bsy operation ಆಪರೇಶನ್ ಕಮಲ ಸೂತ್ರದಾರಿ ಯಡಿಯೂರಪ್ಪ ಅಂದ್ರು ಗೌಡ್ರು

bsy operation
cm yediyurappa and former mla narayana gowda

bsy operation ಬಿಎಸ್ವೈ ಕರೆದದ್ದಕ್ಕೆ ರಾಜೀನಾಮೆ ಕೊಟ್ಟೆ ಎಂದ ಅನರ್ಹ ಶಾಸಕ ನಾರಾಯಣ ಗೌಡ್ರು

ಮಂಡ್ಯ: ಮೈತ್ರಿ ಸರಕಾರ ಕೆಡವಲು ಹಾಲಿ ( bsy operation) ಸಿಎಂ ಯಡಿಯೂರಪ್ಪ ಅವರೇ ಆಪರೇಶನ್ ಕಮಲ ನಡೆಸಿದ್ದರು ಎಂಬುದನ್ನು ದೃಢಪಡಿಸುವಂತಹ ಮತ್ತೊಂದು ಹೇಳಿಕೆ ಬಂದಿದೆ. ಈ ಬಾರಿ ಖುದ್ದು ಅನರ್ಹ ಶಾಸಕರೇ ಈ ಮಾತನ್ನು ದೃಢಪಡಿಸಿದ್ದಾರೆ.

ಇದನ್ನೂ ಓದಿ: ಇನ್ಫೋಸಿಸ್‌ನಲ್ಲಿ 10 ಸಾವಿರ ಉದ್ಯೋಗಿಗಳ ನೌಕರಿ ಕಟ್

ಯಡಿಯೂರಪ್ಪ ಅವರ ಕರೆದದ್ದಕ್ಕಾಗಿಯೇ ಅವರ ಜೊತೆ ಕೈಜೋಡಿಸಲು ರಾಜೀನಾಮೆ ನೀಡಿದೆ ಎಂದು ಹೇಳುವ ಮೂಲಕ ಕೆಆರ್‍ ಪೇಟೆ ಶಾಸಕ ನಾರಾಯಣ ಗೌಡ ಅವರು ಆಪರೇಶ್ನ ಕಮಲಕ್ಕೆ ತಾವು ಬಲಿಯಾಗಿದ್ದನ್ನು ರುಜುವಾತು ಮಾಡಿದ್ದಾರೆ.

ರಾಜೀನಾಮೆಗೂ ಮೊದಲು ಯಡಿಯೂರಪ್ಪ ಅವರ ಜತೆ ಮಾತುಕತೆ ನಡೆಸಿರುವುದಾಗಿ ಹೇಳಿಕೊಂಡಿರುವ ಅನರ್ಹ ಶಾಸಕ ನಾರಾಯಣಗೌಡರು ಅದರಿಂದಾಗಿ ಕ್ಷೇತ್ರಕ್ಕೆ ಹೆಚ್ಚು ಅನುದಾಣ ಬರುವಂತಾಯ್ತು ಎಂದಿದ್ದಾರೆ.

ನನ್ನ ಕ್ಷೇತ್ರಕ್ಕೆ ಅನುದಾನ ಬಿಡುಗಡೆಯಾದ್ರೆ ಅದನ್ನ ರೇವಣ್ಣನೋರು ಹಾಸನಕ್ಕೆ ತೆಗೆದುಕೊಂಡು ಹೋಗ್ತಿದ್ರು. ಇದರಿಂದ ನನಗೂ ಸಾಕಾಗಿ ಹೋಗಿತ್ತು. ಆ ವೇಳೆ ಯಡಿಯೂರಪ್ಪ ಸಿಎಂ ಆಗ್ತಿದ್ದಾರೆ ನಿಮ್ ಅಭಿಪ್ರಾಯ ಏನು ಯಾರೋ ಒಬ್ರು ಎಂದು ಕೇಳಿದರು.

ಬಳಿಕ ಕೆಲವರು ಬಂದು ನನ್ನ ಯಡಿಯೂರಪ್ಪ ಅವರ ಮನೆಗೆ ಕರೆದುಕೊಂಡು ಹೋದ್ರು. ಐದು ಗಂಟೆ ಸುಮಾರಿಗೆ ನಾನು ಅವರ ಮನೆಗೆ ಹೋದೆ. ಆಗ ಅವರು ಏನಪ್ಪ ಮುಖ್ಯಮಂತ್ರಿಯಾಗೊ ಅವಕಾಶ ಇದೆ ಬೆಂಬಲಿಸ್ತಿಯಾ ಎಂದು ಕೇಳಿದರು.

ನೀನು ಕೈ ಜೋಡಿಸಿದ್ರೆ ಕೆ.ಆರ್.ಪೇಟೆ ಅಭಿವೃದ್ಧಿ ಮಾಡೋಣ. ಏನಂತೀಯ ಎಂದರು. ಅದಕ್ಕೆ ನಾನು ತಾಲೂಕಿನ ಅಭಿವೃದ್ದಿಗಾಗಿ 700 ಕೋಟಿ ಅನುದಾನ ಕೇಳಿದ್ದೆ. ಆದ್ರೆ ಯಡಿಯೂರಪ್ಪನವರು ಸಾವಿರ ಕೋಟಿ ಕೊಡ್ತಿನಿ ಅಂದ್ರು. ಹಾಗಾಗಿ ನಾನು ರಾಜೀನಾಮೆ ನೀಡಿದೆ ಎಂದು ನಾರಾಯಣ ಗೌಡರು ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...