bjp income 2400 ಕೋಟಿ ರೂ ’ಬಂಡವಾಳ’ ಗಿಟ್ಟಿಸಿಕೊಂಡ ಬಿಜೆಪಿ

bjp income

bjp income ಜನಮತದ ಜೊತೆ ಜನಧನವೂ ಬಿಜೆಪಿ ಕಡೆಗೆ, ಕಾಂಗ್ರೆಸ್ ಜೋಳಿಗೆಗೂ ಹಣ

ಹೊಸದಿಲ್ಲಿ: ಮೋದಿ ಹವಾದಲ್ಲಿ ಏರುಮುಖಿಯಾಗಿರುವ ಬಿಜೆಪಿಯ ಜೋಳಿಗೆ ಸಹ ( bjp income ) ಭಾರವಾಗುತ್ತಲೇ ಸಾಗಿದೆ. ಕಳೆದಾರು ವರ್ಷಗಳಿಂದ ಬಿಜೆಪಿಯ ದೇಣಿಗೆ ಖಾತೆ ಉಬ್ಬುತ್ತಲೇ ಸಾಗಿದ್ದು, ಇದೀಗ ಪಕ್ಷದ ಖಜಾನೆಯಲ್ಲಿ 2410 ಕೋಟಿ ರೂ ದೇಣಿಗೆ ಹಣ ಸಂಗ್ರಹವಾಗಿದೆ.

ಇದನ್ನೂ ಓದಿ: ಫೆ.8ಕ್ಕೆ ದಿಲ್ಲಿ ದಂಗಲ್, 11ಕ್ಕೆ ಫಲಿತಾಂಶ

ಶ್ರೀಮಂತಿಕೆಯ ವಿಚಾರದಲ್ಲಿ ಉಳಿದೆಲ್ಲ ಪಕ್ಷಗಳನ್ನು ಗಾವುದ ದೂರದಲ್ಲಿ ಇಟ್ಟಿರುವ ಬಿಜೆಪಿ ಜನಮತದ ಜೊತೆಗೆ ಜನಧನವನ್ನು ಸಹ ಗಿಟ್ಟಿಸಿಕೊಳ್ಳುವಲ್ಲಿ ಭಾರೀ ಯಶಸ್ಸು ಸಾಧಿಸಿದೆ. ಕಳೆದೊಂದು ವರ್ಷದಲ್ಲಿಯೇ ಬಿಜೆಪಿಯ ಬಂಡವಾಳ ದ್ವಿಗುಣಗೊಂಡಿದೆ.

217-18ರಲ್ಲಿ ಅಂತ್ಯಕ್ಕೆ ಬಿಜೆಪಿಗೆ ದೇಣಿಗೆ ರೂಪದಲ್ಲಿ ಬಂದ ಹಣ 1027 ಕೋಟಿ ರೂಗಳಾಗಿದ್ದರೇ 2018-19ರ ಅಂತ್ಯಕ್ಕೆ ಅದು 2410 ಕೋಟಿ ರೂಗಳಿಗೆ ಏರಿಕೆ ಕಂಡಿದೆ. ಬಿಜೆಪಿಯ ಈ ಸಂಗ್ರಹದಲ್ಲಿ ಬಹುಪಾಲು (ಶೇ. 60) ಹಣ ಚುನಾವಣಾ ಬಾಂಡ್‌ಗಳ ಮಾರಾಟದಿಂದ ಬಂದಿದೆ.

ಇನ್ನು ಬಿಜೆಪಿಯ ರಾಜಕೀಯ ವಿರೋಧಿಯಾಗಿರುವ ಕಾಂಗ್ರೆಸ್ ಪಕ್ಷದ ಸ್ಥಿತಿಯೂ ಈ ಅವಧಿಯಲ್ಲಿ ಸುಧಾರಿಸಿದೆ. ಹಾಗೆ ನೋಡಿದರೇ ಕಳೆದ ವರ್ಷ ಕಾಂಗ್ರೆಸ್‌ಗೆ ಬಿಜೆಪಿ ಬಂದ ಬಂಡವಾಳಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಹಣ ಬಂದಿದೆ ಎಂದು ಆಂಗ್ಲ ಪತ್ರಿಕೆ ವರದಿ ಮಾಡಿದೆ.

ಕಾಂಗ್ರೆಸ್‌ನ ಗಳಿಕೆಯಲ್ಲಿ ಕಳೆದ ವರ್ಷ ಶೇ.361ರಷ್ಟು ವೃದ್ಧಯಾಗಿದ್ದು ಅದರ ಒಟ್ಟು ದೇಣಿಗೆ ಸಂಗ್ರಹ ಮೊತ್ತ 918 ಕೋಟಿ ರೂಗಳಾಗಿದೆ. 2017-18ರ ಅಂತ್ಯಕ್ಕೆ ಕಾಂಗ್ರೆಸ್ ಬಳಿ 199 ಕೋಟಿ ರೂ ದೇಣಿಗೆ ಸಂಗ್ರಹ ಇತ್ತು ಎಂದು ವರದಿ ಹೇಳಿದೆ.

ಇನ್ನು ಚುನಾವಣಾ ವೆಚ್ಚದ ವಿಚಾರದಲ್ಲಿಯೂ ಬಿಜೆಪಿಯು ಕಾಂಗ್ರೆಸಿಗಿಂತ ತೀರಾ ಮುಂದಿದೆ. ಕಳೆದ ವರ್ಷ ಚುನಾವಣಾ ಖರ್ಚಿಗೆಂದು ಬಿಜೆಪಿ 792 ಕೋಟಿ ರೂ ವೆಚ್ಚ ಮಾಡಿದರೇ ಕಾಂಗ್ರೆಸ್ ಪಕ್ಷದ ಚುನಾವಣಾ ವೆಚ್ಚ 309 ಕೊಟಿ ರೂಗಳಾಗಿತ್ತು.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...