cabinet exercise ಯಡಿಯೂರಪ್ಪ ಸಂಪುಟದಿಂದ 5 ಸಚಿವರಿಗೆ ಕೊಕ್, ಎಲ್ಲ ಪಕ್ಷಾಂತರಿಗಳಿಗೂ ಮಣೆ

cabinet exercise
cm bs yediyurappa

cabinet exercise ಹೈಕಮಾಂಡ್ ಆಣತಿ ಮತ್ತು ಕೊಟ್ಟ ಮಾತು ಉಳಿಸಿಕೊಳ್ಳಲು ಬಿಎಸ್ವೈ ಕಸರತ್ತು

ಬೆಂಗಳೂರು: ಸಂಪಟು ವಿಸ್ತರಣೆ ಕಸರತ್ತಿಗೆ ಮತ್ತೆ ಚಾಲನೆ ಸಿಕ್ಕಿದ್ದು ( cabinet exercise ) ಉಪಸಮರ ಗೆದ್ದಿರುವ ಎಲ್ಲ ಪಕ್ಷಾಂತರಿಗಳಿಗೆ ಮಣೆ ಹಾಕಲು ಮುಖ್ಯಮಂತ್ರಿ ಬದ್ಧರಾಗಿದ್ದಾರೆ. ಇದಕ್ಕಾಗಿ ಹಾಳಿ ಸಂಪುಟದಿಂದ ಕೆಲವರನ್ನು ಕೈಬಿಡಲು ಸಹ ಬಿಎಸ್ವೈ ನಿರ್ಧರಿಸಿದ್ದಾರೆ.

ಇದನ್ನೂ ಓದಿ: ಮಾತು ತಪ್ಪಿದ ಕಾರಣ ಆನೆಗೊಂದಿ ಉತ್ಸವದಿಂದ ಬಿಎಸ್ವೈ ಗೈರು

ಈ ಬಗ್ಗೆ ಪಕ್ಷದ ಪ್ರಧಾನ ಕಾರ್ಯದರ್ಶಿಗಳ ಜೊತೆ ಗುರುವಾರ ಒಂದು ಸುತ್ತಿನ ಸಮಾಲೋಚನೆ ನಡೆಸಿದ ಯಡಿಯೂರಪ್ಪ ಅವರು ಈಗಿರುವವವರ ಪೈಕಿ ಕನಿಷ್ಟ ಐವರನ್ನು ಸಂಪುಟದಿಂದ ಕೈಬಿಡಲು ಮನಸ್ಸು ಮಾಡಿರುವುದಾಗಿ ತಿಳಿಸಿದ್ದಾರೆ. ಈ ಕುರಿತು ಕೋರ್ ಕಮಿಟಿ ಸಭೆಯಲ್ಲಿಯೂ ಪ್ರಸ್ತಾಪ ಮಾಡುವದಾಗಿ ಅವರು ಹೇಳಿದ್ದಾರೆನ್ನಲಾಗಿದೆ.

ಗೆದ್ದ ಪಕ್ಷಾಂತರಿಗಳ ಪೈಕಿ ಕೆಲವರನ್ನಷ್ಟೇ ಮಂತ್ತಿ ಮಾಡಿ ಉಳಿದ ಸ್ಥಾನಗಳಿಗೆ ನಿಷ್ಠರನ್ನು ಪರಿಗಣಿಸಿ ಎಂಬುದು ಹೈಕಮಾಂಡ್ ನಿಲುವಾಗಿದೆ. ಇದಕ್ಕೆ ಪ್ರತಿಯಾಗಿ ಪಕ್ಷಾಂತರಿಗಳ ಜೊತೆಗೆ ಕೆಲ ಹಾಲಿ ಸಚಿವರನ್ನು ಕೈಬಿಟ್ಟು ಉಳಿದ ನಿಷ್ಠರಿಗೆ ಅವಕಾಶ ಕಲ್ಪಿಸುವುದು ಯಡಿಯೂರಪ್ಪ ಅವರ ಲೆಕ್ಕಾಚಾರವಾಗಿದೆ ಎಂದು ಮೂಲಗೂ ಹೇಳಿವೆ.

ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸೇರಿ ಮೂರ್‍ನಾಲ್ಕು ಮಂದಿ ಸಚಿವರಿಂದ ರಾಜೀನಾಮೆ ಪಡೆದು ಸಂಪುಟ ವಿಸ್ತರಣೆ ಮಾಡುವುದು ಬಿಎಸ್ವೈ ತಂತ್ರವಾಗಿದೆ ಎನ್ನಲಾಗುತ್ತಿದೆ.

ಹೀಗೆ ಸಂಪುಟದಲ್ಲಿ ಮಂತ್ರಿ ಸ್ಥಾನ ಕಳದುಕೊಳ್ಳುವವರು ಪಟ್ಟಿಯಲ್ಲಿ ಬಸವರಾಜ್ ಬೊಮ್ಮಾಯಿ, ಸಿಸಿ ಪಾಟೀಲ್, ಶಶಿಕಲಾ ಜೊಲ್ಲೆ ಅವರ ಹೆಸರು ಇದ್ದು, ಇದಕ್ಕಿಂತ ಮುಖ್ಯವಾಗಿ ಜಗದೀಶ್ ಶೆಟ್ಟರ್ ಅವರ ಹೆಸರೂ ಕೇಳಿಬರುತ್ತಿದೆ ಎಂದು ಮೂಲಗಳು ಹೇಳಿವೆ.

ಈ ಪೈಕಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರಿಗೆ ಯಾವುದಾದರೂ ರಾಜ್ಯದ ರಾಜ್ಯಪಾಲರನ್ನಾಗಿಸಿ ಎಂದು ಬಿಎಸ್ವೈ ಹೈಕಮಾಂಡನ್ನು ಕೇಳಿದ್ದಾರೆ ಎಂದು ತಿಳಿದುಬಂದಿದೆ. ಹೈಕಮಾಂಡ್ ಈ ಸೂತ್ರಕ್ಕೆ ಒಪ್ಪಿದರೇ ಇದೇ 17ರಂದು ಸಂಪುಟ ವಿಸ್ತರಣೆ ಮಾಡುವುದು ಯಡಿಯೂರಪ್ಪ ಇಚ್ಛೆಯಾಗಿದೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...