ayyappa devotee ಶಬರಿಮಲೆ: ಅಯ್ಯಪ್ಪ ಭಕ್ತೆಯ ಮೇಲೆ ’ಖಾರದ ಪುಡಿ’ ಆಕ್ರಮಣ

ayyappa devotee
sabarimala ayyappa temple

ayyappa devotee ಅಯ್ಯಪ್ಪನ ಸನ್ನಿಧಿಗೆ ತೆರಳಲು ಬಂದ ಬಿಂದು ಮೇಲೆ ಮೆಣಸಿನ ಪುಡಿ ಅಟ್ಯಾಕ್

ತಿರುವನಂತಪುರ: ಅಯ್ಯಪ್ಪನ ದರ್ಶನಕ್ಕಾಗಿ ಶಬರಿಮಲೆಗೆ ( ayyappa devotee ) ಆಗಮಿಸಿದ ಮಹಿಳೆಯ ಮೇಲೆ ಪರಂಪರೆಯ ನಂಬಿಕಸ್ತ ಭಕ್ತರ ಖಾರದ ಪುಡಿ ಎರಚಿ ಅವರನ್ನು ದೇವಾಲಯ ಪ್ರವೇಶಿಸದಂತೆ ತಡೆದಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಪ್ರವಾಹ: 10 ಸಾವಿರ ರೂ ಪರಿಹಾರ ಕೊಟ್ಟ ಪಾಲಿಕೆ

ಕಳೆದ ವರ್ಷ ಅಯ್ಯಪ್ಪನ ದರ್ಶನ ಪಡೆದ ಮಹಿಳಾ ಭಕ್ತರ ಸಾಲಿನಲ್ಲಿ ಮೊದಲಿಗರಾಗಿದ್ದ ಬಿಂದು ಅಮ್ಮಿಣಿ ಮತ್ತು ಕಾರ್‍ಯಕರ್ತೆ ತೃಪ್ತಿ ದೇಸಾಯಿ ಶಬರಿಮಲೆ ದೇವಾಲಯಕ್ಕೆ ಪ್ರವೇಶಿಸಲು ಪ್ರಯತ್ನಿಸಿದಾಗ ಅಲ್ಲಿದ್ದ ಪುರುಷ ಭಕ್ತರು ಬಿಂದು ಮೇಲೆ ಮೆಣಸಿನ ಪುಡಿ ಎರಚಿ ತಡೆದಿದ್ದಾರೆ.

ಬಳಿಕ ಮೆಣಸಿನ ಪುಡಿ ಆಕ್ರಮಣಕ್ಕೆ ತುತ್ತಾದ ಮಹಿಳೆಯನ್ನು ಸ್ಥಳೀಯ ಪೊಲೀಸರು ಆಸ್ಪತ್ರೆಗೆ ಕರೆದೊಯ್ದು ನಂತರ ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.

ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಮಂಗಳವಾರ ಏನೇ ಆದರೂ ದೇವಾಲಯ ಪ್ರವೇಶಿಸಿಯೇ ಸಿದ್ಧ ಎಂದು ತಮ್ಮ ಐವರು ಸಹಚರರ ಜೊತೆ ಬಂದಿರುವ ತೃಪ್ತಿ ದೇಸಾಯಿ ಪಣ ತೊಟ್ಟಿದ್ದಾರೆ.

ಶಬರಿಮಲೆಗೆ ಮಹಿಳೆಯರ ಪ್ರವೇಶ ಆದೇಶದ ಮರು ಪರಿಶೀಲನೆಗೆ ಒಪ್ಪಿರುವ ಸುಪ್ರೀಂ ಕೋರ್ಟು ಹಿಂದಿನ ಆದೇಶಕ್ಕೆ ತಡೆ ನೀಡಿಲ್ಲ. ಆದಾಗ್ಯೂ ದೇವಾಲಯ ಪ್ರವೇಶಿಸುವ ಭಕ್ತೆಯರಿಗೆ ಭದ್ರತೆ ನೀಡಲು ಸಾಧ್ಯವಿಲ್ಲ ಎಂದು ಕೇರಳ ಸರಕಾರ ಸ್ಪಷ್ಟಪಡಿಸಿದೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...