ayodhya directive ಅಯೋಧ್ಯೆ ತೀರ್ಪು: ಶಾಂತಿ ಕಾಪಾಡಲು ರಾಜ್ಯಕ್ಕೆ ಕೇಂದ್ರದ ಎಚ್ಚರಿಕೆ

timeline
hearing on ayodya dispute ends in supreme court

ayodhya directive ಶಾಂತಿ ಸುವ್ಯವಸ್ಥೆ ಕದಡದಂತೆ ಸರ್ವಕ್ರಮಕ್ಕೆ ಸೂಚನೆ

ಹೊಸದಿಲ್ಲಿ: ಅಯೋಧ್ಯೆ ತೀರ್ಪಿಗೆ ದಿನಗಳನೆ ( ayodhya directive ) ಆರಂಭವಾಗುತ್ತಿದ್ದಂತೆಯೇ ದೇಶಾದ್ಯಂತ ಕುತೂಹಲ, ತವಕ ಹೆಚ್ಚಾಗುತ್ತಿದ್ದು ಪರಿಸ್ಥಿತಿಯ ಮೇಲೆ ಹದ್ದಿನ ಕಣ್ಣಿಡಲು ಖೇಂದ್ರ ಸರಕಾರ ನಿರ್ಧರಿಸಿದೆ.

ಇದನ್ನೂ ಓದಿ: ತಾರಕೇಶ್ವರನಿಗೂ ಹೊಗೆ: ಲಿಂಗಕ್ಕೆ ಮುಸುಕು ಹಾಕಿ ಪೂಜೆ!

ಈ ಸಂಬಂಧ ಶಾಂತಿ ಸುವ್ಯವಸ್ಥೆ ಕದಡದಂತೆ ಸರ್ವ ಕ್ರಮ ಕೈಗೊಳ್ಳಲು ಹಾಗೂ ಕಟ್ಟೆಚ್ಚರದಿಂದರಲು ರಾಜ್ಯ ಸರಕಾರಗಳಿಗೆ ಕೇಂದ್ರ ಗೃಹ ಸಚಿವಾಲಯ ಪತ್ರ ಬರೆದಿದೆ.

ತೀರ್ಪು ಏನೇ ಇರಲಿ ಸಮಾಜಿಕ ನೆಮ್ಮದಿ ಹಾಳು ಮಾಡುವ ಶಕ್ತಿಗಳು ಮೇಲುಗೈ ಸಾಧಿಸದಂತೆ ನೋಡಿಕೊಲ್ಳಲು ಎಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಕೇಂದ್ರ ಸರಕಾರವು ರಾಜ್ಯ ಸರಕಾರಳಿಗೆ ಬರೆದಿರುವ ಪತ್ರದಲ್ಲಿ ಸೂಚಿಸಿದೆ.

ಈ ಮಧ್ಯೆ ತೀರ್ಪು ಪ್ರಕಟಗೊಳ್ಳಲಿರುವ ಹಿನ್ನೆಲೆಯಲ್ಲಿ ಕಳೆದೆರಡು ದಶಕಗಳಿಂದ ಅಯೋಧ್ಯೆಯಲ್ಲಿ ರಾಮ ಮಂದಿರಕ್ಕಾಗಿ ನಡೆಯುತ್ತಿದ್ದ ಕೆತ್ತನೆ ಕೆಲಸಗಳಿಗೆ ವಿಶ್ವ ಹಿಂದೂ ಪರಿಷತ್ತು ವಿರಾಮ ಹಾಕಿದೆ.

ಶಿಲ್ಪಿಗಳು ಕೆಲ ದಿನಗಳ ಮಟ್ಟಿಗೆ ಕತ್ತಿ, ಉಳಿಯನ್ನು ಬದಿಗಿಟ್ಟು ತಮ್ಮ ಸ್ವಂತ ಊರುಗಳಿಗೆ ತೆರಳಿದ್ದಾರೆ. ಬಾಬ್ರಿ ಮಸೀದಿ ಧ್ವಂಸಗೊಂಡ ತದನಂತರದಿಂದಲೂ ಅಯೋಧ್ಯೆಯಲ್ಲಿ ಶಲ್ಪಕಾರ್‍ಯ ಅವ್ಯಾಹತವಾಗಿ ನಡೆದುಕೊಂಡು ಬಂದಿತ್ತು.

ಆಯೋಧ್ಯೆ ತೀಪು ಇನ್ನೊಂದು ವಾರದೊಳಗೆ ಬರುವ ನಿರೀಕ್ಷೆ ಇದ್ದು, ಅಯೊಧ್ಯೆ ಮತ್ತಿತರ ಸೂಕ್ಷ್ಮ ಪ್ರದೇಶಗಳಲ್ಲಿ ನಿಯೋಜನೆಗೆಂದು ಸುಮಾರು 4 ಸಾವರಿ ಯೋಧರನ್ನು ಹೆಚ್ಚುರಿಯಾಗಿ ಉತ್ತರ ಪ್ರದೇಶಕ್ಕೆ ಕೇಂದ್ರ ಸರಕಾರ ಕಳುಹಿಸಿಕೊಟ್ಟಿದೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...