CAA support ಪೌರತ್ವ ಕಾಯ್ದೆ ಬೆಂಬಲಿಸಿ ಮೋದಿಗೆ 5.5 ಲಕ್ಷ ಮಂದಿ ಪತ್ರ

CAA support

CAA support ಪೌರತ್ವ ಕಾಯಿದೆ ಜಾರಿ ಮಾಡಿಯೇ ಸಿದ್ಧ ಎಂದ ಅಮಿತ್ ಶಾ

ಹೊಸದಿಲ್ಲಿ: ವಿವಾದಿತ ಪೌರತ್ವ ಕಾಯಿದೆ ವಿರುದ್ಧ ದೇಶಾದ್ಯಂತ ಪ್ರತಿಭಟನೆ ( CAA support) ನಡೆಯುತ್ತಿರುವ ಸಂದರ್ಭದಲ್ಲಿಯೇ ಕಾಯಿದೆಗೆ ಅಷ್ಟೇ ವ್ಯಾಪಕ ಮಟ್ಟದಲ್ಲಿ ಬೆಂಬಲವೂ ವ್ಯಕ್ತವಾಗಿದೆ ಎಂಬುದಕ್ಕೆ ಪ್ರಧಾನಿ ಮೋದಿ ಅವರಿಗೆ ಬಂದಿರುವ ಪತ್ರಗಳೇ ಸಾಕ್ಷಯಾಗಿದೆ.

ಇದನ್ನೂ ಓದಿ: 2400 ಕೋಟಿ ರೂ ’ಬಂಡವಾಳ’ ಗಿಟ್ಟಿಸಿಕೊಂಡ ಬಿಜೆಪಿ

ನೆರೆ ದೇಶಗಳಿಂದ ವಲಸೆ ಬಂದವರಿಗೆ ಪೌರತ್ವ ನೀಡುವ ಈ ಕಾಯಿದೆಯನ್ನು ಬೆಂಬಲಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸುಮಾರು 5.5 ಲಕ್ಷ ಮಂದಿ ಪತ್ರ ಬರೆದಿರುವ ಮಹತ್ವದ ಅಂಶ ಇದೀಗ ಬಹಿರಂಗಗೊಂಡಿದೆ.

ಖುದ್ದು ಗೃಹ ಮಂತ್ರಿ ಅಮಿತ್ ಶಾ ಈ ವಿಚಾರವನ್ನು ಬಹಿರಂಗಪಡಿಸಿದ್ದು, ಯಾರು ಎಷ್ಟೇ ಬೊಬ್ಬಿಟ್ಟರೂ ಪೌರತ್ವ ಕಾಯಿದೆಯ ಜಾರಿಯನ್ನು ತಡೆಯಲು ಸಾಧ್ಯವಿಲ್ಲ ಎಂದು ಸವಾಲು ಹಾಕಿದ್ದಾರೆ. ಆ ಮೂಲಕ ಕಾಯಿದೆ ವಿರೋಧಿಗಳಿಗೆ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ.

ಕಾಯಿದೆ ಬೆಂಬಲಿಸಿಸ ಬಂದಿರುವ ಅಂಚೆ ಚೀಟಿಗಳನ್ನು caa ಎಂಬ ಬೋರ್ಡಿನಲ್ಲಿ ಚಿತ್ತಾಕರ್ಷಕವಾಗಿ ಅನಾವರಣಗೊಳಿಸಲಾಗಿದ್ದು, ಈ ವಿನ್ಯಾಸ ಲಿಮ್ಕಾ ಬುಕ್ ಆಫ್ ರೆಕಾರ್ಡ್ ಸೇರುವ ಸಾಧ್ಯತೆ ಇದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...