ashwin fifer ಮೊದಲ ಟೆಸ್ಟ್: ಅಶ್ವಿನ್‌ಗೆ 5, ಮುನ್ನಡೆಯತ್ತ ಭಾರತ

ashwin fifer
indian cricket team

ashwin fifer ಎಲ್ಗಾರ್, ಡಿಕಾಕ್ ಶತಕ, ದಕ್ಷಿಣ ಆಫ್ರಿಕಾ 8/385

ವಿಶಾಖಪಟ್ಟಣ: ಆರಂಭಿಕ ಡೀನ್ ಎಲ್ಗಾರ್ ಹಾಗೂ ಕ್ಷಿಂಟನ್ ಡಿಕಾಕ್ ( ashwin fifer ) ಅವರ ಪ್ರತಿರೊಧದ ನಡುವೆಯೂ ಭಾರತವು ಪ್ರವಾಸಿ ದಕ್ಷಿಣಾ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್‌ನಲ್ಲಿ ಮೊದಲ ಇನಿಂಗ್ಸ್ ಮುನ್ನಡೆ ಪಡೆಯುವತ್ತ ಹೆಜ್ಜೆ ಹಾಕಿದೆ.

ಇದನ್ನೂ ಓದಿ: ಕನ್ನಡಿಗ ಮಾಯಂಕ್ 215, ಆಫ್ರಿಕೆ ತಕಧಿಮಿತ

ವೈಎಸ್ಸಾರ್ ಮೈದಾನದಲ್ಲಿ ಟೆಸ್ಟ್‌ನ ಮೂರನೇ ದಿನದ ಅಂತ್ಯಕ್ಕೆ ದಕ್ಷಿಣ ಆಫ್ರಿಕಾ ತನ್ನ ಮೊದಲ ಸರದಿಯಲ್ಲಿ 8 ವಿಕೆಟ್ ಕಳೆದುಕೊಂಡು 385 ರನ್ ಗಳಿಸಿದ್ದು, ಇನ್ನೂ 117 ರನ್ನುಗಳ ಹಿನ್ನಡೆಯಲ್ಲಿದೆ.

ಪ್ರವಾಸಿಗರ ಈ ಸುಧಾರಿತ ಪ್ರದರ್ಶನಕ್ಕೆ ಆರಂಭ ಆಟಗಾರ ಟೀನ್ ಎಲ್ಗಾರ್‍, ಕೀಪರ್‍ ಡಿಕಾಕ್ ಹಾಗೂ ನಾಯಕ ಡುಪ್ಲೇಸಿಸ್ ಅವರ ಸಮಯೋಚಿತ ಮತ್ತು ಹೊಣೆಯರಿತ ಆಟವೇ ಕಾರಣವಾಯಿತು.

ಕೇವಲ 39 ರನ್ನುಗಳಿಗೆ 3 ವಿಕೆಟ್ ಕಳೆದುಕೊಂಡು ತತ್ತರಿಸಿದ್ದ ತಂಡಕ್ಕೆ ಈ ಮೂವರೂ ಚೇತರಿಕೆ ನೀಡಿದರು. ಎಲ್ಗಾರ್‍ 161 ರನ್ ಗಳಿಸಿದರೆ ಡಿಕಾಕ್ 111 ರನ್ ಕಲೆ ಹಾಕಿದರು. ನಾಯಕ ಡುಪ್ಲೇಸಿಸ್ 55 ರನ್ ಗಳಿಸಿ ನಿರ್ಗಮಿಸಿದರು.

ಭಾರತದ ಪರ ಎಂದಿನಿಂತೆ ತವರಿನಲ್ಲಿ ಅಶ್ವಿನ್ ಮಿಂಚಿದರು. 41 ಓವರ್‍ ಎಸೆದ ಅಶ್ವಿನ್ ಐದು ವಿಕೆಟ್ ಕಬಳಿಸಿದರೇ, ಜೊತೆಗಾರ ರವೀಂದ್ರ ಜಡೇಜಾ ಎರಡು ವಿಕೆಟ್ ಕಿತ್ತರು.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...