bumrah hat-trick ಬುಮ್ರಾ ಹ್ಯಾಟ್ರಿಕ್, ಹನುಮ ಸೆಂಚುರಿ: ವಿಂಡೀಸ್ ಉರಿಯುರಿ

bumrah hat-trick
jaspreeth bumrah

bumrah hat-trick ಜಮೈಕಾ ಟೆಸ್ಟ್: ಭಾರತ 416 ಹನುಮ 111, ಬುಮ್ರಾ 6/20, ವಿಂಡೀಸ್ 87/7

ಜಮೈಕಾ: ವೃತ್ತಿ ಜೀವನದ ಉತ್ತುಂಗದಲ್ಲಿರುವ ಚಾಣಾಕ್ಷ ಮಧ್ಯಮ ವೇಗಿ ( bumrah hat-trick ) ಜಸ್ಪ್ರೀತ್ ಬುಮ್ರಾ ಹ್ಯಾಟ್ರಿಕ್ ಮತ್ತು ಹನುಮ ವಿಹಾರಿ ಚೊಚ್ಚಲ ಶತಕದ ನೆರವಿನಿಂದ ಭಾರತ ತಂಡವು ಎರಡನೇ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಬಿಗಿ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾಗಿದೆ.

ಇದನ್ನೂ ಓದಿ: ಜಮೈಕಾ ಟೆಸ್ಟ್: ಕನ್ನಡಿಗ ಮಾಯಂಕ್, ಕೊಹ್ಲಿ ಅರ್ಧಶತಕ, ಭಾರತ ಸೇಫ್

ಇಲ್ಲಿನ ಕಿಂಗ್ಸಟನ್ ಮೈದಾನದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನ ಭಾರತದ 416 ರನ್‌ಗಳಿಗೆ ಉತ್ತರವಾಗಿ ವೆಸ್ಟ್ ಇಂಡೀಸ್ ತಂಡವು ತನ್ನ ಮೊದಲ ಸರದಿಯಲ್ಲಿ ದಿನದಾಟದ ಅಂತ್ಯಕ್ಕೆ 7 ವಿಕೆಟ್ ಕಳೆದುಕೊಂಡು 87 ರನ್ ಗಳಿಸಿ ಫಾಲೋ ಆನ್ ಭಿತಿಯಲ್ಲಿದೆ.

ಮೊದಲ ಟೆಸ್ಟ್‌ನ ಎರಡನೇ ಸರದಿಯಲ್ಲಿ ಮಿಂಚಿನ ಬೌಲಿಂಗ್ ಪ್ರದರ್ಶನ ನೀಡಿದ್ದ ಬುಮ್ರಾ ಅದೇ ತೀಕ್ಷ್ಣತೆಯನ್ನು ಉಳಿಸಿಕೊಂಡು ತಮ್ಮ ನಾಲ್ಕನೇ ಓವರಿನ ಎರಡು, ಮೂರು ಮತ್ತು ನಾಲ್ಕನೇ ಎಸೆತದಲ್ಲಿ ವಿಂಡೀಸಿನ ಬ್ರಾವೊ, ಬ್ರೂಕ್ಸ್ ಮತ್ತು ಚೇಸ್ ವಿಕೆಟ್ ಕಬಳಿಸುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದರು.

ಅತ್ಯುತ್ತಮ ಲಹರಿಯಲ್ಲಿರುವ ಬುಮ್ರಾ ಟೆಸ್ಟ್ ಕ್ರಿಕೆಟ್‌ನಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ ಭಾರತದ ನಾಲ್ಕನೇ ಬೌಲರ್‍ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದಕ್ಕೆ ಮುನ್ನ ಹರ್ಭಜನ್ ಸಿಂಗ್ ಮತ್ತು ಇರ್ಫಾನ್ ಪಠಾಣ್ ಈ ಸಾಧನೆ ಮಾಡಿದ್ದರು.

ಹ್ಯಾಟ್ರಿಕೆ ಸಾಧನೆಗೆ ತೃಪ್ತಿಗೊಳ್ಳದ ಬುಮ್ರಾ ವಿಂಡೀಸ್ ತಂಡದ ಆರು ಮಂದಿ ದಾಂಡಿಗರನ್ನು ಹಟ್ಟಿಗೆ ಅಟ್ಟಿ ಭಾರತದ ಕೈ ಮೇಲಾಗಿಸಿದರು.

ಇದಕ್ಕೆ ಮುನ್ನ 5 ವಿಕೆಟ್ ನಷ್ಟಕ್ಕೆ 264 ರನ್ನುಗಳಿಂದ ಎರಡನೇ ದಿನದಾಟ ಆರಂಭಿಸಿದ ಭಾರತ ಮೊದಲ ಸರದಿಯಲ್ಲಿ 416 ರನ್ ಕಲೆ ಹಾಕಿತು. ಮಧ್ಯಮ ಕ್ರಮಾಂಕದ ದಾಂಡಿಗ ಹನುಮ ವಿಹಾರಿ ಚೊಚ್ಚಲ ಶತಕ (111) ಹಾಗೂ ಬಾಲಂಗೋಚಿ ಇಶಾಂತ್ ಶರ್ಮಾ (57) ಆವರ ಅರ್ಧ ಶತಕ ಭಾರತದ ಚೇತರಿಕೆಗೆ ಕಾರಣವಾಯಿತು.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...