್ನ ನಮ್ಮ ಪ್ರಣಾಳಿಕೆಯಲ್ಲಿ ಅಳವಡಿಸುತ್ತೇವೆ. ಮೈಸೂರಿನಲ್ಲಿ ಡಿ.8ರಂದು ಪ್ರಣಾಳಿಕೆ ಬಗ್ಗೆ ಮಹಿಳೆಯರಿಂದ ಚರ್ಚೆ ಮಾಡಲಾಗುತ್ತದೆ. ಉಚಿತವಾಗಿ ಸಾನಿಟರಿ ಪ್ಯಾಡ್ ನೀಡುವ ಹಾಗೂ ಮಹಿಳೆಯರಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲಾಗುತ್ತೆ ಎಂದು ಡಾ.ಪುಷ್ಪ ಅಮರನಾಥ್ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...