bsy audio leak ಇಷ್ಟಕ್ಕೂ ಬಿಎಸ್ವೈ ಆಡಿಯೋ ಲೀಕ್ ಮಾಡ್ದೋರ್ಯಾರು, ಇವರಾ ಇಲ್ಲ ಅವರಾ?

bsy audio leak
kateel and savadi

bsy audio leak ಆಡಿಯೋ ಲೀಕ್‌ ಸುತ್ತ ಅನುಮಾನದ ಹುತ್ತ

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸಂಚಲನ ( bsy audio leak ) ಉಂಟುಮಾಡಿರುವ ಅನರ್ಹ ಶಾಕರ ಕುರಿತಾದ ಮುಕ್ಯಮಂತ್ರಿ ಯಡಿಯೂರಪ್ಪ ಅವರ ಆಡಿಯೋ ಅಸಲು ಸೋರಿಕೆ ಮಾಡಿದ್ದು ಯಾರು ಎಂಬ ಪ್ರಶ್ನೆ ಸದ್ಯ ಕುತೂಹಲಕಾರಿ ಚರ್ಚೆಗೆ ಕಾರಣವಾಗಿದೆ.

ಇದನ್ನೂ ಓದಿ: ಆಪರೇಶನ್ ಕಮಲ ಧೃಡಪಡಿಸಿ ಸಂಕಷ್ಟಕ್ಕೆ ಸಿಲುಕಿದ ಯಡಿಯೂರಪ್ಪ

ಹುಬ್ಬಳ್ಳಿಯಲ್ಲಿ ಪಕ್ಷದ ಸಭೆಯಲ್ಲಿ ಯಡಿಯೂರಪ್ಪ ಆಡಿದ ಮಾತುಗಳ ಆಡಿಯೋ ತುಣುಕು ಬಹಿರಂಗ ಆಗಿರುವುದರ ಹಿಂದೆ ಯಾರ ಕೈವಾಡ ಇರಬಹುದು ಎಂಬ ವ್ಯಖ್ಯಾನ ಮುಗಿಲು ಮುಟ್ಟಿದೆ. ಆದರೆ ಎಲ್ಲ ಅನುಮಾನಗಳ ಬಾಣ ನೆಟ್ಟಿರುವುದು ಬಿಜೆಪಿಯ ರಾಜ್ಯಾಧ್ಯಕ್ಷ ಹಾಗೂ ಡಿಸಿಎಂ ನಿಷ್ಠರ ಮೇಲೆ ಎಂಬುದು ಕುತೂಹಲ ಮೂಡಿಸಿದೆ.

ಹೌದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್‍ ಕಟೀಲ್, ಡಿಸಿಎಂ ಲಕ್ಷ್ಮಣ ಸವದಿ ಅವರಿಬ್ಬರ ಮೇಲೆ ಹಲವು ನಾಯಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರಂತೂ ಬಿಜೆಪಿ ನಾಯಕರ ಬೆಂಬಲಿಗರ ಮೇಲೆಯೇ ನೇರವಾಗಿ ಸಂಶಯ ವ್ಯಕ್ತಪಡಿಸಿದ್ದಾರೆ.

ಸಿದ್ದರಾಮಯ್ಯ ಅವರ ಪ್ರಕಾರ ಈ ಇಬ್ಬರ ಜೊತೆಗೂ ಅನುಮಾನದ ಬೊಟ್ಟು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರ ಮೇಲೆಯೂ ಇದೆ. ಈ ಮೂವರು ನಾಯಕರ ಅನುಯಾಯಿಗಳ ಪೈಕಿ ಯಾರಾದರೊಬ್ಬರು ಆಡಿಯೋ ಲೀಕ್ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಇದೇ ರೀತಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಮಡೂರಾವ್ ಸಹ ಅನುಮಾನದ ಸಮೂಹ ಗಾನಕ್ಕೆ ತಮ್ಮ ಧ್ವನಿ ನೀಡಿದ್ದಾರೆ. ಯಡಿಯೂರಪ್ಪ ಅವರನ್ನು ಮೂಲೆಗುಂಪು ಮಾಡುವ ಉದ್ದೇಶದಿಂದ ನಳಿನ್ ಕಟಿಲ್ ಕಡೆಯವರೇ ಈ ಕೈತ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ.

ಬಿಎಸ್‌ವೈ ಆಡಿಯೋ ವಿಚಾರವನ್ನು ಕಾಂಗ್ರೆಸ್ ರಾಜ್ಯಪಾಲರ ಅಂಗಳಕ್ಕೂ ಹಾಕಿದ್ದು, ಸುಪ್ರೀಂ ಕೊರ್ಟಿನಲ್ಲಿ ಸಹ ಅನರ್ಹರ ಪ್ರಕರಣದಲ್ಲಿ ಸಾಕ್ಷ್ಯವೆಂದು ಪರಿಗಣಿಸುವಂತೆ ಮನವಿ ಮಾಡಿಕೊಂಡಿದೆ. ಆಡಿಯೋ ಲೀಕ್ ಸ್ವಪಕ್ಷೀಯರದೇ ಕೃತ್ಯ ಎಂದು ಖುದ್ದು ಬಿಜೆಪಿ ನಾಯಕರೇ ಹೇಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...