boat ತುಂಗಭದ್ರಾ ನೆರೆಗೆ ಇಬ್ಬರು ರಕ್ಷಣಾ ಸಿಬ್ಬಂದಿ ನೀರುಪಾಲು?

boat
boat with five onboard

boat ಮುಳುಗಿದ ವಿರುಪಾಪೂರ ಗಡ್ಡಿ ಬಳಿ ನೀರಿಗೆ ಸಿಲುಕಿದ ರಕ್ಷಣಾ ಸಿಬ್ಬಂದಿ

ಗಂಗಾವತಿ: ತುಂಗಭಾದ್ರಾ ನದಿ ಪ್ರವಾಹದಲ್ಲಿ ಸಿಲುಕಿದ್ದವರ ರಕ್ಷಣೆಗೆಂದು ಧಾವಿಸಿದ ( boat ) ಸಿಬ್ಬಂದಿ ಇದ್ದ ಬೋಟು ಮಗುಚಿ ಇಬ್ಬರು ಕೊಚ್ಚಿಹೋಗಿರುವ ಘಟನೆ ಗಂಗಾವತಿ ಜಿಲ್ಲೆಯ ವಿರುಪಾಪೂರ ಗಡ್ಡಿ ಬಳಿ ಸಂಭವಿಸಿದೆ.

ಇದನ್ನೂ ಓದಿ: ತಕ್ಷಣ 3 ಸಾವಿರ ಕೋಟಿ ಕೊಡಿ ಎಂದ ಬಿಎಸ್ವೈ: ಖಚಿತ ಭರವಸೆ…

ಗಡ್ಡಿಯಲ್ಲಿ ಸಿಲುಕಿದ್ದ ಪ್ರವಾಸಿಗರ ರಕ್ಷಣೆಗೆಂದು ತೆರಳಿದ್ದ ಐವರು ರಕ್ಷಣಾ ಸಿಬ್ಬಂದಿ ಇದ್ದ ಬೋಟ್ ನೀರಿನಲ್ಲಿ ಮಗುಚಿಕೊಂಡು ಎಲ್ಲರೂ ಪ್ರವಾಹಕ್ಕೆ ಸಿಲುಕಿದರು. ಕೂಡಲೇ ಅವರ ರಕ್ಷಣೆಗೆ ಧಾವಿಸಲಾಯಿತು. ಈವರೆಗೆ ಮೂವರು ಸಿಬ್ಬಂದಿಯನ್ನು ರಕ್ಷಿಸಲಾಗಿದ್ದು, ಇನ್ನಿಬ್ಬರಿಗಾಗಿ ತೀವ್ರ ಶೋಧ ಮುಂದುವರಿದಿದೆ.

ಬೋಟಿನಲ್ಲಿ ಎನ್ಡಿಆರೆಫ್ ತಂಡದ ಇಬ್ಬರೂ ಹಾಗೂ ಅಗ್ನಿ ಶಾಮಕ ದಳದ ಮೂವರು ಸಿಬ್ಬಂದ್ದಿ ಇದ್ದರು. ನೀರಿನ ರಭಸಕ್ಕೆ ಬೋಟ್ ಮುಗುಚಿ ಬಿದ್ದು ಈ ಅವಘಡ ಸಂಭವಿಸಿದೆ.

ತುಂಗಭದ್ರಾ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಟ್ಟ ಹಿನ್ನೆಲೆಯಲ್ಲಿ ಗಡ್ಡಿ ಮುಳುಗಡೆಯಾಗಿದೆ. ವಿರುಪಾಪೂರ ಗಡ್ಡೆಯಲ್ಲಿ ಒಟ್ಟು 19 ಜನ ವಿದೇಶಿಗರು ಸಿಲುಕಿಕೊಂಡಿದ್ದಾರೆ.

ಜರ್ಮನಿಯ 11,ಫ್ರಾನ್ಸಿನ 5, ಸ್ವಿಜರ್ಲೆಂಡ್, ಅಮೆರಿಕ, ಲಿಥುವೇನಿಯಾದ ತಲಾ ಒಬ್ಬ ಪ್ರವಾಸಿಗರು ಲುಕಿಕೊಂಡಿದ್ದಾರೆ.ತುಂಗಭದ್ರಾ ಜಲಾಶಯದಿಂದ 2 ಲಕ್ಷಕ್ಕೂ ಅಧಿಕ ಕ್ಯೂಸೆಕ್ಸ್ ನೀರು ಹೊರಬಿಟ್ಟ ಪರಿಣಾಮ ವಿರುಪಾಪೂರ ಗಡ್ಡೆ ಸಂಪರ್ಕ ಸಂಪೂರ್ಣ ಕಟ್ ಆಗಿತ್ತು.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...