bjp candidates ಬಿಜೆಪಿ ಪಟ್ಟಿ ಪ್ರಕಟ, ಬೇಗ್, ಶಂಕರ್ ಹೊರತಾಗಿ ಎಲ್ಲ ಅನರ್ಹರಿಗೆ ಟಿಕೆಟ್

bypoll result
cm bsy a happy man

bjp candidates ಶಿವಾಜಿನಗರ, ರಾಣೆಬೆನ್ನೂರಿಗೆ ಹೆಸರು ಘೋಷಿಸದ ಬಿಜೆಪಿ; ಡಿಸಿಎಂ ಸವದಿಗಿಲ್ಲ ಅದೃಷ್ಟ

ಬೆಂಗಳೂರು: ವಚನ ನೀಡಿದ್ದಂತೆಯೇ ಬಿಜೆಪಿ ಎಲ್ಲ ಅನರ್ಹ ( bjp candidates ) ಶಾಸಕರಿಗೆ ಅವರು ಗೆದ್ದು ಬಂದಿದ್ದ ಕ್ಷೇತ್ರಗಳಿಂದಲೇ ಮರು ಸ್ಪರ್ಧೆಗೆ ಟಿಕೆಟ್ ನೀಡಿದೆ. 15 ಕ್ಷೇತ್ರಗಳ ಪೈಕಿ 13 ಕಡೆಗಳಲ್ಲಿ ಅನರ್ಹ ಶಾಸಕರಿಗೆ ಬಿ ಫಾರಂ ನೀಡಲು ಬಿಜೆಪಿ ನಿರ್ಧರಿಸಿದೆ.

ಇದನ್ನೂ ಓದಿ: 10 ಕ್ಷೇತ್ರಗಳಿಗೆ ಜೆಡಿಎಸ್ ಅಭ್ಯರ್ಥಿ ಘೋಷಣೆ

ಇದೇ ವೇಳೆ ಶಿವಾಜಿನಗರ ಹಾಗೂ ರಾಣೆಬೆನ್ನೂರು ಕ್ಷೇತ್ರಳಿಗೆ ಮಾತ್ರ ಬಿಜೆಪಿ ತನ್ನ ಉಮೇದುವಾರನ್ನು ಹೆಸರಿಸಿಲ್ಲ. ರಾಣೆಬೆನ್ನೂರಿನಿಂದ ಆರ್‍. ಶಂಕರ್‍ ಹಾಗೂ ಶಿವಾಜಿನಗರದಿಂದ ರೋಶನ್ ಬೇಗ್ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು.

ಶಿವಾಜಿನಗರದಲ್ಲಿ ರೋಶನ್ ಬೇಗ್ ಅವರಿಗೆ ಟಿಕೆಟ್ ನೀಡುವುದಕ್ಕೆ ಸ್ಥಳೀಯ ಮಟ್ಟದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದ್ದರೇ ಶಂಕರ್‍ ತೀರ್ಪಿನ ಪರಾಮರ್ಶೆಗೆ ಒಲವು ತೋರಿದ್ದಾರೆ. ಬಹುಶಃ ಈ ಕಾರಣಗಳಿಂದಲೇ ಇಬ್ಬರನ್ನೂ ಬಿಜೆಪಿ ಸದ್ಯಕ್ಕೆ ದೂರವಿಟ್ಟಿದೆ ಎನ್ನಲಾಗಿದೆ.

ಹೊಸಕೋಟೆಯಿಂದ ನಾಗರಾಜ್, ಹುಣಸೂರು, ಕೆಆರ್‍ ಪೇಟೆಯಿಂದ ನಾರಾಯಣ ಗೌಡ ಹಾಗೂ ಹುಣಸೂರಿನಿಂದ ವಿಶ್ವನಾಥ್ ಅವರಿಗೇ ಟಿಕೆಟ್ ನೀಡಲಾಗಿದೆ. ಹೀಗಾಗಿ ಹುಣಸೂರಿಗೆ ಬೇರೊಬ್ಬ ಅಭ್ಯರ್ಥಿ ಬರಬಹುದು ಎಂಬ ಅನುಮಾನಗಳಿಗೆ ತೆರೆ ಬಿದ್ದಿದೆ.

ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಅಥಣಿ ಕ್ಷೇತ್ರದಿಮದ ಮಹೇಶ್ಕುಮಟಳ್ಳಿ ಅವರಿಗೆ ಮಣೆ ಹಾಕುವ ಮೂಲಕ ಬಿಜೆಪಿ ಡಿಸಿಎಂ ಲಕ್ಷ್ಮಣ ಸವದಿ ಅವರ ಆಸೆಗೆ ತಣ್ಣಿರು ಎರಚಿದೆ. ಏನೇ ಪ್ರಯತ್ನ ನಡೆಸಿದರೂ ಸವದಿ ಈ ಕ್ಷೇತ್ರದಿಂದ ಮರು ಆಯ್ಕೆ ಬಯಸಲು ಅವಕಾಶ ಗಿಟ್ಟಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...