ban pfi ಪಾಪುಲರ್ ಫ್ರಂಟ್ ನಿಷೇಧಕ್ಕೆ ಮುಂದಾದ ಯುಪಿ ಸಿಎಂ ಯೋಗಿ

ban pfi
up cm yogi adityanath

ban pfi  ಕೂಡಲೇ ಪಿಎಫ್‌ಐ ನಿಷೇಧಕ್ಕೆ ಕೇಂದ್ರಕ್ಕೆ ಪತ್ರ ಬರೆದ ಯೋಗಿ ಸರಕಾರ

ಲಖನೌ: ವಿವಾದಿತ ಫ್ರಂಟ್ ಆಫ್ ಇಂಡಿಯಾ ಸಂಘಟನೆಯನ್ನು ( ban pfi  ) ನಿಷೇಧಿಸಲು ಉತ್ತರ ಪ್ರದೇಶದ ಯೋಗಿ ಸರಕಾರ ಮುಂದಡಿ ಇಟ್ಟಿದೆ. ಪೌರತ್ವ ವಿರೋಧಿ ಪ್ರತಿಭಟನೆಗಳಲ್ಲಿ ಪಾಪುಲರ್‍ ಫ್ರಂಟ್ ಸಂಗಟನೆಯ ಕುಮ್ಮಕ್ಕು ಇರುವುದು ಗೊತ್ತಾಗಿರುವ ಹಿನ್ನೆಲೆಯಲ್ಲಿ ಅದನ್ನು ನಿಷೇಧಿಸಲು ಯೋಗಿ ಸರಕಾರ ಮುಂದಾಗಿದೆ.

ಇದನ್ನೂ ಓದಿ: ಹೊಸ ವರ್ಷಕ್ಕೆ ಜನ ಸಾಮಾನ್ಯರ ಬದುಕು ದುಬಾರಿ

ಈ ಸಂಬಂಧ ಕೇಂದ್ರ ಗೃವಹ ಇಲಾಖೆಗೆ ಅಧಿಕೃತ ಪತ್ರ ಬರೆದಿರುವ ಯೋಗಿ ಆದಿತ್ಯನಾಥ್ ಸರಕಾರವು ತಕ್ಷಣವೇ ಪಾಪುಲರ್‍ ಫ್ರಂಟ್ ಅನ್ನು ನಿಷೇಧೀಸುವಂತೆ ಒತ್ತಾಯಪೂರ್ವಕ ಮನವಿ ಮಾಡಿಕೊಂಡಿದೆ. ಅಲ್ಲದೇ ಇದ್ಕೆ ಬೇಕಾದ ಪುರಾವಚೆಗಳನ್ನು ಒದಗಿಸಿದೆ ಎನ್ನಲಾಗಿದೆ.

 

ಪಿಎಫ್‌ಐ ಸದಸ್ಯರು ಪೌರತ್ವ ವಿರೋಧಿಸಿ ನಡೆದ ಪ್ರತಿಭಟನೆ ಮತ್ತು ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ್ದಾರೆ ಎಂದು ಯುಪಿ ಪೊಲೀಸ್ ಮಹಾನಿರ್ದೇಶಕ ಒಪಿ ಸಿಂಗ್ ತಮ್ಮ ವರದಿಯಲ್ಲಿ ತಿಳಿಸಿರುವುದನ್ನೇ ಮುಂದಿಟ್ಟುಕೊಂಡು ನಿಷೇಧಕ್ಕೆ ಯುಪಿ ಸರಕಾರ ಮುಂದಾಗಿದೆ.

ಉತ್ತರ ಪ್ರದೇಶ ಆರು ಜಿಲ್ಲೆಗಳಲ್ಲಿ ಪೌರತ್ವ ವಿರೋಧಿಸಿ ನಡೆದ ಪ್ರತಿಭಟನೆ ಮತ್ತು ಹಿಂಸಾಚಾರದಲ್ಲಿ ಸುಮಾರು 20 ಮಂದಿ ಅಸು ನೀಗಿದ್ದರು. ಗಲಭೆ ಸಂದರ್ಭದಲ್ಲಿ ಉಂಟಾದ ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟವನ್ನು ಗಲಭೆಕೋರರಿಂದಲೇ ವಸೂಲು ಮಾಡಲು ಸಹ ಯೋಗಿ ಸರಕಾರ ಈಗಾಗಲೇ ಆದೇಶ ಹೊರಡಿಸಿದೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...