auto sales 20 ವರ್ಷಗಳ ಹಿಂದಿನ ಮಟ್ಟಕ್ಕೆ ಕುಸಿದ ಬೇಡಿಕೆ: ಕಾರು, ಬೈಕು ಕೊಳ್ಳೋರಿಲ್ಲ

auto sales
auto sales in sharp decline

auto sales ಬೇಡಿಕೆ ಇಲ್ಲದೇ ಪಾತಾಳ ಕಾಣುತ್ತಿರುವ ವಾಹನೋದ್ಯಮ

ಹೊಸದಿಲ್ಲಿ: ದೇಶದ ಆರ್ಥಿಕ ಪರಿಸ್ಥಿತಿಗೆ ದ್ಯೋತಕ ಎನ್ನುವಂತೆ ವಾಹನೋದ್ಯಮದ ( auto sales ) ಇಳಿಜಾರು ಪಯಣ ಮುಂದುವರಿದಿದೆ. ಸತತ 10ನೇ ತಿಂಗಳು ವಾಹನೋದ್ಯಮ ತೀವ್ರ ಕುಸಿತ ಕಾಣುತ್ತಿದೆ. ಬೇಡಿಕೆಯಿಲ್ಲದೇ ಉದ್ಯಮ ತೀವ್ರ ಸಂಕಷ್ಟದಲ್ಲಿ ಸಿಲುಕಿದೆ.

ಇದನ್ನೂ ಓದಿ: ದಿಕ್ಕೆಟ್ಟ ಎಕಾನಮಿ: 2 ದಿನ ಬಾಗಿಲು ಬಾಗಿಲು ಬಂದ್ ಮಾಡಿದ ಮಾರುತಿ

ಆಗಸ್ಟ್ ತಿಂಗಳ ಅಂಕಿ-ಸಂಖ್ಯೆ ಬಯಲಾಗಿದ್ದು, ವಾಹನ ಖರೀದಿ ಪ್ರಮಾಣ 20 ವರ್ಷಗಳ ಹಿಂದಿನ ಮಟ್ಟಕ್ಕೆ ಕುಸಿದಿದೆ. ಕಳೆದ 10 ತಿಂಗಳಿಂದ ಕುಸಿತದ ಹಾದಿಯಲ್ಲಿಯೇ ಸಾಗಿರುವ ವಾಹನ ಖರೀದಿ ಪ್ರಮಾಣ ಆಗಸ್ಟ್ ತಿಂಗಳಲ್ಲಿ ಶೇ. 41ಕ್ಕೆ ತಲುಪಿ ತೀವ್ರ ಕುಸಿತ ಕಂಡಿದೆ.

ಕೇಂದ್ರ ಸರಕಾರದ ವತಿಯಿಂದ ಯಾವುದೇ ಉತ್ತೇಜನಕಾರಿ ಕ್ರಮಗಳಿಲ್ಲದೇ ಸೊರಗಿ ಸುಣ್ಣವಾಗಿರುವ ವಾಹನೋದ್ಯಮ ಈ ಪರಿಯ ಬೇಡಿಕೆ ಕುಸಿತವನ್ನು ಇನ್ನು ಹೆಚ್ಚು ದಿನ ತಾಳಿಕೊಳ್ಳುವುದು ಅಸಾಧ್ಯ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಪ್ರಯಾಣಿಕ ಖಾರುಗಳ ಬೇಡಿಕೆ ಶೇ. 41ಕ್ಕೆ ಕುಸಿದಿದ್ದರೇ, ದ್ವಿಚಕ್ರ ವಾಹನಗಳ ಬೇಡಿಕೆ ಸಹ ಪಾತಾಳ ಕಂಡಿದೆ. ಇನ್ನು ಬಹೂಪಯೋಗಿ ವಾಹನಗಳ ಮಾರಾಟದಲ್ಲಿಯೂ ಕುಸಿತ ದಾಖಲಾಗಿದೆ ಎಂದು ಆಗಸ್ಟ್ ತಿಂಗಳ ಮಾರಾಟ ಲೆಕ್ಕ ಹೇಳಿದೆ. 1997-98ರ ನಂತರ ವಾಹನೋದ್ಯಮ ಈ ಪರಿಯ ಕುಸಿತ ಕಂಡಿರಲಿಲ್ಲ.

ಬೇಡಿಕೆ ಕುಸಿತದಿಂದ ಉಂಟಾಗಿರುವ ಪರಿಸ್ಥಿತಿ ನಿಭಾಯಿಸಲು ಕಂಪೆನಿಗಳು ಉತ್ಪಾದನೆಯಲ್ಲಿ ತೀವ್ರ ಕಡಿತ ಮಾಡಿದ್ದು ಇದರಿಂದ ಸಾವಿರಾರು ಮಂದಿ ನಿರುದ್ಯೋಗಿಗಳಾಗಿದ್ದಾರೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೇ ವಾಹನ ತಯಾರಿಕಾ ಕಾರ್ಖಾನೆಗಳು ಶಾಶ್ವತವಾಗಿ ಬೀಗ ಜಡಿದರೂ ಅಚ್ಚರಿಯಿಲ್ಲ ಎಂಬ ಮಾತುಗಳೂ ಕೇಳಿಬರುತ್ತಿವೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...