bsy statements ಕೇಂದ್ರದ ಕೈಕಟ್ಟಿಹಾಕಿದ ಯಡಿಯೂರಪ್ಪ ಜಾಣ ನಡೆ

bsy statements
bjp state president bsy

bsy statements ‘ತಂತಿ ಮೇಲೆ ನಡೆದು’ ಕೇಂದ್ರದ ಮೇಲೆ ಒತ್ತಡ ತಂದ ಬಿಎಸ್ವೈ

ಬೆಂಗಳೂರು: ನೆರೆಬಾಧಿತ ರಾಜ್ಯಕ್ಕೆ ಕೊನೆಗೂ ಕೇಂದ್ರ ಸರಕಾರ ( bsy statements ) ಉಸಿರಾಡಲಾಗುವಷ್ಟರ ಮಟ್ಟಿನ ಮಧ್ಯಾಂತರ ಪರಿಹಾರ ಬಿಡುಗಡೆ ಮಾಡಿದೆ. ಇದಕ್ಕೆ ನಾನಾ ಕಾರಣಗಳಿದ್ದರೂ ಅವುಗಳಲ್ಲಿ ಯಡಿಯೂರಪ್ಪನವರ ಸೂಕ್ಷ್ಮ ಹೇಳಿಕೆಗಳು ಸಹ ಇಂಬು ನೀಡಿವೆ.

ಇದನ್ನೂ ಓದಿ: ಕೊನೆಗೂ ಎಚ್ಚತ್ತ ಕೇಂದ್ರ ಸರಕಾರ: ನೆರೆ ಪರಿಹಾರಕ್ಕೆ 1200 ಕೋಟಿ ರೂ…

’ಖಜಾನೆ ಖಾಲಿಯಾಗಿದೆ, ದುಡ್ಡು ಎಲ್ಲಿಂದ ತರಲಿ, ಕೇಂದ್ರ ಕೊಡಬೇಕಲ್ವಾ, ತಂತಿ ಮೇಲಿನ ನಡಿಗೆ, ನಾನು ಅಧಿಕಾರಕ್ಕೆ ಬಂದಾಗಲೆಲ್ಲ ಅಗ್ನಿ ಪರೀಕ್ಷೆ’ ಇವೆ ಮುಂತಾದ ನುಡಿಮುತ್ತುಗಳು ಮುಖ್ಯಮಂತ್ರಿಯ ಬಾಯಿಂದ ಕಳೆದ ಒಂದು ವಾರದ ಅವಧಿಯಲ್ಲಿ ಉದುರಿದವು.

ಈ ಹೇಳಿಕೆಗಳಿಂದ ನೆರೆ ಸಂತ್ರಸ್ತ ಆಕ್ರೋಶವನ್ನು ಕೇಂದ್ರ ಸರಕಾರದ ಕಡೆ ತಿರುಗಿಸುವುದು ಯಡಿಯೂರಪ್ಪನವರ ಉದ್ದೇಶವಾಗಿತ್ತು ಮತ್ತು ಇರದಲ್ಲಿ ಅವರು ಯಶಸ್ವಿಯೂ ಆದರು. ಖುದ್ದು ಮುಖ್ಯಮಂತ್ರಿಗಳೇ ಅಖಾಡಕ್ಕಿಳಿದ ಮೇಲೆ ಉಳಿದ ನಾಯಕರು ಸುಮ್ಮನಿರುತ್ತಾರೆಯೇ?

ಯತ್ನಾಳ್ ಸೇರಿದಂತೆ ಒಬ್ಬೊಬ್ಬರಾಗಿ ಬಿಜೆಪಿ ನಾಯಕರು ಕೇಂದ್ರದ ನಡೆಯನ್ನು ಪ್ರಶ್ನಿಸುವ ಹೇಳಿಕೆಗಳನ್ನು ನೀಡಲಾರಂಭಿಸಿದರು. ಬಿಜೆಪಿ ಸಂಸದರ ಮೇಲೆಯೂ ಕೆಲವರು ತಿರುಗಿಬಿದ್ದರು. ಇನ್ನೂ ಕೇಂದ್ರ ಸಂಪುಟದಲ್ಲಿರುವ ರಾಜ್ಯದ ಸಂಸದರಿಗಂತೂ ಇದು ನುಂಗಲಾಗದ ಬಿಸಿತುಪ್ಪವಾಗಿ ಪಡಿಣಮಿಸಿತು.

ಪರಿಸ್ಥಿತಿ ಯಾವ ಮಟ್ಟಕ್ಕೆ ಹೋಯಿತೆಂದರೇ ಕೆಲ ಸಂಸದರು ರಾಜೀನಾಮೆ ನೀಡುವ ಬೆದರಿಕೆಯನ್ನೂ ಹಾಕಿದರು. ಅಲ್ಲದೇ ನೇರವಾಗಿ ಪ್ರಧಾನಿ ಮೋದಿ ಅವರನ್ನೇ ಟೀಕಿಸುವ ಕಾರ್‍ಯಕ್ಕೂ ಕೈಹಾಕಿದರು.

ಉಪಚುನಾವಣೆಯ ಹೊಸ್ತಿಲಲ್ಲಿ ಇದರಿಂದ ಪಕ್ಷಕ್ಕೆ ಆಗಬಹುದಾದ ಹಾನಿಯನ್ನು ಅರಿತ ದಿಲ್ಲಿ ಪ್ರಭುತ್ವ ಪರಿಹಾರ ಬಿಡುಗಡೆ ವಿಚಾರದಲ್ಲಿ ಚುರುಕಾಯಿತು ಎಂದು ಬಿಜೆಪಿ ನಾಯಕರೇ ಮಾತನಾಡಿಕೊಳ್ಳುತ್ತಿರುವುದಾಗಿ ವರದಿಯಾಗಿದೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...