arohana 22ಕ್ಕೆ ಅಭ್ಯುದಯ ಸಂಸ್ಥೆಯಿಂದ ಮಕ್ಕಳಿಗಾಗಿ ಆರೋಹಣ-2019 ಪ್ರತಿಭೋತ್ಸವ

arohana
arohana talent hunt

arohana ದುರ್ಬಲ ವರ್ಗದ ಮಕ್ಕಳಿಗಾಗಿ ಅಭ್ಯುದಯ ಸಂಸ್ಥೆಯಿಂದ ಪ್ರತಿಭಾ ಸ್ಪರ್ಧೆ

ಬೆಂಗಳೂರು: ದುರ್ಬಲ ವರ್ಗಗಳ ಮಕ್ಕಳಿಗಾಗಿ ಅಭ್ಯುದಯ ಸಂಸ್ಥೆಯು ವಿಕಸನ ( arohana ) ಶಿಬಿರದ ಭಾಗವಾಗಿ ಆರೋಹಣ-2019 ಪ್ರತಿಭಾ ಸ್ಪರ್ಧೆ ಹಮ್ಮಿಕೊಂಡಿದೆ. ಬೆರಳೆಣಿಕೆಯ ಮಕ್ಕಳಿಂದ ಆರಂಭವಾದ ಈ ಪ್ರಭಾನ್ವೇಷಣಾ ಸ್ಪರ್ಧೆಯಲ್ಲಿ ಈಗ 2000 ಮಕ್ಕಳು ಭಾಗವಹಿಸುತ್ತಿರುವುದು ಸಂಘಟಕರ ಶ್ರಮಕ್ಕೆ ದ್ಯೋತಕವಾಗಿದೆ.

ಇದನ್ನೂ ಓದಿ: ಪೋಷಕರೇ ಹುಶಾರ್‌ ! ಪಬ್‌ಜಿ ಗೇಮ್‌ನಿಂದ ನಿಮ್ಮ ಮಕ್ಕಳನ್ನು ಕಾಪಾಡಿ

ಕೇಶವಕೃಪ ಸಂವರ್ಧನ ಸಮಿತಿಯ ಸೇವಾ ಟ್ರಸ್ಟ್ ಅಭ್ಯುದಯದಿಂದ ಇದೇ ಭಾನುವಾರ (ಡಿ. 22) ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 3ರವರೆಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಗೊಟ್ಟಿಗೆರೆಯ ಭಾಗ್ಯನಗರದಲ್ಲಿರುವ ರಾಮಕೃಷ್ಣ ಸಮಗ್ರ ಶಿಕ್ಷಣ ಕೇಂದ್ರದಲ್ಲ ಈ ಪ್ರತಿಭೋತ್ಸವ ನಡೆಯಲಿದೆ.

ಸಮಾಜದ ದುರ್ಬಲ ವರ್ಗಗಳ ಮಕ್ಕಳಲ್ಲಿ ಸುಪ್ತವಾಗಿರುವ ಪ್ರತಿಭೆಯ ವಿಕಸನಕ್ಕೆ ವೇದಿಕೆ ಕಲ್ಸಪಿಸುವ ಈ ಕಾರ್‍ಯಕ್ಷರಮವನ್ನು ಐಪಿಎಸ್ ಅಧಿಕಾರಿ ರವಿ ಚೆನ್ನಣ್ಣನವರ್‍ ಅವರು ಉದ್ಘಾಟಿಸಲಿದ್ದಾರೆ ಎಂದು ಅಭ್ಯುದಯ ಸಂಸ್ಥೆಯ ಪ್ರಕಟಣೆ ಹೇಳಿದೆ.

ಈ ಪ್ರತಿಭೋತ್ಸವದಲ್ಲಿ ಮಕ್ಕಳೂ ಚಿತ್ರಕಲೆ, ನಾಟಕ, ವಿಜ್ಞಾನ ಪ್ರಯೋಗ, ವಿವಿಧ ಮಾದರಿಗಳ ನಿರ್ಮಾಣ, ಇವೇ ಮುಂತಾದ ವಿಷಯಗಳಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...