ayushman ಆಯುಷ್ಮಾನ್‌ಗೆ ಮಾತುಕೊಟ್ಟ ಶಿವಣ್ಣ

ayushman
shivanna in ayushman bhava

ayushman ನವೆಂಬರ್‌ನಲ್ಲಿ ಆಯುಷ್ಮಾನ್ ಭವ ಚಿತ್ರ ತೆರೆಗೆ ತರಲು ಸಿದ್ಧತೆ

ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವಣ್ಣ ಅಭಿನಯದ ( ayushman ) ಆಯುಷ್ಮಾನ ಭವ ಚಿತ್ರದ ಮಾತಿನ ಜೋಡಣೆ ಕಾರ್‍ಯ ಪೂರ್ಣಗೊಂಡಿದ್ದ ನವೆಂಬರ್‌ನಲ್ಲಿ ತೆರೆಗೆ ಬರುವ ಸಿದ್ಧತೆಯಲ್ಲಿದೆ.

ಇದನ್ನೂ ಓದಿ: ಆ್ಯಂಗ್ರಿ ಯಂಗ್ ಮ್ಯಾನ್ ಅಮಿತಾಭ್ ಮುಡಿಗೆ ‘ದಾದಾ’ ಗೌರವ

ಹೆಸರಾಂತ ನಿರ್ದೇಶಕ ಪಿ. ವಾಸು ನಿದೇರ್ಶನದ ಈ ಚಿತ್ರದ ತಮ್ಮ ಪಾತ್ರದ ಟಬ್ಬಿಂಗ್ ಕೆಲಸವನ್ನು ಶಿವಣ್ಣ ಪೂರೈಸಿದ್ದಾರೆ. ಬಿಡುಗಡೆ ಪೂರ್ವದ ಉಳಿದ ಕೆಲಸಗಳೂ ಲಗುಬಗೆಯಿಂದ ಸಾಗಿದ್ದು ಅಂದುಕೊಂಡಂತೆ ಚಿತ್ರವನ್ನು ಕನ್ನಡ ಮಾಸದಲ್ಲಿ ತೆರೆಗೆ ತರುವ ಸಿದ್ಧತೆಯಲ್ಲಿದೆ ಚಿತ್ರತಂಡ.

ವಾಸು ಹಾಗೂ ಶಿವಣ್ಣ ಕಾಂಬಿನೇಶನ್‌ನಲ್ಲಿ ಬಂದ ಶಿವಲಿಂಗ ಚಿತ್ರ ಹಿಟ್‌ ಆಗಿತ್ತು. ಈಗ ಮತ್ತೆ ಆ ಜೋಡಿಯ ಸಿನಿಮಾ ಬರುತ್ತಿರುವುದರಿಂದ ಸಿನಿಮಾ ನಿರೀಕ್ಷೆ ಹೆಚ್ಚಾಗಿದೆ. ಅಲ್ಲದೇ ಇದು ಇಡೀ ಕುಟುಂಬ ಕುಳಿತು ನೋಡಬಹುದಾದ ಕೌಟುಂಬಿಕ ಚಿತ್ರ ಎಂದು ಹೇಳಲಾಗಿದೆ.

ಇತ್ತೀಚಿನ ದಿನಗಳಲ್ಲಿ ಹೊಡಿಬಡಿ ಪಾತ್ರಗಳಲ್ಲಿಯೇ ಹೆಚ್ಚು ಕಾಣಿಸಿಕೊಂಡಿದ್ದ ಶಿವಣ್ಣ ಈ ಚಿತ್ರದ ಮೂಲಕ ಮತ್ತೆ ಫ್ಯಾಮಿಲಿ ಆಧಾರಿತ ಕಥೆಯತ್ತ ಹೊರಳಿದ್ದಾರೆ. ಇದು ದ್ವಾರಕೀಶ್ ಬ್ಯಾನರಿನಲ್ಲಿ ಬರುತ್ತಿರುವ 52ನೇ ಚಿತ್ರವಾಗಿದೆ.

ಕರುನಾಟ ಕುಳ್ಳ ದ್ವಾರಕೀಶ್ ಅವರ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದಲ್ಲಿ ಶಿವಣ್ಣ ಅವರಿಗೆ ನಾಯಕಿಯಾಗಿ ರಚಿತಾ ರಾಮ್ ಕಾಣಿಸಿಕೊಳ್ಳಲಿದ್ದಾರೆ. ನಿಧಿ ಸುಬ್ಬಯ್ಯ, ಪ್ರಭು,ಸುಹಾಸಿನಿ ಮುಂತಾದವರು ವಿಭಿನ್ನ ಪಾತ್ರಗಳ ಮೂಲಕ ಶಿವಣ್ಣನಿಗೆ ಸಾಥ್ ನೀಡಲಿದ್ದಾರೆ

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...