bsy puts ಮಂತ್ರಿಭಾಗ್ಯ: ಅಮಿತ್ ಹೆಗಲಿಗೆ ಕಟ್ಟಿದ ಬಿಎಸ್ವೈ

bsy puts

bsy puts ಯಾರಿಗೆಲ್ಲ ಮಂತ್ರಿಗಿರಿ ಎಂಬುದು ಶಾ ನಿರ್ಧಾರ ಎಂದ ಸಿಎಂ

ಬೆಂಗಳೂರು: ಸಂಪಟು ವಿಸ್ತರಣೆ ಆಗುವುದಂತೂ ಖಚಿತ ಎಂದಿರುವ ಮುಖ್ಯಮಂತ್ರಿ (bsy puts) ಬಿಎಸ್ ಯಡಿಯೂರಪ್ಪ ಅವರು ಯಾರಿಗೆಲ್ಲ ಮಂತ್ರಿಗಿ ಸಿಗುತ್ತದೆ ಮತ್ತು ಯಾರಿಗೆ ಯಾವ ಖಾತೆ ಎಂಬುದರ ನಿರ್ಧಾರವನ್ನು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೆಗಲಿಗೆ ಹಾಕಿದ್ದಾರೆ.

ಇದನ್ನೂ ಓದಿ: ಮಂತ್ರಿಗಿರಿ ಮರೀಚಿಕೆ: ಗೆದ್ದ ಅನರ್ಹರ ಚಡಪಡಿಕೆ

ಸಚಿವ ಸ್ಥಾನ ಹಂಚಿಕೆ ವಿಚಾರದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ನಿರ್ಣಯವೇ ಅಂತಿಮ. ಅದರಂತೆಯೇ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ.

ಉಪ ಚುನಾವಣೆ ಗೆದ್ದ ಎಲ್ಲ ಅನರ್ಹ ಶಾಸಕರಿಗೂ ಮಂತ್ರಿಗಿರಿ ಸಿಗುವುದು ಕಷ್ಟ ಎಂಬ ವರದಿಗಳ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ. ಒಂದು ವೇಳೆ ಯಾರಿಗಾದರೂ ಮಂತ್ರಿ ಸ್ಥಾನ ಸಿಗದಿದ್ದರೇ ಅದಕ್ಕೆ ತಾವು ಕಾರಣವಲ್ಲ ಎಂಬುದನ್ನು ಬಿಎಸ್ವೈ ಪರೋಕ್ಷವಾಗಿ ಹೇಳಿದ್ದಾರೆ.

ಈ ಮಧ್ಯೆ ತಾವು ದಾವೋಸ್‌ಗೆ ತೆರಳುವುದಕ್ಕೂ ಮುನ್ನವೇ ಸಚಿವ ಸಂಪುಟ ವಿಸ್ತರಣೆ ಮಾಡುವುದಾಗಿ ಹೇಳುವ ಮೂಲಕ ಯಡಿಯೂರಪ್ಪ ಅವರು ಪಕ್ಷಾಂತರಿಗಳ ಪಾಳೆಯದಲ್ಲಿ ಪುಳಕ ಮೂಡಸಿದ್ದಾರೆ. ಅಮಿತ್ ಶಾ ಓಕೆ ಕೊಟ್ಟರೆ ಯಾವ ಕ್ಷಣದಲ್ಲಾದರೂ ದಿಲ್ಲಿಗೆ ಹಾರಿ ವಿಸ್ತರಣೆ ಅಂತಿಮಗೊಳಿಸುವುದಾಗಿ ಬಿಎಸ್ವೈ ಹೇಳಿದ್ದಾರೆ.

ಒಂದು ವೇಳೆ ದಿಲ್ಲಿಯಲ್ಲಿ ಭೇಟಿಗೆ ಅವಕಾಶ ಸಿಗದಿದ್ದರೇ ಅಮಿತ್ ಶಾ ರಾಜ್ಯಕ್ಕೆ ಬಂದಾಗಲಾದರೂ ಸಂಪುಟ ವಿಸ್ತರಣೆಯ ಗೊಂದಲಗಳಿಗೆ ತೆರೆ ಎಳೆಯುವುವದಾಗಿ ಮುಖ್ಯಮಂತ್ರಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...