bulls ಕಬಡ್ಡಿ:  ಬೆಂಗಳೂರು ಬುಲ್ಸ್ ಬಲದ ಮುಂದೆ ತೆಲುಗು ಟೈಟನ್ಸ್ ಪುಸ್

bulls
bulls in action against titans

bulls ಪ್ರೋ ಕಬಡ್ಡಿ: ಬೆಂಗಳೂರು ಬುಲ್ಸ್ 47, ತೆಲುಗು ಟೈಟಾನ್ಸ್ 26

ಪಾಟಲಿಪುತ್ರ: ತನ್ನ ಭರ್ಜರಿ ಲಯ ಮುಂದುವರಿಸಿರುವ ( bulls  ) ಹಾಲಿ ಚಾಂಪಿಯನ್ ಬೆಂಗಳೂರು ಬುಲ್ಸ್ ತಂಡವು ಪ್ರೋಕಬಡ್ಡಿ ಲೀಗ್ ಹಂತದಲ್ಲಿ ನಾಲ್ಕನೇ ಜಯ ದಾಖಲಿಸಿದೆ.

ಇದನ್ನೂ ಓದಿ: ಪ್ರೋ ಕಬಡ್ಡಿ ಲೀಗ್: ಬೆಂಗಾಲ್, ಪಾಟ್ನಾಗೆ ಗೆಲುವು

ಪಂದ್ಯಾವಳಿಯ ಆರಂಭದಲ್ಲಿ ಗುಜರಾತ್ ಜೈಂಟ್ಸ್ ತಂಡಕ್ಕೆ ತಲೆಬಾಗಿದ್ದ ಬೆಂಗಳೂರು ಅದಾದ ಬಳಿಕ ಆಡಿದ್ದ ಮೂರು ಪಂದ್ಯಗಳನ್ನೂ ಜಯಿಸಿತ್ತು. ಗುರುವಾರ ಪಾಟಲಿಪುತ್ರ ಒಳಾಂಗಣ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಬೆಂಗಳೂರು ತಂಡವು ತೆಲುಗು ಟೈಟಾನ್ಸ್ ವಿರುದ್ಧ ಜಯ ಸಾಧಿಸಿ ಬೀಗಿತು.

ಸತತ ಸೋಲಿನ ಬೆನ್ನಲ್ಲಿಯೇ ಕಳೆದ ಪಂದ್ಯವನ್ನು ಬೆಂಗಾಲ್ ವಿರುದ್ಧ ಟೈ ಮಾಡಿಕೊಂಡು ಲಯಕ್ಕೆ ಮರಳುವ ಸೂಚನೆ ನೀಡಿದ್ದ ತೆಲುಗರು ಬೆಂಗಳುರುನ ಬಲದ ಮುಂದೆ ನಿರುತ್ತರರಾದರು. ರೇಡ್ ಮತ್ತು ಟ್ಯಾಕಲ್ ಎರಡರಲ್ಲೂ ಮೇಲುಗೈ ಸಾಧಿಸಿದ ಬುಲ್ಸ್ 21 ಅಂಕಗಳ ಜಯ ತನ್ನಾಗಿಸಿಕೊಂಡಿತು.

ಮೊದಲಾರ್ಧದ ವೇಳೆಗೆ 21-14ರ ಮುನ್ನಡೆ ಪಡೆದ ಬೆಂಗಳೂರು ಬುಲ್ಸ್ ತಂಡವು ದ್ವಿತೀಯಾರ್ಧದಲ್ಲಿ ಅದೇ ಆಕ್ರಮಣ ಮುಂದುವರಿಸಿ ಅಂತಿಮವಾಗಿ 47-26ರಲ್ಲಿ 21 ಅಂಕಗಳ ಜಯ ದಾಖಲಿಸಿತು. ಇದು ತೆಲುಗು ತಂಡಕ್ಕೆ ಪಂದ್ಯಾವಳಿಯ 5ನೇ ಸೋಲಾದರೆ, ಬುಲ್ಸ್ ತಂಡದ ನಾಲ್ಕನೇ ಜಯವಾಗಿದೆ.

ಬುಲ್ಸ್ ತಂಡದ ಈ ವಿರಾಟ್ ಪ್ರದರ್ಶನದಲ್ಲಿ 13 ರೇಡ್ ಅಂಕ ಸೇರಿದಂತೆ ಒಟ್ಟು 20 ಅಂಕ ಸಂಪಾದಿಸಿದ ಪವನ್ ಶೆರಾವತ್ ಸ್ಟಾರ್ ಆಟಗಾರ ಎನಿಸಿದರು.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...