bypoll survey ಉಪಕಣ ಸಮೀಕ್ಷೆ: 15 ಕ್ಷೇತ್ರಗಳ ಪೈಕಿ 8ರಲ್ಲಿ ಜಿದ್ದಾಜಿದ್ದಿ ಹೋರಾಟ

bypoll survey

bypoll survey ಉಪ ಚುನಾವಣೆ: 6 ಕಡೆ ಪ್ರಬಲ ಪೈಪೋಟಿ ಇದ್ದರೇ 2 ಕಡೆ ಕಣ ಹುರಿಗೊಂಡಿಲ್ಲ

ಬೆಂಗಳೂರು: ಮುಂಬರುವ ಉಪ ಚುನಾವಣೆಯತ್ತ ಇಡೀ ರಾಜ್ಯದ ಗಮನ ( bypoll survey ) ನೆಟ್ಟಿರುವ ಸಂದರ್ಭದಲ್ಲಿಯೇ ಜನರ ನಾಡಿ ಅರಿವ ಸಮೀಕ್ಷೆಗಳು ಕಳೆಗಟ್ಟಿವೆ. ರಾಜ್ಯದ ರಾಜಕೀಯದ ದಿಕ್ಕನ್ನೇ ಬದಲಿಸಬಲ್ಲ ಈ ಚುನಾವಣೆಯಲ್ಲಿ ಗೆಲ್ಲುವವರಾರು, ಸೋಲೋರ್‍ಯಾರು ಎಂಬುದರ ಚರ್ಚೆ ಜೋರಾಗಿದೆ.

ಇದನ್ನೂ ಓದಿ: ಚುನಾವಣೆ ಬಳಿಕ ಕೈ-ಬಿಜೆಪಿಯವ್ರು ಗೌಡ್ರ ಮನೆ ಬಾಗಿಲಿಗೆ ಬರ್ತಾರೆ

ಮೈತ್ರಿ ಸರಕಾರವನ್ನು ಉರುಳಿಸಿ ಅಧಿಕಾರಕ್ಕೇರಿರುವ ಬಿಜೆಪಿಗೆ ಮತ್ತು ಅದರಲ್ಲಿಯೂ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಅಧಿಕಾರ ಉಳಿಸಿಕೊಳ್ಳುವ ತವಕವಿದ್ದರೇ, ತಮ್ಮ ಅಧಿಕಾರ ಕಿತ್ತುಕೊಂಡವರನ್ನು ಮಣ್ಣುಮುಕ್ಕಿಸುವುದು ಕೈ-ದಳ ನಾಯಕರ ಪಣವಾಗಿದೆ.

ಈವರೆಗಿನ ಚುನಾವಣಾ ಗಾಳಿಯ ಜಾಡು ಹಿಡಿದು ಹೋದರೆ ಹದಿನೈದು ಕ್ಷೇತ್ರಗಳಲ್ಲಿಯೂ ಪೈಪೋಟಿ ಕಂಡುಬಂದರೂ ವಿವಿಧ ಸಮೀಕ್ಷೆಗಳನ್ನು ಸಮೀಕರಿಸಿ ನೋಡಿದಾಗ ಭಿನ್ನಮತ, ಬಂಡಾಯದ ಒಳೇಟು ಹೇಳುವ ಕತೆಯೇ ಬೇರೆ ಇದೆ.

ಈಗಾಗಲೇ ನಾನಾ ಸಮೀಕ್ಷೆಗಳು ಬಂದಿವೆ. ಜನರ ನಾಡಿ ಹಿಡಿಯುವ ಕೆಲಸ ಆಗಿದೆ. ಇವುಗಳನ್ನು ಒಟ್ಟು ಮಾಡಿ ನೋಡಿದಾಗ ಹಲವು ಅಚ್ಚರಿಗಳು ತೆರದುಒಳ್ಳುತ್ತಿವೆ. ಪಕ್ಷಗಳನ್ನು ಬದಿಗಿತ್ತು ನೋಡಿದಾಗ ಚುನಾವಣಾ ಕಣ ಎಷ್ಟು ತೀವ್ರವಾಗಿದೆ ಎಂಬುದು ತಿಳಿಯುತ್ತದೆ.

ಚುನಾವಣೆಗೆ ಹೋಗುತ್ತಿರುವ 15 ಕ್ಷೇತ್ರಗಳ ಪೈಕಿ ಎಂಟು ಕಡೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿದ್ದರೇ ಐದು ಕಡೆ ಪ್ರಬಲ ಪೈಪೋಟಿ ಹಾಗೂ ಉಳಿಸದೆರಡು ಕಡೆ ಅಷ್ಟೇನೂ ಪೈಪೋಟಿ ಇಲ್ಲ ಎಂಬುದು ಸಮೀಕ್ಷೆಗಳಿಂದ ತಿಳಿದುಬಂದಿದೆ.

ಜಿದ್ದಾಜಿದ್ದಿಯ ಕ್ಷೇತ್ರಗಳು: ಹೊಸಕೋಟೆ, ಗೋಕಾಕ, ಹುಣಸೂರು, ಕೆಆರ್‍ ಪೇಟೆ, ರಾಣೆಬೆನ್ನೂರು, ಯಶವಂತಪುರ, ವಿಜಯನಗರ, ಚಿಕ್ಕಬಳ್ಳಾಪುರ
ಪ್ರಬಲ ಪೈಪೋಟಿಯ ಕ್ಷೇತ್ರಗಳು: ಅಥಣಿ, ಹಿರೇಕೆರೂರು, ಕಾಗವಾಡ, ಮಹಾಲಕ್ಷ್ಮಿ ಲೇಔಟ್, ಶಿವಾಜಿನಗರ
ಪೈಪೊಟಿ ಕಡಿಮೆ ಇರುವ ಕ್ಷೇತ್ರಗಳು: ಕೆಆರ್‍ ಪುರ, ಯಲ್ಲಾಪುರ

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...