bypoll campaign ಗುಡುಗಿದ ಬಿಎಸ್ವೈ, ಕಣ್ಣೀರಿಟ್ಟ ಎಚ್ಡಿಕೆ, ಎಚ್ಚರಿಸಿದ ಡಿಕೆ

bypoll campaign
electioneering

bypoll campaign ಉಪಸಮರ: ರಾಜ್ಯದಲ್ಲಿ ಪ್ರಚಾರದ ರಂಗು, ನಿಂದನೆಯ ಗುಂಗು

ಬೆಂಗಳೂರು: ರಾಜ್ಯದ ರಾಜಕೀಯ ದಿಕ್ಕನ್ನೇ ಬದಲಿಸುವ ನಿರೀಕ್ಷೆ ಇರುವ ( bypoll campaign ) ಉಪ ಚುನಾವಣೆಯ ದಿನ ಹತ್ತಿರವಾಗುತ್ತಿದ್ದಂತೆಯೇ ಪ್ರಚಾರದ ರಂಗು ತೀವ್ರವಾಗಿದೆ. ಅದೇ ರೀತಿ ರಾಜಕೀಯ ಮುಖಂಡರ ಪರಸ್ಪರ ನಿಂದನೆಯ ಗುಂಗೂ ಸಹ ಹೆಚ್ಚಿದೆ.

ಇದನ್ನೂ ಓದಿ: ಮಧ್ಯಂತರ ಚುನಾವಣೆಗೆ ನಾವ್ ರೆಡಿ: ಕುಮಾರಸ್ವಾಮಿ ಹೊಸ ಬಾಂಬ್

ನೀನಾ, ನಾನಾ ಎಂದು ರಾಜಕೀಯ ನಾಯಕರು ಪರಸ್ಪರರ ವಿರುದ್ಧ ತೊಡೆ ತಟ್ಟುತ್ತಿದ್ದಾರೆ. ಹದಿನೈದು ಕ್ಷೇತ್ರಗಳಲ್ಲಿ ಉಪ ಸಮರ ನಡೆಯುತ್ತಿದ್ದು, ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ನಾಯಕರನ್ನು ಭಾರೀ ಗೌಜಿನಲ್ಲಿಟ್ಟಿದೆ.

ಚುನಾವಣೆ ಕೇವಲ ಒಂದು ವಾರವಿರುವ ಸಂದರ್ಭದಲ್ಲಿ ಬುಧವಾರ ರಾಜಕೀಯ ಪ್ರಚಾರ ಜೋರು ಗತಿಯಲ್ಲಿತ್ತು. ಸಿಎಂ ಯಡಿಯೂರಪ್ಪ ಪ್ರತಿಪಕ್ಷಗಳ ವಿರುದ್ಧ ಗುಡುಗಿದರೇ, ಮಾಜಿ ಸಿಎಂ ಎಚ್ಡಿ ಕುಮಾರಸ್ವಾಂಇ ಮತ್ತೆ ಕಣ್ಣಿರಿಗೆ ಮೊರೆ ಹೋದರ. ಇನ್ನು ಡಿಕೆ ಶಿವಕುಮಾರ್‍ ಸಹ ಎದುರಾಳಿಗಳ ವಿರುದ್ಧ ಕೆಂಡ ಕಾರಿದರು.

ಹೊಸಕೋಟೆಯಲ್ಲಿ ಬಿಜೆಪಿ ಕಾರ್‍ಯಕರ್ತನ ಮೇಲೆ ಹಲ್ಲೆಗೆ ಮುಖಯಮಂತ್ರಿ ಯಡಿಯೂರಪ್ಪ ತೀವ್ರ ಸ್ವರೂಪದಲ್ಲಿ ಪ್ರತಿಕ್ರಿಯಿಸಿದರ. ರಾಜ್ಯದಲ್ಲಿರುವದು ಬಿಜೆಪಿ ಸರಕಾರ ಎಂಬುದನ್ನು ಮರೆಯದಿರಿ. ಗೂಂಡಾಗಿರಿ ರಾಜಕಾರಣಕ್ಕೆ ನಾನು ಅವಕಾಶ ನೀಡುವುದಿಲ್ಲ ಎಂದು ಬಿಎಸ್ವೈ ರಾಜಕೀಯ ವಿರೋಧಿಗಳಿಗೆ ಎಚ್ಚರಿಕೆಯು ಸಂದೇಶ ನೀಡಿದರು.

ಇನ್ನು ಮಂಡ್ಯದ ಕೆಆರ್ ಪೇಟೆಯಲ್ಲಿ ಪ್ರಚಾರ ನಡೆಸಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮತದಾರರ ಋಣದ ಮುಂದೆ, ಅವರು ತೋರುವ ಪ್ರೀತಿಯ ಮುಂದೆ ತಮಗೆ ಯಾವ ಮುಖ್ಯಮಂತ್ರಿ ಹುದ್ದೆಯೂ ಕಾಲಕಸದಂತೆ ಎಂದು ಹೇಳುತ್ತ ಕಣ್ಣಿರಿಟ್ಟರು.

ಚುನಾವಣಾ ಅಖಾಡದಲ್ಲಿ ಅಷ್ಟೊಂದು ಸಕ್ರಿಯರಾಗಿ ಕಾಣಿಸಕೊಳ್ಳದಿದ್ದ ಡಿಕೆ ಶಿವಕುಮಾರ್‍ ಬುಧವಾರ ಹುಣಸೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಭರ್ಜರಿ ಬ್ಯಾಟಿಂಗ್ ಮಾಡಿದರು. ಈ ಬಾರಿ ಕಾಂಗ್ರೆಸ್ ಗೆಲ್ಲಿಸಿ ಆಮೇಲೆ ನೋಡಿ ನಾನು ಹೇಗೆ ಬುಗುರಿ ಆಡಿಸುತ್ತೇನೆ ಎಂದು ತಮ್ಮ ಡದುರಾಳಿಗಳಿಗೆ ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...