baig backtracks ಕಣದಿಂದ ಹಿಂದೆ ಸರಿದ ಬೇಗ್, ಜೆಡಿಎಸ್‌ಗೆ ಸಪೋರ್ಟ್‌?

baig backtracks
former minister and congress mla roshan baig

baig backtracks ಶಿವಾಜಿನಗರದಲ್ಲಿ ಪಕ್ಷೇತರ ಸ್ಪರ್ಧೆಯಿಂದ ಹಿಂದಡಿ ಇಟ್ಟ ರೋಶನ್ ಬೇಗ್

ಬೆಂಗಳೂರು: ಕಡೆಯ ಕ್ಷಣದಲ್ಲಿ ಕೈಕೊಟ್ಟ ಬಿಜೆಪಿ ನಿಲುವಿನಿಂದ ( baig backtracks) ಬೇಸತ್ತು ಶಿವಾಜಿನಗರ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧೆ ಮಾಡುವುದಾಗಿ ಹೇಳಿದ್ದ ಅನರ್ಹ ಶಾಸಕ ರೋಶನ್ ಬೇಗ್ ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ.

ಇದನ್ನೂ ಓದಿ: ಮಾರಣಾಂತಿಕ ಹಲ್ಲೆ: ಶಾಸಕ ತನ್ವೀರ್ ಸೇಠ್‍ಗೆ ಶಸ್ತ್ರಚಿಕಿತ್ಸೆ, ಪ್ರಾಣಾಪಾಯದಿಂದ ಪಾರು

ಸೋಮವಾರ ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾಗಿದ್ದು, ತಾವು ಚುನಾವಣಾ ಕಣದಿಂದ ಹಿಂದೆ ಸರಿಯುತ್ತಿರುವುದಾಗಿ ರೋಶನ್ ಬೇಗ್ ಹೇಳಿದ್ದಾರೆ. ಬೇಗ್ ಅವರ ಈ ನಿರ್ಧಾರದ ಹಿಂದ ಸಾಕಷ್ಟು ರಾಝಕೀಯ ಲೆಕ್ಕಾಚಾರಗಳಿದ್ದು, ಅವರು ಜೆಡಿಎಸ್‌ ಅಭ್ಯರ್ಥಿಯನ್ನು ಪರೋಕ್ಷವಾಗಿ ಬೆಂಬಲಿಸುವ ಸಾಶ್ಯತೆ ಇದೆ.

ಕಾಂಗ್ರೆಸ್‌ನಿಂದ ದೂರವಾಗಿ, ಬಿಜೆಪಿಗೆ ಬೇಡವಾಗಿ ಒಂದು ರೀತಿಯ ಅತಂತ್ರ ಸ್ಥಿತಿಯಲ್ಲಿದ್ದ ರೋಶನ್ ಬೇಗ್ ಭಾನುವಾರ ಹಾಸನಕ್ಕೆ ತೆರಳಿ ಜೆಡಿಎಸ್ ನಾಯಕರ ಜೊತೆ ರಹಸ್ಯ ಮಾತುಕತೆ ನಡೆಸಿದ್ದರು. ಆ ಮಾತುಕತೆ ಪರಿಣಾಮವಾಗಿಯೇ ಅವರು ಹಿಂದೆ ಸರಿದಿದ್ದಾರೆಂದು ಎಂದು ಹೇಳಲಾಗುತ್ತಿದೆ.

ಮೈತ್ರಿ ಸರಕಾರ ಪತನ ಸಂದರ್ಭದಲ್ಲಿ ರಾಜೀನಾಮೆ ನೀಡಿದ್ದ ರೋಶನ್ ಬೇಗ್ ಅವರನ್ನು ಅಂದಿನ ಸ್ಪೀಕರ್‍ ರಮೇಶ್ ಕುಮಾರ್‍ ಅನರ್ಹಗೊಳಿಸಿದ್ದರು. ಅನರ್ಹರು ಚುನಾವಣೆಗೆ ಸ್ಪರ್ಧೆ ಮಾಡಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದ ಬಳಿಕ ಉಳಿದ ಅನರ್ಹರನ್ನು ಸೇರಿಸಿಕೊಂಡ ಬಿಜೆಪಿ ಬೇಗ್ ಅವರನ್ನು ಹೊರಗಿಟ್ಟಿತ್ತು.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...