aradhane ದುಬೈನಲ್ಲಿ ಅದ್ಧೂರಿಯ ರಾಯರ ಆರಾಧನೆ

aradhane
guru rayara vrindavana

aradhane ಸಾಗರದಾಚೆಗೂ ಹರಡಿದ ರಾಯಕ ಭಕ್ತಿ, ಬೆಂಗಳೂರಿನ ರಾಯರ ಭಕ್ತ ಸರೇಂದ್ರ ಆಯೋಜನೆ

ದುಬೈ: ಮಂತ್ರಾಲಯದ ಗುರು ರಾಘವೇಂದ್ರ ಮಹಿಮೆ ಅಪಾರ. ಪ್ರತಿವರ್ಷ ( aradhane ) ಬರುವ ರಾಯರ ಆರಾಧನೆ ಭಕ್ತರಲ್ಲಿ ನೀಡುವ ಅನುಭೂತಿಯೇ ಬೇರೆ. ಇದಕ್ಕೆ ನಾಡು-ಸೀಮೆಯ ಹಂಗಿಲ್ಲ. ಹಾಗೆಯೇ ಈ ಬಾರಿ ಸಾಗರದಾಚೆಯ ದುಬೈನಲ್ಲಿ ಸಹ ರಾಯರ ಆರಾಧನೆ ಶ್ರದ್ಧಾಭಕ್ತಿ ಪೂರಕವಾಗಿ ಅದ್ಧೂರಿಯಾಗಿ ನಡೆದಿದೆ.

ಇದನ್ನೂ ಓದಿ: ಕಣ್ಮನ ಸೆಳೆಯುತ್ತಿರುವ ಶಿರಡಿ ಸಾಯಿ ನಿಜರೂಪದ ಮೇಣದ ಪ್ರತಿಮೆ

ಮೂಲತಃ ಬೆಂಗಳೂರಿನವರಾದ ಸುರೇಂದ್ರ ಬ್ಯಾಂಕ್ ಉದ್ಯೋಗಿಯಾಗಿ ಹಲವಾರು ವರ್ಷಗಳಿಂದ ದುಬೈ‌ನಲ್ಲಿ ನೆಲೆಸಿದ್ದಾರೆ. ಅವರು ಶ್ರೀ ರಾಘವೇಂದ್ರ ರಾಯರ ಪರಮಭಕ್ತರಾಗಿದ್ದು. ಪ್ರತಿವರ್ಷ ರಾಯರ ಆರಾಧನೆ ತಪ್ಪದೇ ನೆರವೇರಿಸಿಕೊಂಡು ಬಂದಿದ್ದಾರೆ.

aradhane
surendra

ಕಟ್ಟಾ ಮುಸಲ್ಮಾನ್ ಸಾಂಪ್ರದಾಯಿಕ ದೇಶವಾದ ಅರಬ್‌ನಲ್ಲಿ ಮೂರ್ತಿಪೂಜೆ ನಿಷಿದ್ಧವಿದ್ದೂ, ಅವೆಲ್ಲ ಕಟ್ಟಳೆಯನ್ನು‌ ಮೀರಿ ಪ್ರತಿವರ್ಷ ದೈಬೈನಲ್ಲಿ ನೆಲೆಸಿರುವ ರಾಯರ ಭಕ್ತರನ್ನು ಆಹ್ವಾನಿಸಿ ಅದ್ಧೂರಿಯಾಗಿ ರಾಯರ ಪೂಜೆ, ಸ್ಮರಣೆ,‌ ಪ್ರಸಾದ ನೀಡುತ್ತಾ ಬಂದಿದ್ದಾರೆ.

ಪ್ರತಿ ಸಾಳಿನಂತೆಯೇ ಈ ವರ್ಷವೂ ರಾಯರ ಆರಾಧನೆಯನ್ನು ಅಷ್ಟೇ ವಿಜೃಂಭಣೆಯಿಂದ ಸುರೇಂದ್ರ ಮತ್ತವರ ಬಳಗ ಆಚರಿಸಿತು.

ಇದರಿಂದಾಗಿ ದೂರದ ದುಬೈನಲ್ಲಿ ಸಹ ಒಂದು ರೀತಿಯ ಹಬ್ಬದ ವಾತಾವರಣ ಮನೆ ಮಾಡಿತ್ತು.