arohan ‘ಆರೋಹಣ’ದಲ್ಲಿ ಮಕ್ಕಳ ಪ್ರತಿಭೆಯ ಅನಾವರಣ

arohan

arohan  ಅಭ್ಯುದಯ ಸಂಸ್ಥೆಯ ಸಾರ್ಥಕ ಕಾರ್‍ಯಕ್ರಮ ಆರೋಹಣ-2019

ಬೆಂಗಳೂರು: ದುರ್ಬಲ ವರ್ಗದ ಮಕ್ಕಳಿಗಾಗಿ ಅಭ್ಯುದಯ ಸಂಸ್ಥೆಯಿಂದ ( arohan ) ಹಮ್ಮಿಕೊಳ್ಳಲಾಗಿದ್ದ ಆರೋಹಣ-2019 ಕಾರ್‍ಯಕ್ರಮ ತಮ್ಮಲ್ಲಿ ಸುಪ್ತವಾಗಿರುವ ಪ್ರತಿಭೆಯ ಅನಾವರಣಕ್ಕೆ ಸಾವಿರಾರು ಮಕ್ಕಳಿಗೆ ವೇದಿಕೆ ಕಲ್ಪಿಸಿತ್ತು.

ಇದನ್ನೂ ಓದಿ: ಅಭ್ಯುದಯ ಸಂಸ್ಥೆಯಿಂದ ಮಕ್ಕಳಿಗಾಗಿ ಆರೋಹಣ-2019 ಪ್ರತಿಭೋತ್ಸವ

ಉದ್ಯಾನ ನಗರಿಯ ಸುಮಾರು 2 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ ಮಕ್ಕಳು ಈ ಕಾರ್‍ಯಕ್ರಮದಲ್ಲಿ ಪಾಲ್ಗೊಂಡು ತಮ್ಮ ಪ್ರತಿಭೆಯನ್ನು ಪ್ರದರ್ಶನಕ್ಕಿಟ್ಟಿದ್ದರು. ಹಾಡು, ನಾಟಕ, ನೃತ್ಯ, ಚಿತ್ರಕಲೆ, ವೈಜ್ಞಾನಿಕ ಮಾದರಿಗಳ ತಯಾರಿ… ಹೀಗೆ ವಿವಿಧ ಚಟುವಟಿಕೆಗಳನ್ನು ಈ ಕಾರ್‍ಯಕ್ರಮದಲ್ಲಿ ಅಳವಡಿಸಲಾಗಿತ್ತು.

ಬೆಂಗಳೂರನ ಗೊಟ್ಟಿಗೆರೆ ಪ್ರದೇಶದ ಭಾಗ್ಯನಗರದಲ್ಲಿರುವ ರಾಮಕೃಷ್ಣ ಸಮಗ್ರ ಶಿಕ್ಷಣ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಈ ಕಾರ್‍ಯಕ್ರಮವನ್ನು ಐಪಿಎಸ್ ಅಧಿಕಾರಿ ರವಿ ಚನ್ನಣ್ಣನವರ್ ಅವರು ಉದ್ಘಾಟಿಸಿ ಮಕ್ಕಳಿಗೆ ಶಿಕ್ಷಣದ ಮಹತ್ವ ತಿಳಿಹೇಳಿದರು. ಉತ್ತಮ ಶಿಕ್ಷಣದ ಜೊತೆಗೆ ಸತ್ಪ್ರಜೆಗಳಾಗುವತ್ತ ಗಮನ ಹರಿಸುವಂತೆ ಅವರು ಕಿವಿಮಾತು ಹೇಳಿದರು.

ಸುಂಆರು 500 ಮಂದಿ ಸ್ವಯಂ ಸೇವಾ ಕಾರ್‍ಯಕರ್ತರ ಜೊತೆಗೆ ಓರಾಕಲ್ ಸಂಸ್ಥೆಯಿಮದ ಸುಮಾರು 87 ಮಂದಿ ಹಾಗೂ ಟಾಟಾ ಸ್ಟ್ರೀವ್‌ನ ಸುಮಾರು 25 ಮಂದಿ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರು ಪ್ರತಿಭೋತ್ಸವಸದಲ್ಲಿ ಪಾಲಗೊಂಡಿದ್ದ ಮಕ್ಕಳಿಗೆ ನೆರವವಾದರು.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...