cabinet expansion ಸೋಮವಾರ ಯಡಿಯೂರಪ್ಪ ಸಂಪುಟ ವಿಸ್ತರಣೆ?

cabinet circus
cm bsy and ramesh jarkiholi

cabinet expansion ಗೆದ್ದ ಅನರ್ಹರಿಗಷ್ಟೇ ಮಂತ್ರಿಗಿರಿ, ಎಂಟಿಬಿ, ವಿಶ್ವನಾಥ್‌ಗೆ ಇಲ್ಲ

ಬೆಂಗಳುರು: ಉಪಚುಣಾವಣೆ ಫಲಿತಾಂಶದ ಬೆನ್ನಲ್ಲಿಯೇ ರಾಜ್ಯ ( cabinet expansion ) ಸಚಿವ ಸಂಪುಟ ವಿಸ್ತರಣೆಗೆ ಕಾಲ ಕೂಡಿಬಂದಿದೆ. ಈ ಹಿಂದೆ ನೀಡಿದ್ದ ಭರವಸೆಯಂತೆಯೇ ಗೆದ್ದ ಅನಃð ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಬಿಎಸ್ವೈ ತೀರ್ಮಾನಿಸಿದ್ದು, ಸೋಮವಾರ ವಿಸ್ತರಣೆಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ರಾಜೀನಾಮೆ ವಾಪಸಿಗೆ ಸಿದ್ದುಗೆ ಹೈಕಮಾಂಡ್ ದುಂಬಾಲು

ಚುಣಾವಣೆಯಲ್ಲಿ ಸ್ಪರ್ಧಿಸಿ ಸೋಲನುಭವಿಸಿದ ಅನರ್ಹ ಶಾಸಕರಾದ ಎಂಟಿಬಿ ನಾಗರಾಜ್ ಮತ್ತು ಎಚ್. ವಿಶ್ವನಾಥ್ ಅವರಿಗೆ ಸದ್ಯ ಸಚಿವ ಸ್ಥಾನ ಸಿಗುತ್ತಿಲ್ಲ. ಚುನಾವಣೆಯಲ್ಲಿ ಗೆದ್ದ ಅನರ್ಹ ಶಾಸಕರಿಗಷ್ಟೇ ಮಂತ್ರಿ ಸ್ಥಾನ ನೀಡಲು ನಿರ್ಧರಿಸಲಾಗಿದೆ.

ಈ ಕುರಿತು ಮುಖಯಮಂತ್ರಿ ಯಡಿಯೂರಪ್ಪ ಅವರು ಒಂದೆರಡು ದಿನಗಳಲ್ಲಿ ಪಕ್ಷದ ದಿಲ್ಲಿ ಪ್ರಭುಗಳ ಸಂಗಡ ಚರ್ಚೆ ನಡೆಸಿಸ ಅಂತಿಮ ತೀರ್ಮಾನಕ್ಕೆ ಬರಲಿದ್ದು, ಬಹುಪಾಲು ಸೋಮವಾರ ಸಂಪುಟ ವಿಸ್ತರಣೆ ಆಗಬಹುದು ಎಂದು ಹೇಳಲಾಗುತ್ತಿದೆ.

ಈ ಮಧ್ಯೆ ಎಂಟಿಬಿ ಮತ್ತು ವಿಶ್ವನಾಥ್ ಅವರಿಗೂ ಮಂತ್ರಿಭಾಗ್ಯ ಕರುಣಿಸುವಂತೆ ರೆಬೆಲ್‌ಗಳ ಲೀಡರ್‍ ರಮೇಶ್ ಜಾರಕಿಹೊಳಿ ಅವರು ಮುಖ್ಯಮಂತ್ರಿ ಮೇಲೆ ಸಾಕಷ್ಟು ಒತ್ತಡ ಹೇರಿದ್ದರೂ ಈಗಿರುವ ಸಂದರ್ಭದಲ್ಲಿ ಅದು ಆಗದ ಮಾತು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...