bengaluru police ಬೆಂಗಳೂರಿನಲ್ಲಿ ನಿರ್ಭಯರಾಗಿರಿ, ನಾವಿದ್ದೇವೆ: ಮಹಿಳೆಯರಿಗೆ ಕಮಿಷನರ್ ಅಭಯ

bengaluru police
bengaluru commissioner bhaskar rao

bengaluru police ಸಂಕಷ್ಟದ ಕರೆಗೆ ಕೇವಲ 7 ಕ್ಷಣಗಳಲ್ಲಿ ಸ್ಪಂದನೆ ಎಂದು ಕಮಿಷನರ್ ಭಾಸ್ಕರ್ ರಾವ್

ಬೆಂಗಳೂರು: ಹೈದರಾಬಾದಿನಲ್ಲಿ ವೈದ್ಯೆಯ ಅಮಾನುಷ ( bengaluru police )  ಹತ್ಯಾಚಾರದ ಹಿನ್ನೆಲೆಯಲ್ಲಿ ಬೆಂಗಳೂರಿನ ಮಹಿಳೆಯರಿಗೆ ಪೊಲೀಸ್ ಕಮಿಷನರ್‍ ಸಂಪೂರ್ಣ ಭದ್ರತೆಯ ಆಶ್ವಾಸನೆ ನೀಡಿದ್ದಾರೆ.

ಇದನ್ನೂ ಓದಿ: ಚುನಾವಣಾ ಪ್ರಚಾರ: ಕಾಂಗ್ರೆಸ್‌ನಲ್ಲಿ ಡಿಕೆಶಿಗೆ ಭಾರೀ ಡಿಮಾಂಡ್

ಈ ಬಗ್ಗೆ ಟ್ವೀಟ್ ಮಾಡಿರುವ ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಸಂಕಷ್ಟದ ಕರೆಗಳಿಗೆ ಪೊಲೀಸರು ಕೆಲವೇ ಕ್ಷಣಗಳಲ್ಲಿ (7 ಸೆಕೆಂಡ್) ಸ್ಪಂದಿಸುತ್ತಾರೆ, ಅಲ್ಲದೇ ಎಸೆಎಎಂಎಸ್‌ ಕಳುಹಿಸಲಾಗುತ್ತದೆ. ನಿಮ್ಮ ಜೊತೆ ನಾವಿದ್ದೇವೆ ಎಂದು ಭರವಸೆ ನೀಡಿದ್ದಾರೆ.

ತೆಲಂಗಾಣದ ಅಮಾನವೀಯ ಅಪರಾಧ ಪ್ರಕರಣದ ಹಿನ್ನೆಲೆಯಲ್ಲಿ ರಾಜ್ಯದ ರಾಜಧಾನಿ ಬೆಂಗಳುರಿನಲ್ಲಿ ಮಹಿಳೆಯರ ಸರುಕ್ಷತೆಗೆ ನಾವು ಕಟಿಬದ್ಧರಾಗಿದ್ದೇವೆ. ಯಾವುದೇ ಸಂಕಷ್ಟದ ಕರೆ ಬಂದರೂ ತಕ್ಷಣ ಸ್ಪಂದಿಸುವುದೇ ಅಲ್ಲದೇ ಅಪರಾಧಿಗಳನ್ನು ಮಟ್ಟಹಾಕಲು ನಾವು ಸಿದ್ಧ ಎಂದು ಭಾಸ್ಕರ ರಾವ್ ಹೇಳಿದ್ದಾರೆ,

ಮಹಿಳೆಯರ ಸುರಕ್ಷತೆಗಾಗಿಯೇ ಪ್ರತ್ಯೇಕ ವಿಭಾಗವನ್ನು ರಚಿಸಲಾಗಿದ್ದು ಅದು ಮಹಿಳೆಯರ ಸುರಕ್ಷತೆಗಾಗಿಯೇ ದುಡಿಯಲಿದೆ. ಈ ವಿಭಾಗದಲ್ಲಿ ಸಂಪೂರ್ಣವಾಗಿ ಮಹಿಳಾ ಅಧಿಕಾರಿಗಳೇ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಈ ಮಧ್ಯೆ ಸಂಕಷ್ಟದ ಸಮಯದಲ್ಲಿ ನೆರವಾಗಲೆಂದೇ ಮಹಿಳೆಯರಿಗೆ ಸುರಕ್ಷಾ ಮೊಬೈಲ್ ಆಪ್ ಸಿದ್ಧಪಡಿಸಲಾಗಿದ್ದು, ಅದರ ಪುರ್ಣ ಪ್ರಯೋಜನ ಪಡೆದುಕೊಳ್ಳುವಂತೆ ಬೆಂಗಳುರು ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...