bsy cabinet ಕೊನೆಗೂ ಬಿಎಸ್ವೈ ಸಂಪುಟಕ್ಕೆ ಬಿಜೆಪಿ ಹೈಕಮಾಂಡ್ ಒಪ್ಪಿಗೆ

bsy cabinet
bjp president amit shah and cm yediyurappa

bsy cabinet ಮಂಗಳವಾರ ನೂತನ ಸಂಪುಟ ಪ್ರಮಾಣ; 16-18 ಮಂದಿಗೆ ಮಂತ್ರಿಭಾಗ್ಯ

ಹೊಸದಿಲ್ಲಿ: ಅಧಿಕಾರಕ್ಕೆ ಬಂದು ಮೂರು ವಾರಗಳ ನಂತರ ಕೊನೆಗೂ ( bsy cabinet ) ಯಡಿಯೂರಪ್ಪ ನೇತೃತದ ಬಿಜೆಪಿ ಸರಕಾರದ ಸಂಪುಟ ರಚನೆಗೆ ಬಿಜೆಪಿಯ ಹೈಕಮಾಂಡ್ ಹಸಿರು ನಿಶಾನೆ ತೋರಿದೆ.

ಇದನ್ನೂ ಓದಿ: ಯಡಿಯೂರಪ್ಪ ಮನವಿಗೆ ಸಿಗಲಿಲ್ಲ ಮನ್ನಣೆ, ಸದ್ಯಕ್ಕಿಲ್ಲ ಕೇಂದ್ರದ ನೆರೆ ಪರಿಹಾರ

ಸಂಪುಟ ರಚನೆಗೆ ವರಿಷ್ಠರ ಅನುಮೋದನೆ ಪಡೆದುಕೊಳ್ಳಲು ಕಳೆದೆರಡು ದಿನಗಳಿಂದ ದಿಲ್ಲಿಯಲ್ಲೇ ಮೊಕ್ಕಾಂ ಹೂಡಿದ್ದ ಸಿಎಂ ಯಡಿಯೂರಪ್ಪ ಕೊನೆಗೂ ತಮ್ಮ ಪ್ರಯತ್ನದಲ್ಲಿ ಯಶ ಸಾಧಿಸಿದ್ದು, ನೂತನ ಸಂಪುಟ ಅಸ್ತಿತ್ವಕ್ಕೆ ಬರಲಿದೆ.

ಶನಿವಾರ ಸಂಜೆ ಪಕ್ಷಾಧ್ಯಕ್ಷ ಅಮಿತ್ ಶಾ ಜೊತೆ ಮಾತುಕತೆ ನಡೆಸಿದ ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಸಂಪುಟ ರಚನೆಗೆ ಅನುಮತಿ ಪಡೆದುಕೊಂಡರು.

ಇದಕ್ಕೆ ಮುನ್ನ ಶುಕ್ರವಾರ ಸಿಎಂ ಹಾಗೂ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು ಸಭೆ ನಡೆಸಿ ಸಚಿವ ಸ್ಥಾನ ಯಾರಿಗೆ ನೀಡಬೇಕೆಂಬ ಬಗ್ಗೆ ಫೈನಲ್ ಮಾಡಿದ್ದರು.

ಪೂರ್ಣ ಮಟ್ಟದಲ್ಲಿ ಸಂಪುಟ ವಿಸ್ತರಣೆ ಮಾಡದೆ ಅನರ್ಹಗೊಂಡಿರುವ 17 ಶಾಸಕರ ಪ್ರಕರಣ ನ್ಯಾಯಾಲಯದಲ್ಲಿ ಇತ್ಯರ್ಥವಾಗುವವರೆಗೂ ಸಂಪುಟದಲ್ಲಿ ಕೆಲವು ಸ್ಥಾನಗಳನ್ನು ಖಾಲಿ ಬಿಡುವಂತೆ ಬಿಎಸ್‍ವೈಗೆ ವರಿಷ್ಠರು ಸೂಚಿಸಿದ್ದು, ೧೬-೧೮ ಶಾಸಕರಿಗೆ ಮಂತ್ರಿಭಾಗ್ಯ ದೊರಕಲಿದೆ ಎನ್ನಲಾಗಿದೆ.