bjp backtracks ಅಲ್ಪಮತದ ಸರಕಾರ: ವರ್ಷದಲ್ಲಿ ಎರಡು ಬಾರಿ ಬಿಜೆಪಿಗೆ ಮುಖಭಂಗ

bjp backtracks
karnataka cm yediyurappa and devendra fadnavis

bjp backtracks ಕಳೆದ ವರ್ಷ ಕರ್ನಾಟಕ, ಈಗ ಮಹಾರಾಷ್ಟ್ರದಲ್ಲಿ ಕೈಸುಟ್ಟುಕೊಂಡ ಬಿಜೆಪಿ

ಬೆಂಗಳೂರು: ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವಿಸ್ ( bjp backtracks ) ರಾಜೀನಾಮೆ ನೀಡುವುದರೊಮದಿಗೆ ಬಹುಮತದ ಖಾತರಿ ಇಲ್ಲದೇ ಸರಕಾರ ರಚನೆಗೆ ಮುಂದಾಗಿ ಬಿಜೆಪಿ ವರ್ಷದಲ್ಲಿ ಎರಡನೇ ಬಾರಿಗೆ ಕೈಸುಟ್ಟುಕೊಂಡಿದೆ.

ಇದನ್ನೂ ಓದಿ: ಬಹುಮತ ಸಾಬೀತಿಗೆ ಮುನ್ನವೇ ಮಹಾರಾಷ್ಟ್ರ ಸರಕಾರ ಪತನ

ಕಳೆದ ವರ್ಷ ಕರ್ನಾಟಕದಲ್ಲಿ ಬಹುಮತ ಇಲ್ಲದಿದ್ದರೂ ಸರಕಾರ ರಚಿಸಿದ್ದ ಬಿಜೆಪಿ ಕೇವಲ ಕೆಲವೇ ದಿನಗಳಲ್ಲಿ ವಿಶ್ವಾಸಮತ ಗಿಟ್ಟಿಸಿಕೊಳ್ಳಲಾಗದೇ ಸಿಎಂ ಸ್ಥಾನಕ್ಕೆ ಬಿಎಸ್ ಯಡಿಯೂರಪ್ಪ ಅವರು ರಾಜೀನಾಮೆ ನೀಡುವಂತಾಗಿತ್ತು.

ಈಗ ಮಹಾರಾಷ್ಟ್ರದಲ್ಲಿ ಸಹ ಬಹುಮತ ಇಲ್ಲದಿದ್ದರೂ ಅಜಿತ್ ಪವಾರ್‍ ಅವರ ಮಾತನ್ನು ನಂಬಿ ಅವರ ಮೂಲಕ ಬಹುಮತದ ಸಂಖ್ಯಾಬಲಪಡೆದುಕೊಳ್ಳುವ ಉಮೇದಿನಲ್ಲಿ ಕಳೆದ ಶನಿವಾರ ಮುಂಜಾನೆ ತರಾತುರಿಯಲ್ಲಿ ಸರಕಾರ ರಚಿಸಿದ್ದ ಬಿಜೆಪಿ ದೇವೇಂದ್ರ ಫಡ್ನವಿಸ್ ಕೇವಲ ಮೂರೇ ದಿನದಲ್ಲಿ ರಾಜೀನಾಮೆ ನೀಡಿದ್ದಾರೆ.

ಈ ಎರಡೂ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟಿನ ಪಾತ್ರವೂ ಮಹತ್ವದ್ದಾಗಿದೆ. ಕರ್ನಾಟಕದಲ್ಲಿ ಬಹುಮತ ಸಾಬಿತಿಗೆ ಯಡಿಯೂರಪ್ಪನವರಿಗೆ ರಾಜ್ಯಪಾಲರು ಒಂದು ತಿಂಗಳ ಕಾಲಾವಕಾಶ ನೀಡಿದ್ದರು. ಆದರೆ ಸುಪ್ರೀಂ ಕೋರ್ಟ್‌ ಮಧ್ಯಪ್ರವೇಶ ಮಾಡಿ ತುರ್ತು ವಿಶ್ವಾಸಮತ ಯಾಚನೆಗೆ ನಿರ್ದೇಶನ ನೀಡಿತ್ತು.

ಮಹಾರಾಷ್ಟ್ರದಲ್ಲಿ ಸಹ ಬಹುಮತ ಸಾಬೀತಿಗೆ ಫಡ್ನವಿಸ್ ಅವರಿಗೆ ರಾಜ್ಯಪಾಲರು ಒಂದು ವಾರದ ಕಾಲಾವಕಾಶ ನೀಡಿದ್ದರಾದರೂ ಸುಪ್ರೀಂ ಕೋರ್ಟ್‌ ಅದನ್ನು ಮೊಟಕುಗೊಳಿಸಿ ಬುಧವಾರವೇ ವಿಶ್ವಾಸಮತ ತೆಗೆದುಕೊಳ್ಳುವಂತೆ ಫಡ್ನವಿಸ್ ಸರಕಾರಕ್ಕೆ ಆದೇಶ ನೀಡಿತ್ತು.

ಇಷ್ಟೇ ಅಲ್ಲದೇ ಎರಡೂ ಬಾರಿಯೂ ಬಿಜೆಪಿಯ ದಿಲ್ಲಿ ನಾಯಕತ್ವ ಮಧ್ಯಪ್ರವೇಶ ಮಾಡಿ ರಾಜೀನಾಮೆ ನೀಡುವಂತೆ ಸಿಎಂ ಸ್ಥಾನದಲ್ಲಿದ್ದವರಿಗೆ ಕಡೆಯ ಕ್ಷಣದಲ್ಲಿ ಸೂಚನೆ ರವಾನಿಸಿತ್ತು.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...