Ramesh baffled ಗೋಕಾಕ್ ‘ಸಾಹುಕಾರ’ರ ದಿಕ್ಕೆಡಿಸಿದ ಎಚ್ಡಿಕೆ ನಡೆ

ramesh
ramesh jarkiholi

Ramesh baffled ಅಶೋಕ್ ಪೂಜಾರಿ ಎಂಟ್ರಿ: ಕಂಡ ದೈವಕ್ಕೆ ಕೈ ಮುಗಿದ ರಮೇಶ್

ಗೋಕಾಕ್: ಮಾಜಿ ಸಿಎಂ ಕುಮಾರಸ್ವಾಮಿ (  Ramesh baffled ) ಅವರ ಜಾಣ ನಡೆಗೆ ರಮೇಶ್ ಜಾರಕಿಹೊಳಿ ಬೆಚ್ಚಿದ್ದಾರ ಎಂಬ ಪ್ರಶ್ನೆ ಕ್ಷೇತ್ರದಲ್ಲಿ ವ್ಯಾಪಕವಾಗಿ ಕೇಳಿ ಬರುತ್ತಿದೆ.

ಕಳೆದ ಚುನಾವಣೆಯಲ್ಲಿ ಪರಭವಾಗೊಂಡಿದ್ದ ಅಶೋಕ್ ಪೂಜಾರಿ ಅವರಿಗೆ ಜೆಡಿಎಸ್ ಟಿಕೆಟ್ ನೀಡುವ ಮೂಲಕ ರಮೇಶ್ ಜಾರಕಿಹೊಳಿ ಅವರನ್ನು ಕಟ್ಟಿ ಹಾಕಲು ಕುಮಾರಸ್ವಾಮಿ ತಂತ್ರ ಹೆಣೆದಿದ್ದಾರೆ.

ಸಹಜವಾಗಿಯೇ ಜೆಡಿಎಸ್ ನಡೆ ರಮೇಶ್ ಅವರಲ್ಲಿ ಆತಂಕಕ್ಕೆ ಕಾರಣವಾಗಿದೆ. ಕಾಂಗ್ರೆಸ್ನಿಂದ ಸೋದರ ಲಖನ್ ಈಗಾಗಲೇ ಕಣದಲ್ಲಿದ್ದು ಅಶೋಕ್ ಆಗಮನ ತಮ್ಮ ಆಯ್ಕೆಗೆ ಮಗ್ಗುಲ ಮುಳ್ಳಾಗಿ ಪರಿಣಮಿಸಬಹುದು ಎಂಬುದು ರಮೇಶ್ ಚಿಂತೆ ಎನ್ನಲಾಗಿದೆ.

ಈ ಕುರಿತು ತಮ್ಮ ಬೆಂಬಲಿಗರ ಜೊತೆ ಸುದೀರ್ಘ ಸಭೆ ನಡೆಸಿದ ರಮೇಶ್ ನಂತರ ಟೆಂಪಲ್ run ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಅಶೋಕ್ ಪೂಜಾರಿ ಅವರು ಕಾಂಗ್ರೆಸ್ ಟಿಕೆಟ್ ಬಯಸಿದ್ದರು. ಆದರೆ ಸತೀಶ್ ಒತ್ತಾಯಕ್ಕೆ ಮಣಿದ ಕೈ ಪಕ್ಷ ಲಖನ್ ಅವರಿಗೆ ಮಣೆ ಹಾಕಿತು.

ಈ ಪರಿಸ್ಥಿತಿಯ ಲಾಭ ಪಡೆದ ಕುಮಾರಸ್ವಾಮಿ ಪೂಜಾರರನ್ನು ಪಕ್ಷಕ್ಕೆ ಕರೆ ತಂದು ಟಿಕೆಟ್ ನೀಡಿದ್ದಾರೆ.

ಒಟ್ಟಿನಲ್ಲಿ ಗೋಕಾಕ್ ತೀವ್ರ ಕುತೂಹಲ ಕೆರಳಿಸಿದ್ದು ಉಪ ಚುನಾವಣೆಯ ಪ್ರತಿಷ್ಟಿತ ಕಣಗಳಲ್ಲಿ ಒಂದಾಗಿ ಹೊರಹೊಮ್ಮಿದೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...