bsy orders 46 ದಿನದಲ್ಲಿ 8 ಪ್ರಕರಣ ತನಿಖೆಗೆ ಆದೇಶಿಸಿದ ಬಿಎಸ್ವೈ ಸರಕಾರ

bsy orders
cm bs yediyurappa

bsy orders ಯಡಿಯೂರಪ್ಪ ಸರಕಾರದ ನಡೆಗೆ ಹೌಹಾರಿದ ಪ್ರತಿಪಕ್ಷ

ಬೆಂಗಳುರು: ಮೈತ್ರಿ ಸರಕಾರದ ಪತನದ ನಂತರ ಬಿಜೆಪಿ ಸರಕಾರ ಅಧಿಕಾರಕ್ಕೆ ( bsy orders ) ಬಂದು 46 ದಿನಗಳು ಕಳೆದಿದ್ದು ಈ ಅವಧಿಯಲ್ಲಿ ಹಿಂದಿನ ಸರಕಾರಗಳ ಎಂಟು ವಿವಿಧ ಪ್ರಕರಣಗಳ ತನಿಖೆಗೆ ಆದೇಶಿಸಲಾಗಿದೆ.

ಇದನ್ನೂ ಓದಿ: ಭಾಗ್ಯ ಯೋಜನೆಗಳಿಗೆ ಕಲ್ಲು: ಬಿಎಸ್ವೈ ವಿರುದ್ಧ ಸಿದ್ದು ಕೆಂಡ, ಹೋರಾಟದ ಎಚ್ಚರಿಕೆ

ಸರಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂಬ ಪ್ರತಿಪಕ್ಷ ಆರೋಪದ ನಡುವೆಯೇ ಮೂರು ಪ್ರಕರಣಗಳ ಸಿಬಿಐ ತನಿಖೆಯೂ ಸೇರದಂತೆ ಒಟ್ಟು ಎಂಟು ಪ್ರಕರಣಗಳನ್ನು ಸರಕಾರ ತನಿಖೆಗೆ ಒಳಪಡಿಸಿದೆ.

ಮುಖ್ಯಮಂತ್ರಿ ಆದ ತರುವಾಯ ಹಿಂದಿನ ಕುಮಾರಸ್ವಾಮಿ ಅವರ ಆಡಳಿತದಲ್ಲಿ ನಡೆದಿದೆ ಎನ್ನಲಾದ ಟೆಲಿಫೋನ್ ಕದ್ದಾಲಿಕೆ ಪ್ರಕರಣವನ್ನು ಮೊದಲಿಗೆ ಸಿಬಿಐ ತನಿಖೆಗೆ ನೀಡಲಾಯಿತು. ಅದಾದ ಬಳಿಕ ಹಣದೋಚು ಕಂಪನಿ ಐಎಂಎ ಹಗರಣ (ಕಾಂಗ್ರೆಸ್ ಶಾಸಕರ ಹೆಸರಿರುವ ಗುಮಾನಿ) ಮತ್ತು ಹುಬ್ಬಳ್ಳಿಯಲ್ಲಿ ಯೋಗೇಶ್ ಗೌಡ ಹತ್ಯೆ ಪ್ರಕರಣಗಳನ್ನು (ಮಾಜಿ ಸಚಿವ ವಿನಯ್ ಕುಲಕರ್ಣಿ ಹೆಸರು ಥಳುಕು ಹಾಕಿಕೊಂಡಿದೆ) ಸಿಬಿಐಗೆ ವರ್ಗಾಯಿಸಲಾಯಿತು.

ಇದಲ್ಲದೇ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಹಿಂದಿನ ಸರಕಾರಗಳ (ಮೈತ್ರಿ ಸರಕಾರ ಹಾಗೂ ಸಿದ್ದರಾಮಯ್ಯ ಅವರ ಸರಕಾರ) ಹಲವು ಯೋಜನೆಗಳನ್ನು ತನಿಖೆಯ ವ್ಯಾಪ್ತಿಗೆ ತರಲಾಗಿದೆ.

ಸಿದ್ದರಾಮಯ್ಯ ಅವರ ಕನಸಿನ ಕೂಸಾದ ಇಂದಿರಾ ಕ್ಯಾಂಟೀನ್ ಮತ್ತು ಕೃಷಿಭಾಗ್ಯ ಯೋಜನೆ, ಬೆಂಗಳೂರಿನಲ್ಲಿ ಜಾರಿಗೆ ತರಲಾಗಿದ್ದ ರಸ್ತೆಗಳ ವೈಟ್ ಟಾಪಿಂಗ್, ಸಿಎಂ ನಗರೋತ್ಥಾನ ಯೋಜನೆ ಹಾಗೂ ಘನತ್ಯಾಜ್ಯ ಸಂಸ್ಕರಣಾ ಘಟಕಗಳ ಸ್ಥಾಪನೆಯಲ್ಲಿನ ಅಕ್ರಮಗಳ ತನಿಖೆಗೆ ಸಿಎಂ ಆದೇಶಿಸಿದ್ದಾರೆ.

ಸಹಜವಾಗಿಯೇ ಪ್ರತಿಪಕ್ಷಗಳು ಸರಕಾರದ ಈ ನಡೆಯ ವಿರುದ್ಧ ಸಿಡಿದೆದ್ದಿವೆ. ಇದು ರಾಜಕೀಯ ದ್ವೇಷಪೂರಿತ ಕ್ರಮವಾಗಿದೆ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...